ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಣಬ್, ಅಂಬಾನಿ, ಮುಮ್ಮಟ್ಟಿಗೆ ಎಂಸಿಸಿ ಪ್ರಶಸ್ತಿ (Pranab | Anil Ambani | MCC award)
Bookmark and Share Feedback Print
 
ಕೇಂದ್ರ ವಿತ್ತ ಖಾತೆ ಸಚಿವ ಪ್ರಣಬ್ ಮುಖರ್ಜಿ 'ಬೆಸ್ಟ್ ನ್ಯಾಷನಲ್ ಲೀಡರ್ ಆಫ್ ದಿ ಕಂಟ್ರಿ'ಪ್ರಶಸ್ತಿ ಹಾಗೂ ಉದ್ಯಮಿ ಅನಿಲ್ ಅಂಬಾನಿ ಬೆಸ್ಟ್ ಕಾರ್ಪೋರೇಟ್ ಲೀಡರ್ ಪ್ರಶಸ್ತಿಗೆ ಮಲಬಾರ್ ಚೇಂಬರ್ ಆಫ್ ಕಾಮರ್ಸ್ ಆಯ್ಕೆ ಮಾಡಿದೆ.

ಮಲೆಯಾಳಂ ಚಿತ್ರರಂಗಕ್ಕೆ ಸಲ್ಲಿಸಿದ ಅಪಾರ ಸೇವೆಯಿಂದಾಗಿ, ಖ್ಯಾತ ನಟ ಮುಮ್ಮಟ್ಟಿಯವರಿಗೆ ಲೈಫ್‌ಟೈಮ್ ಅಚಿವ್‌ಮೆಂಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಚೇಂಬರ್ ಅಧ್ಯಕ್ಷ ವಿ.ಗಂಗಾಧರನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಮಾಜದ ಒಳತಿಗಾಗಿ ಸ್ಪೂರ್ತಿ ದೊರೆತು ಮತ್ತಷ್ಟು ಕಾರ್ಯಗಳನ್ನು ಉತ್ಸಾಹದಿಂದ ಮಾಡಲು ಪ್ರಶಸ್ತಿಯ ಗೌರವ ಉತ್ತೇಜನ ನೀಡುತ್ತದೆ ಎಂದು ಹೇಳಿದ್ದಾರೆ.

ಮಲಬಾರ್ ಚೇಂಬರ್ ಆಫ್ ಕಾಮರ್ಸ್ ತನ್ನ 80ನೇ ವಾರ್ಷಿಕ ದಿನಾಚರಣೆಯನ್ನು ಆಚರಿಸುತ್ತಿದ್ದು, ಏತನ್ಮಧ್ಯೆ ಪ್ರಶಸ್ತಿ ನೀಡುವ ದಿನಾಂಕವನ್ನು ಇಲ್ಲಿಯವರೆಗೆ ಪ್ರಕಟಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

1929ರಲ್ಲಿ ಅಸ್ತಿತ್ವಕ್ಕೆ ಬಂದ ಮಲಬಾರ್ ಚೇಂಬರ್ ಆಫ್ ಕಾಮರ್ಸ್ 1500 ಉದ್ಯಮಗಳ ಸದಸ್ಯತ್ವವನ್ನು ಹೊಂದಿದೆ.
ಸಂಬಂಧಿತ ಮಾಹಿತಿ ಹುಡುಕಿ