ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮದರಸಾಕ್ಕೆ ಚಕ್ಕರ್; ವಿದ್ಯಾರ್ಥಿಗಳಿಗೆ ಕೋಳ ಹಾಕಿದ ಶಿಕ್ಷಕ! (Madrassa teacher | chains students | Lucknow | Mohammad Ayub)
Bookmark and Share Feedback Print
 
ಮದರಸಾದ ತರಗತಿಗಳಿಗೆ ಹಾಜರಾಗದ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳನ್ನು ಶಿಕ್ಷಕನೊಬ್ಬ ಏಳು ಗಂಟೆಗಳಿಗೂ ಹೆಚ್ಚು ಕಾಲ ಸಂಕೋಲೆಯಲ್ಲಿ ಬಂಧಿಸಿ ಶಿಕ್ಷೆಗೊಳಪಡಿಸಿದ ಘಟನೆಯೊಂದು ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಿಂದ ವರದಿಯಾಗಿದೆ.

8 ಮತ್ತು 11 ವರ್ಷಗಳ ಇಬ್ಬರು ವಿದ್ಯಾರ್ಥಿಗಳಿಗೆ ಶಿಸ್ತಿನ ಪಾಠ ಹೇಳುವ ಸಲುವಾಗಿ ಮೊಹಮ್ಮದ್ ಆಯುಬ್ ಎಂಬ ಮದರಸಾ ಶಿಕ್ಷಕ ಸೋಮವಾರ ಬೆಳಿಗ್ಗೆ ಸಂಕೋಲೆಯಿಂದ ಬಂಧಿಸಿ ಸಣ್ಣ ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದ. ಉತ್ತರ ಪ್ರದೇಶ ರಾಜಧಾನಿ ಲಕ್ನೋದಿಂದ 110 ಕಿಲೋ ಮೀಟರ್ ದೂರದಲ್ಲಿರುವ ಹರ್ದೋಯಿ ಜಿಲ್ಲೆಯ ಬಾರೌಲಿ ಎಂಬಲ್ಲಿ ಈ ಘಟನೆ ನಡೆದಿರುವುದು.

ಮನೆಯಿಂದ ಮದರಸಾಕ್ಕೆ ಹೋಗಿದ್ದ ಮಕ್ಕಳಿಬ್ಬರೂ ಸಂಜೆಯಾದರೂ ಮನೆಗೆ ಬಾರದಿರುವುದನ್ನು ಕಂಡ ಹೆತ್ತವರು ಪರಿಶೀಲನೆಗೆ ತೊಡಗಿದಾಗ ಬಂಧನಕ್ಕೊಳಗಾಗಿರುವುದು ಕಂಡು ಬಂತು. ನಂತರ ಈ ಮಕ್ಕಳನ್ನು ಅವರು ಬಿಡಿಸಿಕೊಂಡು ಬಂದಿದ್ದಾರೆ.

ಶಿಕ್ಷಕನ ಇಂತಹ ಕ್ರೂರ ಶಿಕ್ಷೆಯಿಂದ ಆಕ್ರೋಶಗೊಂಡ ಸ್ಥಳೀಯರು ಆತನ ಬಂಧನಕ್ಕೆ ಆಗ್ರಹಿಸಿದ್ದು, ವಿದ್ಯಾರ್ಥಿಗಳನ್ನು ಈ ರೀತಿ ನಡೆಸಿಕೊಳ್ಳುವ ಮದರಸಾ ತಮಗೆ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಗ್ರಾಮಸ್ಥರು ಪೊಲೀಸರಿಗೂ ದೂರು ನೀಡಿದ್ದು, ಶಿಕ್ಷಕನೀಗ ತಲೆ ಮರೆಸಿಕೊಂಡಿದ್ದಾನೆ ಎಂದು ಇಲ್ಲಿನ ಪೊಲೀಸ್ ಇನ್ಸ್‌ಪೆಕ್ಟರ್ ವಿ.ಎಸ್. ವರ್ಮಾ ಹೇಳಿದ್ದಾರೆ.

ಸ್ಥಳೀಯ ಪತ್ರಕರ್ತರು ಮತ್ತು ಮಕ್ಕಳನ್ನು ರಕ್ಷಿಸಿದ ಗ್ರಾಮಸ್ಥರು ನಮಗೆ ಶಿಕ್ಷಕನ ಅಮಾನವೀಯ ವರ್ತನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಆತನಿಗಾಗಿ ನಾವು ಹುಡುಕುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ