ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತ ತಾಳ್ಮೆಗೆಟ್ಟೀತು ಜೋಕೆ: ಪಾಕ್‌ಗೆ ಅಮೆರಿಕಾ ಎಚ್ಚರಿಕೆ (India | Pakistan | USA | Robert Gates)
Bookmark and Share Feedback Print
 
ಲಷ್ಕರ್ ಇ ತೋಯ್ಬಾ ಮುಂತಾದ ಭಯೋತ್ಪಾದಕ ಸಂಘಟನೆಗಳು ಅಲ್‌ಖೈದಾ ಜತೆ ಸೇರಿಕೊಂಡು ಮತ್ತೊಂದು ಮುಂಬೈಯಂತಹ ದಾಳಿಯನ್ನು ನಡೆಸಲು ಯೋಜನೆ ರೂಪಿಸುತ್ತಿವೆ ಎಂದು ಅಮೆರಿಕಾ ಎಚ್ಚರಿಕೆ ನೀಡಿದ್ದು, ಮತ್ತೆ ಅದೇ ಪರಿಸ್ಥಿತಿ ಸೃಷ್ಟಿಯಾದಲ್ಲಿ ಪಾಕಿಸ್ತಾನದ ಜತೆಗಿನ ಭಾರತದ ಯುದ್ಧವನ್ನು ತಪ್ಪಿಸಲಾಗದು ಎಂದು ಹೇಳಿದೆ.

ಭಾರತ ಪ್ರವಾಸದಲ್ಲಿರುವ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್, ದಕ್ಷಿಣ ಏಷಿಯಾದಲ್ಲಿನ ಶಾಂತಿ ಸಮತೋಲನವು ದುರ್ಬಲವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಮುಂಬೈ ದಾಳಿಯಂತಹ ಅನಾಹುತಗಳು ಎದುರಾಗಬಹುದು ಎಂದು ಮುನ್ನೆಚ್ಚೆರಿಕೆ ನೀಡಿದ್ದಾರೆ.
Robert Gates
PTI


'ಮುಂಬೈಯೋತ್ಪಾದನಾ' ದಾಳಿ ಬಳಿಕ ಭಾರತವು ಶ್ರೇಷ್ಠ ಸಂಯಮ ಮತ್ತು ನೀತಿಗಳೊಂದಿಗೆ ಪ್ರತಿಕ್ರಿಯಿಸಿದೆ. ಆದರೆ ಅಂತಹ ಪರಿಸ್ಥಿತಿ ಮತ್ತೊಮ್ಮೆ ಎದುರಾದರೆ ಅಥವಾ ಭಾರತದ ಮೇಲೆ ಮತ್ತೊಂದು ದಾಳಿ ನಡೆದರೆ ಆಗ ಹಿಂದೂಸ್ತಾನವು ತನ್ನ ಸಂಯಮವನ್ನು ಉಳಿಸಿಕೊಳ್ಳುವುದೇ ಎಂಬುದೇ ಎದುರಿಗಿರುವ ಪ್ರಶ್ನೆ. ಇನ್ನೊಂದು ದಾಳಿ ನಡೆದರೂ ಭಾರತ ತಾಳ್ಮೆವಹಿಸಬೇಕೆಂದರೆ ಅದು ಸಮರ್ಥನೀಯವೆನಿಸದು ಎಂದು ಭಾರತದ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರನ್ನು ಭೇಟಿಯಾದ ನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಭಯೋತ್ಪಾದಕರಿಂದ ಮತ್ತೊಂದು ಸಂಭಾವ್ಯ ದಾಳಿ ನಡೆಯುವ ಬಗ್ಗೆ ಭಾರತೀಯ ನಾಯಕರಿಗೆ ಎಚ್ಚರಿಕೆ ನೀಡಿದ್ದೀರಾ ಎಂಬ ಪ್ರಶ್ನೆಗೆ ಗೇಟ್ಸ್, ಪ್ರಸಕ್ತ ಉಭಯ ದೇಶಗಳ ನಡುವೆ ಅತ್ಯುತ್ತಮ ಹೊಂದಾಣಿಕೆಯಿದೆ ಎಂದರು.

ಈಗ ಭಾರತ ಮತ್ತು ಅಮೆರಿಕಾ ನಡುವೆ ಮಾತ್ರ ಅತ್ಯುತ್ತಮ ಹೊಂದಾಣಿಕೆಯಿರುವುದಲ್ಲ. ಇತರ ರಾಷ್ಟ್ರಗಳ ಜತೆಗೂ ಅತ್ಯುತ್ತಮ ಬಾಂಧವ್ಯವಿದೆ. ಅವರು ಕೂಡ ಇಂತಹ ಸಂಭಾವ್ಯ ದಾಳಿಯ ಕುರಿತು ಮಾಹಿತಿ ರವಾನಿಸುತ್ತಾರೆ ಎಂದು ತಿಳಿಸಿದರು.

ಅಫಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿ ಅಲ್‌ಖೈದಾ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳು ಕೇವಲ ಅಫ್ಘಾನ್ ಮತ್ತು ಪಾಕ್‌ಗಳಲ್ಲಿ ಮಾತ್ರ ಬುಡಮೇಲು ಕೃತ್ಯಗಳನ್ನು ನಡೆಸಲು ಯೋಜಿಸುತ್ತಿಲ್ಲ, ಬದಲಾಗಿ ಇಡೀ ಪ್ರಾಂತ್ಯದಲ್ಲಿ ಕುಕೃತ್ಯಗಳನ್ನು ನಡೆಸುವ ಮೂಲಕ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಿಸುತ್ತಿವೆ ಎಂದು ಗೇಟ್ಸ್ ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ