ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಫೆರ್ನಾಂಡಿಸ್‌ಗೆ ರಾಮದೇವ್ ಚಿಕಿತ್ಸೆ, ಜತೆಗೆ ಆಸ್ತಿಗಾಗಿ ಕಿತ್ತಾಟ! (George Fernandes | Defence Minister | Alzheimer | Yoga Guru Ramdev)
Bookmark and Share Feedback Print
 
ಅಲ್ಜೈಮಿರ್ಸ್ ಮತ್ತು ಪಾರ್ಕಿನ್ಸನ್ಸ್‌ಗಳಂತಹ ಗಂಭೀರ ಮಿದುಳು ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ಆಸ್ತಿ-ಪಾಸ್ತಿಯ ಕುರಿತು ನಡೆಯುತ್ತಿರುವ ಕಿತ್ತಾಟದ ನಡುವೆಯೇ ಅವರನ್ನು ಯೋಗ ಗುರು ರಾಮದೇವ್ ಆಶ್ರಮಕ್ಕೆ ಕೊಂಡ್ಯೊಯ್ಯಲಾಗಿದ್ದು, ಆಯುರ್ವೇದ ಮತ್ತು ಯೋಗ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
PTI


79ರ ಹರೆಯ ಮಂಗಳೂರು ಮೂಲದ ಫೆರ್ನಾಂಡಿಸ್ ಜೆಡಿಯು ಮುಖ್ಯಸ್ಥರಾಗಿದ್ದು, ಪ್ರಸಕ್ತ ರಾಜ್ಯಸಭಾ ಸದಸ್ಯ ಸದಸ್ಯರಾಗಿದ್ದಾರೆ. ಅವರು ಕಳೆದ ನಾಲ್ಕು ವರ್ಷಗಳಿಂದ ಪತಂಜಲಿ ಯೋಗಪೀಠದಿಂದ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ರಾಮದೇವ್ ಆಶ್ರಮದ ಪ್ರಧಾನ ಕಾರ್ಯದರ್ಶಿ ಆಚಾರ್ಯ ಬಾಲಕೃಷ್ಣ ತಿಳಿಸಿದ್ದಾರೆ.

ಕೇಂದ್ರೀಯ ನರಮಂಡಲ ಸಮಸ್ಯೆಯಿಂದ ಬಳಲುತ್ತಿರುವ ಫೆರ್ನಾಂಡಿಸ್ ಆಶ್ರಮದಲ್ಲೇ ಕೆಲವು ದಿನಗಳ ಕಾಲ ಉಳಿದುಕೊಳ್ಳಲಿದ್ದಾರೆ. ಅವರಿಗೆ ನಾವು ಆಯುರ್ವೇದ ಮತ್ತು ಯೋಗ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಎನ್‌ಡಿಎ ಮಾಜಿ ಸಂಚಾಲಕರಾಗಿರುವ ಫೆರ್ನಾಂಡಿಸ್ ಅವರನ್ನು ಅವರ ಪರಿತ್ಯಕ್ತ ಪತ್ನಿ ಲೀಲಾ ಕಬೀರ್ ಮತ್ತು ಕೆಲವು ಆಪ್ತರು ದೆಹಲಿಯಿಂದ ಇಲ್ಲಿಗೆ ಕರೆ ತಂದಿದ್ದರು.

ಈ ನಡುವೆ ಫೆರ್ನಾಂಡಿಸ್ ಅವರ ಆಸ್ತಿ-ಪಾಸ್ತಿಯ ಕುರಿತು ಅವರ ಸಹೋದರರು ಮತ್ತು ಒಡನಾಡಿ ಜಯಾ ಜೇಟ್ಲಿ ಹಾಗೂ ಕಬೀರ್ ಮತ್ತು ಅವರ ಪುತ್ರ ಸೀನ್ ಅವರ ನಡುವೆ ಜಗಳವೇ ನಡೆಯುತ್ತಿದೆ.

ಕಳೆದ ಡಿಸೆಂಬರ್ 7ರಿಂದ ದೆಹಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫೆರ್ನಾಂಡಿಸ್ ಅವರನ್ನು ಭೇಟಿ ಮಾಡಲು ಜೇಟ್ಲಿ ಮತ್ತು ಇತರರಿಗೆ ಅವಕಾಶ ನೀಡಲಾಗಿರಲಿಲ್ಲ. ಕೆಲ ವಾರಗಳ ಹಿಂದಷ್ಟೇ ಅಮೆರಿಕಾದಿಂದ ವಾಪಸಾಗಿದ್ದ ಅವರ ಪುತ್ರ ಸೀನ್, ಕೆಲವು ವ್ಯಕ್ತಿಗಳಿಂದ 'ಕುಕೃತ್ಯ' ಮತ್ತು 'ದೈಹಿಕ ತೊಂದರೆ'ಗಳ ಭೀತಿಯಿರುವ ಕಾರಣ ನೀಡಿ ಪೊಲೀಸ್ ಭದ್ರತೆ ಒದಗಿಸಿದ್ದರು.

ಫೆರ್ನಾಂಡಿಸ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗುತ್ತಿಲ್ಲ ಎಂದು ಅವರ ಸಹೋದರ ರಿಚರ್ಡ್ ಇತ್ತೀಚೆಗಷ್ಟೇ ಪತ್ರಕರ್ತರೊಂದಿಗೆ ಹೇಳಿಕೊಂಡಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ್ದ ಫೆರ್ನಾಂಡಿಸ್ ಪರಿತ್ಯಕ್ತ ಪತ್ನಿ, ನಾವು ಯಾರನ್ನೂ ತಡೆದಿಲ್ಲ ಎಂದಿದ್ದರು.

ಕಳೆದ ಕೆಲವು ವರ್ಷಗಳಿಂದ ಫೆರ್ನಾಂಡಿಸ್ ಅವರನ್ನು ನೋಡಿಕೊಳ್ಳುತ್ತಿರುವ ಜೇಟ್ಲಿಯವರಿಗೆ ರಿಚರ್ಡ್ ಕೂಡ ಬೆಂಬಲ ನೀಡುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ