ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪೈಲಟ್ ಪ್ರಮಾದದಿಂದ ವೈಎಸ್ಆರ್ ಹೆಲಿಕಾಪ್ಟರ್ ಪತನ: ವರದಿ (YS Rajasekhar Reddy | Andhra Pradesh | Chief Minister | Chopper crash)
Bookmark and Share Feedback Print
 
ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದ್ದ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿಯವರ ಹೆಲಿಕಾಪ್ಟರ್ ಪತನಗೊಂಡಿದ್ದು ಅತಿವೇಗದಲ್ಲಿ ಸಾಗುತ್ತಿದ್ದಾಗ ಪೈಲಟ್‌ಗಳ ನಿಯಂತ್ರಣ ತಪ್ಪಿದ್ದರಿಂದ ಎಂದು ಕೇಂದ್ರ ಸರಕಾರಕ್ಕೆ ಸಲ್ಲಿಸಲಾದ ವರದಿಯಲ್ಲಿ ಹೇಳಲಾಗಿದೆ.

ಪವನ್ ಹಾನ್ಸ್ ಹೆಲಿಕಾಪ್ಟರ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಆರ್.ಕೆ. ತ್ಯಾಗಿಯವರು ಮುಖ್ಯಸ್ಥರಾಗಿದ್ದ ನಾಲ್ಕು ಮಂದಿಯ ಸಮಿತಿಯು ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ವರದಿಯ ಪ್ರಕಾರ ಅಪಘಾತಕ್ಕೆ ಪ್ರಮುಖ ಕಾರಣ ಪ್ರತಿಕೂಲ ವಾತಾವರಣ.
Chopper crash
PTI


ರೆಡ್ಡಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅತಿವೇಗದಲ್ಲಿದ್ದಾಗ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೈಲಟ್‌‌ಗಳು ವಿಫಲಗೊಂಡಿದ್ದರು. ಅಲ್ಲದೆ ಅಪಘಾತಕ್ಕೂ ಮೊದಲು ಅಮೂಲ್ಯ ಆರು ನಿಮಿಷಗಳನ್ನು ವಿಮಾನದ ಕೈಪಿಡಿ ಹುಡುಕಲು ಸಿಬ್ಬಂದಿಗಳು ವ್ಯರ್ಥಗೊಳಿಸಿದ್ದರು ಎಂದು ಹೇಳಿದೆ.

ಹೆಲಿಕಾಫ್ಟರ್ ಅತಿ ವೇಗದಲ್ಲಿದ್ದ ಕಾರಣ ತಕ್ಷಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಪೈಲಟ್‌ಗಳಿಗೆ ಸಾಧ್ಯವಾಗಿರಲಿಲ್ಲ. ಹಾಗಾಗಿ ಅಪಘಾತವನ್ನು ತಪ್ಪಿಸುವ ಅಮೂಲ್ಯ ಅವಕಾಶಗಳು ಕೈಚೆಲ್ಲಿ ಹೋಗಿದ್ದವು. ಪ್ರತಿಕೂಲ ವಾತಾವರಣದಿಂದಾಗಿ ಹೆಲಿಕಾಪ್ಟರಿನ ನಿಯಂತ್ರಣವನ್ನು ಕಳೆದುಕೊಂಡ ನಂತರ ಭಾರೀ ಮಳೆಯಿಂದಾಗಿ ಅತಿವೇಗದಿಂದ ಬೆಟ್ಟಕ್ಕೆ ಅಪ್ಪಳಿಸುವ ಮೊದಲು ಪೈಲಟ್‌ಗಳು ಅಟೋ-ಪೈಲಟ್ ವಿಭಾಗವನ್ನು ಚಾಲನೆಗೊಳಿಸಿದ್ದರು ಎಂದು ಕಳೆದ ವಾರ ಕೇಂದ್ರ ನಾಗರಿಕ ವಾಯುಯಾನ ಸಚಿವಾಲಯಕ್ಕೆ ಸಲ್ಲಿಸಲಾದ ವರದಿಯಲ್ಲಿ ವಿವರಿಸಲಾಗಿದೆ.

2009ರ ಸೆಪ್ಟೆಂಬರ್ ಎರಡರಂದು ಮುಖ್ಯಮಂತ್ರಿಯವರು ಭಾರೀ ಮಳೆ-ಗಾಳಿಯ ಪ್ರತಿಕೂಲ ವಾತಾವರಣದ ನಡುವೆಯೂ ಕಾರ್ಯಕ್ರಮವೊಂದಕ್ಕಾಗಿ ಹೆಲಿಕಾಪ್ಟರಿನಲ್ಲಿ ಹೊರಟಿದ್ದರು. ಆದರೆ ಈ ಕಾಪ್ಟರ್ ನಲ್ಲಮಲ ಅರಣ್ಯ ಪ್ರದೇಶದಲ್ಲಿ ಕಾಣೆಯಾಗಿತ್ತು.

ಮರುದಿನ ಈ ಹೆಲಿಕಾಪ್ಟರ್ ಅವಶೇಷಗಳು ಕರ್ನೂಲ್‌ನಿಂದ 40 ಕಿಲೋ ಮೀಟರ್ ದೂರದಲ್ಲಿರುವ ರುದ್ರಕೊಂಡ ಬೆಟ್ಟ ಪ್ರದೇಶದಲ್ಲಿ ಪತ್ತೆಯಾಗಿತ್ತು. ವೈಎಸ್ಆರ್ ಸೇರಿದಂತೆ ಐವರು ಈ ದುರಂತದಲ್ಲಿ ಸಾವನ್ನಪ್ಪಿದ್ದರು.

ಆದರೆ ವೈಎಸ್ಆರ್ ಸಾವಿನ ಹಿಂದೆ ಪಿತೂರಿಗಳಿವೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಭಾರತದ ಪ್ರತಿಷ್ಠಿತ ಉದ್ಯಮ ಸಹೋದರರು ಆಂಧ್ರ ಮುಖ್ಯಮಂತ್ರಿಯವರನ್ನು ಕೊಲ್ಲಲು ಸಂಚು ಹೂಡಿದ್ದರು ಎಂದು ಇತ್ತೀಚೆಗಷ್ಟೇ ಟೀವಿ ಚಾನೆಲ್‌ಗಳು ವರದಿ ಮಾಡಿದ್ದವು.
ಸಂಬಂಧಿತ ಮಾಹಿತಿ ಹುಡುಕಿ