ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮರುಮದುವೆ ಮಾಡಿಕೊಂಡ ವಿಧವೆಯನ್ನು ವಜಾ ಮಾಡಿದರು! (Widow | remarriage | Bombay HC | compassionate grounds)
Bookmark and Share Feedback Print
 
ರಾಜಾರಾಮ್ ಮೋಹನ್ ರಾಯ್ ಅವರು 200 ವರ್ಷಗಳ ಹಿಂದೆ ವಿಧವಾ ವಿವಾಹವನ್ನು ಪ್ರೋತ್ಸಾಹಿಸಿ ನಡೆಸಿದ್ದ ಸಾಮಾಜಿಕ ಕ್ರಾಂತಿ ಯಶಸ್ವಿಯಾಗಿದ್ದರೂ, ಈ 21ನೇ ಶತಮಾನದಲ್ಲಿ ಅದಕ್ಕೆ ನ್ಯಾಯ ಸಿಕ್ಕಿಲ್ಲವೇ ಎಂಬ ಸಂಶಯವೊಂದು ಇದೀಗ ತಲೆಯೆತ್ತಿದೆ.

ಉದ್ಯೋಗದಲ್ಲಿದ್ದ ಗಂಡ ಸಾವನ್ನಪ್ಪಿದ ಮೇಲೆ ಅನುಕಂಪದ ಆಧಾರದಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ವಿಧವೆ ಮರುಮದುವೆ ಮಾಡಿಕೊಂಡರೆ ಉದ್ಯೋಗದಲ್ಲಿ ಮುಂದುವರಿಯುವಂತಿಲ್ಲ ಎಂದು ಬೃಹನ್ಮುಂಬೈ ನಗರ ಪಾಲಿಕೆ ಹೇಳಿರುವುದೇ ಇದಕ್ಕೆಲ್ಲ ಮೂಲ ಹೇತು.

ಬೃಹನ್ಮುಂಬೈ ನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸಂಗೀತಾ ಎಂಬವರ ಗಂಡ ಅಕಸ್ಮಾತ್ ಸಾವನ್ನಪ್ಪಿದ್ದರು. ಈ ಕಾರಣದಿಂದ ವಿಧವೆ ಪತ್ನಿಗೆ ಪಾಲಿಕೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಿತ್ತು.

ಸ್ವಲ್ಪ ಸಮಯದ ನಂತರ ಸಂಗೀತಾ ಮತ್ತೊಂದು ಮದುವೆ ಮಾಡಿಕೊಂಡದ್ದನ್ನೇ ಮುಂದಿಟ್ಟ ಮುಂಬೈ ನಗರ ಪಾಲಿಕೆ ಆಕೆಯನ್ನು ಕೆಲಸದಿಂದ ವಜಾ ಮಾಡಿತ್ತು.

ಸಂಗಾತಿಯ ಸಾವಿನ ಅನುಕಂಪದ ಆಧಾರದ ಮೇಲೆ ನೌಕರಿ ಗಿಟ್ಟಿಸಿಕೊಂಡ ಬಳಿಕ ಮರು ಮದುವೆಯಾದಲ್ಲಿ ಆಕೆ ಅಥವಾ ಆತ ಉದ್ಯೋಗದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ನಗರ ಪಾಲಿಕೆ ಈ ಸಂದರ್ಭದಲ್ಲಿ ಹೇಳಿತ್ತು.

ಆದರೆ ಇದನ್ನು ಪ್ರಶ್ನಿಸಿರುವ ಸಂಗೀತಾ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತನ್ನ ಮೂಲಭೂತ ಹಕ್ಕುಗಳನ್ನು ನಗರ ಪಾಲಿಕೆ ಉಲ್ಲಂಘಿಸಿದೆ ಎಂಬ ದೂರನ್ನು ವಿಚಾರಣೆಗೆ ಸ್ವೀಕರಿಸಿದ ವಿಭಾಗೀಯ ಪೀಠದ ನ್ಯಾಯಮೂರ್ತಿ ಎಫ್.ಐ. ರೆಬೆಲ್ಲೋ ಮತ್ತು ಸಿ.ಎಲ್. ಪಾಂಗಾರ್ಕರ್ ಅವರು ಇದೀಗ ನಗರಪಾಲಿಕೆಗೆ ಉತ್ತರಿಸಲು ಎರಡು ವಾರಗಳ ಕಾಲಾವಕಾಶ ನೀಡಿದ್ದಾರೆ.

ಅಲ್ಲದೆ ನಗರಪಾಲಿಕೆಯ ವರ್ತನೆಯನ್ನು ಖಂಡಿಸಿರುವ ನ್ಯಾಯಾಲಯವು, ನೀವು ರಾಜಾರಾಮ್ ಮೋಹನ್ ರಾಯ್ ಅವರನ್ನು ಇಷ್ಟು ಬೇಗ ಮರೆತಿರಾ? ವಿಧವಾ ವಿವಾಹ ನಿಮ್ಮ ಪ್ರಕಾರ ತಪ್ಪೇ ಎಂದು ಖಾರವಾಗಿ ಪ್ರಶ್ನಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ