ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತೀಯ ಸೇನಾ ಮುಖ್ಯಸ್ಥರಿಗೆ ಸರಿಯಾಗಿ ಕಿವಿ ಕೇಳಿಸುತ್ತಿಲ್ಲ..! (Army Chief | hearing problem | Deepak Kapoor | anti-terror operation)
Bookmark and Share Feedback Print
 
ಭಾರತೀಯ ಮಿಲಿಟರಿ ಮುಖ್ಯಸ್ಥ ದೀಪಕ್ ಕಪೂರ್ ಅವರಿಗೆ ಕಿವಿ ಕೇಳಿಸುತ್ತಿಲ್ಲ ಎಂದು ನೇರಾನೇರವಾಗಿ ಹೇಳಬಹುದಾದರೂ, ಅದು ಸಂಪೂರ್ಣ ಸತ್ಯವಲ್ಲ. ಅವರ ಒಂದು ಕಿವಿಯಲ್ಲಿ ದೋಷವಿರುವ ಕಾರಣ ಶಬ್ದಗಳನ್ನು ಗ್ರಹಿಸಲು ಕಷ್ಟಪಡುತ್ತಿರುವುದು ವಾಸ್ತವ ವಿಚಾರ.

ಕಳೆದ ವರ್ಷ ಅಮೆರಿಕಾದಲ್ಲಿ ನಡೆದಿದ್ದ ಭಯೋತ್ಪಾದನಾ ವಿರೋಧಿ ಅಣಕು ಕಾರ್ಯಾಚಾರಣೆಯೊಂದರಲ್ಲಿ ಪಾಲ್ಗೊಂಡಿದ್ದ ಮಿಲಿಟರಿ ಮುಖ್ಯಸ್ಥ ದೀಪಕ್ ಕಪೂರ್ ಸಮೀಪವೇ ಸ್ಫೋಟಕಗಳು ಸಿಡಿದ ಕಾರಣ ಹೀಗಾಗಿದೆ. ಬಳಿಕ ಅವರ ಎಡಗಿವಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇತ್ತೀಚೆಗೆ ತಾನು ಶಬ್ದಗಳನ್ನು ಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಸ್ವತಃ ಕಪೂರ್ ಅನುಭವಕ್ಕೆ ಬಂದಿದೆ.
Deepak Kapoor
PR


ಕಳೆದ ವರ್ಷದ ಜುಲೈನಲ್ಲಿ ಅಮೆರಿಕಾದಿಂದ ವಾಪಸಾದ ನಂತರ ತನಗೆ ಶ್ರವಣ ಸಮಸ್ಯೆಗಳು ಅನುಭವಕ್ಕೆ ಬಂದಿವೆ. ಎಡಬದಿಯ ಕಿವಿಯಲ್ಲಿ ಶಬ್ದಗಳನ್ನು ಸ್ಪಷ್ಟವಾಗಿ ಆಲಿಸಲು ಸಾಧ್ಯವಾಗುತ್ತಿಲ್ಲ ಎಂದು ಕಪೂರ್ ವೈದ್ಯರೊಂದಿಗೆ ಹೇಳಿಕೊಂಡಿದ್ದಾರೆ.

ಶ್ರವಣ ಸಮಸ್ಯೆಯಿರುವುದರಿಂದ ಶ್ರವಣ ಸಾಧನವನ್ನು ಬಳಸುವಂತೆ ಸಲಹೆ ನೀಡಲಾಗಿದ್ದು, ಇದೇ ಕಾರಣದಿಂದ ಅವರನ್ನು ಸೇವೆಯಿಂದ ಮುಕ್ತಗೊಳಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ಆದರೆ ಇದೇ ಕಾರಣವನ್ನು ಮುಂದಿಟ್ಟುಕೊಂಡು ಕಪೂರ್ ನಿವೃತ್ತಿಯಾಗಲಿದ್ದಾರೆ ಎಂಬ ವರದಿಗಳನ್ನು ಸೇನೆಯ ಮೂಲಗಳು ನಿರಾಕರಿಸಿವೆ.

ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ನಿವೃತ್ತರಾಗಲಿರುವ ಅವರು ಶ್ರವಣದೋಷ ಉಂಟಾಗಿರುವುದರಿಂದ ಶೇ.20ರಷ್ಟು ಹೆಚ್ಚುವರಿ ನಿವೃತ್ತಿ ವೇತನವನ್ನು ಪಡೆಯಲಿದ್ದಾರೆ ಎಂದು ಸೇನೆಯ ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ