ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಐಪಿಎಲ್ ಪಂದ್ಯಗಳಿಗೆ ಮಹಾರಾಷ್ಟ್ರ ಮನರಂಜನಾ ತೆರಿಗೆ (entertainment tax | IPL matches | Maharashtra government | Twenty20 matches)
Bookmark and Share Feedback Print
 
ರಾಜ್ಯದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಿಗೆ ಮನರಂಜನಾ ತೆರಿಗೆ ವಿಧಿಸಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಅಶೋಕ್ ಚೌಹಾನ್ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಪ್ರತೀ ಪಂದ್ಯದ ಆದಾಯದ ಮೇಲೆ ಶೇ.25ರಷ್ಟು ಮನರಂಜನಾ ತೆರಿಗೆಯನ್ನು ವಿಧಿಸಲಾಗುತ್ತದೆ. ನಗರಸಭೆ ವ್ಯಾಪ್ತಿಯಲ್ಲಿ ನಡೆಯುವ ಪಂದ್ಯಗಳಿಗೆ ಶೇ.15ರಿಂದ 20ರೊಳಗೆ ತೆರಿಗೆ ವಿಧಿಸಲಾಗುತ್ತದೆ.

ಸರಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಐಪಿಎಲ್ ಆಯುಕ್ತ ಲಲಿತ್ ಮೋದಿ, ಈ ಬಗ್ಗೆ ಲೀಗ್‌ನಿಂದ ಯಾವುದೇ ಆಕ್ಷೇಪವಿಲ್ಲ ಎಂದು ಪತ್ರಕರ್ತರಿಗೆ ತಿಳಿಸಿದ್ದಾರೆ.

ಇದು ಮಹತ್ವದ ವಿಚಾರವೇನಲ್ಲ. ಅಲ್ಲಿ ಮನರಂಜನಾ ತೆರಿಗೆಯನ್ನು ಪಾವತಿಸಬೇಕಿದ್ದರೆ, ನಾವದಕ್ಕೆ ಸಿದ್ಧ ಎಂದು ಮೋದಿ ತಿಳಿಸಿದ್ದಾರೆ.

ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಐಪಿಎಲ್ ಟೂರ್ನಮೆಂಟ್‌ನ ಮೂರನೇ ಆವೃತ್ತಿಗಾಗಿ ಮಂಗಳವಾರವಷ್ಟೇ ಮುಂಬೈಯಲ್ಲಿ ಆಟಗಾರರ ಹರಾಜು ನಡೆದಿತ್ತು.
ಸಂಬಂಧಿತ ಮಾಹಿತಿ ಹುಡುಕಿ