ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಡೀಮ್ಡ್ ಯುನಿವರ್ಸಿಟಿ ಕಲ್ಪನೆಯನ್ನೇ ರದ್ದುಗೊಳಿಸಲಿದೆ ಕೇಂದ್ರ (deemed university | India | Kapil Sibal | Supreme Court)
Bookmark and Share Feedback Print
 
ದೇಶದ 44 ಡೀಮ್ಡ್ ಯುನಿವರ್ಸಿಟಿಗಳ ಮಾನ್ಯತೆಯನ್ನು ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟಿಗೆ ಕೇಂದ್ರ ಸರಕಾರ ಅಫಿದಾವತ್ ಸಲ್ಲಿಸಿದ ಬೆನ್ನಿಗೆ ಭಾರತದಲ್ಲಿನ ಡೀಮ್ಡ್ ಯುನಿವರ್ಸಿಟಿ ಕಲ್ಪನೆಯನ್ನೇ ತೊಡೆದು ಹಾಕಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ತಿಳಿಸಿದ್ದಾರೆ.

ಡೀಮ್ಡ್ ಯುನಿವರ್ಸಿಟಿಗಳನ್ನು ಕೊನೆಗೂ ರದ್ದು ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಶೀಘ್ರದಲ್ಲೇ ದೇಶದಲ್ಲಿನ ಡೀಮ್ಡ್ ವಿಶ್ವವಿದ್ಯಾಲಯಗಳ ಕಲ್ಪನೆಗಳು ಮರೆಯಾಗಲಿದ್ದು, ಇದು ಬದಲಾವಣೆಯ ಒಂದು ಭಾಗವಾಗಿದೆ. ಅದಕ್ಕೆ ಅಗತ್ಯವಿರುವ ನಿಯಮಗಳನ್ನು ರೂಪಿಸಲಾಗುತ್ತದೆ ಎಂದು ಸಾಮಾಜಿಕ ಕ್ಷೇತ್ರದ ಸಮಸ್ಯೆಗಳ ಕುರಿತ 10ನೇ ಸಂಪಾದಕರ ಸಂವಾದದಲ್ಲಿ ಪಾಲ್ಗೊಂಡಿದ್ದ ಸಿಬಲ್ ಹೇಳಿದ್ದಾರೆ.
PTI


ಡೀಮ್ಡ್ ಯುನಿವರ್ಸಿಟಿಗಳಲ್ಲಿನ ವಿದ್ಯಾರ್ಥಿಗಳು ತೊಂದರೆಗೊಳಗಾಗುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಸಚಿವರು ಸ್ಪಷ್ಟಪಡಿಸಿದ್ದಾರೆ. ತಾಂತ್ರಿಕವಾಗಿ ನಾವು ಯಾವುದೇ ಡೀಮ್ಡ್ ಯುನಿವರ್ಸಿಟಿಯನ್ನು ರದ್ದುಗೊಳಿಸಿಲ್ಲ. ಡೀಮ್ಡ್ ಯುನಿವರ್ಸಿಟಿಗಳ ಕುರಿತ ತಜ್ಞರ ಸಮಿತಿಯ ವರದಿ ಮತ್ತು ಅಫಿದಾವತ್ ಒಂದನ್ನು ನಾವು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದೇವೆ. ಹಾಗಾಗಿ ಯಾವುದೇ ವಿದ್ಯಾರ್ಥಿ ಸಂಕಷ್ಟಕ್ಕೊಳಗಾಗುವುದಿಲ್ಲ ಎಂದು ನಾನು ಭರವಸೆ ನೀಡುತ್ತಿದ್ದೇನೆ ಎಂದು ಸಿಬಲ್ ಆಶ್ವಾಸನೆ ನೀಡಿದರು.

44 ಡೀಮ್ಡ್ ಯುನಿವರ್ಸಿಟಿಗಳನ್ನು ರದ್ದುಗೊಳಿಸಬೇಕೆಂದು ಕೇಂದ್ರ ಸರಕಾರವು ಸುಪ್ರೀಂ ಕೋರ್ಟಿಗೆ ಅಫಿದಾವತ್ ಸಲ್ಲಿಸಿದ ಮರುದಿನವೇ ಸಿಬಲ್ ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.

ಎಲ್ಲಾ ವಿದ್ಯಾರ್ಥಿಗಳ ಹಿತರಕ್ಷಣೆಯನ್ನೂ ನಾವು ಮಾಡಲಿದ್ದೇವೆ. ಅಲ್ಲದೆ ಯಾವುದೇ ವಿದ್ಯಾರ್ಥಿಯನ್ನು ತೊಂದರೆಗೆ ಸಿಲುಕಿಸುವುದು ನಮ್ಮ ಉದ್ದೇಶವಲ್ಲ. ಎಲ್ಲಾ ವಿದ್ಯಾರ್ಥಿಗಳೂ ವಿಶ್ವವಿದ್ಯಾಲಯಗಳ ಪದವಿ ಪಡೆಯಲಿದ್ದಾರೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ