ಮುಖ್ಯಮಂತ್ರಿ ನರೇಂದ್ರ ಮೋದಿಯವರ ಕೋಮಪ್ರಚೋದನಾಕಾರಿ ಭಾಷಣಗಳ ದಾಖಲೆಗಳನ್ನು ಗೋದ್ರಾ ಕೋಮಗಲಭೆ ತನಿಖೆ ನಡೆಸುತ್ತಿರುವ ವಿಶೇಷ ತಂಡಕ್ಕೆ ನೀಡಬೇಕು ಎಂದು ಅಪೆಕ್ಸ್ ನ್ಯಾಯಾಲಯ ಗುಜರಾತ್ ಸರಕಾರಕ್ಕೆ ಆದೇಶಿಸಿದೆ.
ಡಿಕೆ ಜೈನ್ .ಪಿ ಸದಾಶಿವನ್ ಮತ್ತು ಅಫ್ತಾಬ್ ಆಲಂ ಅವರನ್ನೊಳಗೊಂಡ ನ್ಯಾಯಪೀಠ, ಮೋದಿಯವರ ಭಾಷಣದ ಪ್ರತಿಗಳಿಂದ ತನಿಖೆಗೆ ಸಹಕಾರಿಯಾಗುವುದಿಲ್ಲ ಎನ್ನುವ ಸರಕಾರದ ಮನವಿಯನ್ನು ತಿರಸ್ಕರಿಸಿದ ನ್ಯಾಯಪೀಠ ಕೂಡಲೇ ಎಲ್ಲ ದಾಖಲೆಗಳನ್ನು ವಿಶೇಷ ತಂಡಕ್ಕೆ ಒಪ್ಪಿಸುವಂತೆ ಆದೇಶಿಸಿತು.
ಮುಖ್ಯಮಂತ್ರಿ ನರೇಂದ್ರ ಮೋದಿಯವರ ಭಾಷಣದಲ್ಲಿ ಉದ್ರೇಕಕಾರಿ ಅಂಶಗಳಿದ್ದವು ಎಂದು ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ಹೇಳಿಕೆ ನೀಡಿತ್ತು. ಒಂದು ವೇಳೆ ದಾಖಲೆಗಳನ್ನು ನೀಡಿದಲ್ಲಿ ಗುಜರಾತ್ ಸರಕಾರಕ್ಕೆ ಯಾವ ತೊಂದರೆಯಿದೆ ಎಂದು ಗುಜರಾತ್ ಸರಕಾರಕ್ಕೆ ಪ್ರಶ್ನಿಸಿ, ವಿಳಂಬ ನೀತಿಯನ್ನು ಅನುಸರಿಸಿದೆ ದಾಖಲೆಗಳನ್ನು ವಶಕ್ಕೆ ನೀಡುವಂತೆ ಸರಕಾರಕ್ಕೆ ಸೂಚನೆ ನೀಡಿತು.