ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಮ್ಮು-ಕಾಶ್ಮೀರ ಪ್ರಿ-ಪೇಯ್ಡ್ ಮೊಬೈಲ್ ನಿಷೇಧ ರದ್ದು (pre-paid mobile phones | Jammu and Kashmir | customer | Home Ministry)
Bookmark and Share Feedback Print
 
ಜಮ್ಮು-ಕಾಶ್ಮೀರದಲ್ಲಿ ಕಳೆದೆರಡು ತಿಂಗಳುಗಳ ಹಿಂದೆ ಹೇರಲಾಗಿದ್ದ ಪ್ರಿ-ಪೇಯ್ಡ್ ಮೊಬೈಲ್ ಸಂಪರ್ಕ ನಿಷೇಧವನ್ನು ಕೇಂದ್ರ ಸರಕಾರ ಗುರುವಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದು ಮಾಡಿದೆ. ಆದರೆ ಸೇವಾದಾರರು ಗ್ರಾಹಕರಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳುವಾಗ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕು ಎಂದು ಷರತ್ತುಗಳನ್ನು ವಿಧಿಸಿದೆ.

ರಾಜ್ಯದಲ್ಲಿನ 38 ಲಕ್ಷ ಮೊಬೈಲ್ ಫೋನ್ ಗ್ರಾಹಕರಿಂದ ಉತ್ಕೃಷ್ಟ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸುವ ತೀರ್ಮಾನಕ್ಕೆ ಬಂದ ನಂತರ ಕೇಂದ್ರ ಸರಕಾರವು ತಾನು ಈ ಹಿಂದೆ ಹೇರಿದ್ದ ನಿಷೇಧವನ್ನು ಹಿಂದಕ್ಕೆ ಪಡೆದುಕೊಂಡಿದೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಕೇಂದ್ರ ಸರಕಾರವು ಜಮ್ಮು-ಕಾಶ್ಮೀರದಲ್ಲಿ ಪ್ರಿ-ಪೇಯ್ಡ್ ಮೊಬೈಲ್ ಸೇವೆಯನ್ನು ರದ್ದುಗೊಳಿಸಿತ್ತು. ಆದರೆ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಗೃಹ ಸಚಿವ ಪಿ. ಚಿದಂಬರಂ, ಸೇವಾದಾರರು ಕಠಿಣ ನಿಯಮಾವಳಿಗಳನ್ನು ಅನುಸರಿಸುವ ಮೂಲಕ ಯಾವುದೇ ಲೋಪವಿಲ್ಲದೆ ದಾಖಲೆಗಳನ್ನು ಪರಿಶೀಲನೆ ನಡೆಸಿ ಸಂಪರ್ಕಗಳನ್ನು ನೀಡುವ ಪ್ರಸ್ತಾಪಗಳನ್ನು ಮುಂದಿಟ್ಟಿದ್ದು, ನಿಷೇಧವನ್ನು ಮರುಪರಿಶೀಲಿಸಲಾಗುತ್ತದೆ ಎಂದಿದ್ದರು.

ಆದಷ್ಟು ಬೇಗ ಈ ವಿವಾದವನ್ನು ಬಗೆಹರಿಸಬೇಕು ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಜಮ್ಮು-ಕಾಶ್ಮೀರ ಸರಕಾರವು ಕೇಂದ್ರ ಸರಕಾರವನ್ನು ಒತ್ತಾಯಿಸಿತ್ತು. ಸೇವೆಯನ್ನು ರದ್ದುಗೊಳಿಸಿದ್ದಕ್ಕೆ ಗ್ರಾಹಕರು ಕೂಡ ತೀವ್ರ ಪ್ರತಿಭಟನೆಗಳನ್ನು ನಡೆಸಿದ್ದರು.

ಪ್ರಿ-ಪೇಯ್ಡ್ ಮೊಬೈಲ್ ಸಂಪರ್ಕಗಳನ್ನು ನೀಡುವಾಗ ಕಠಿಣ ಹಾಗೂ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಪಾಲಿಸದೇ ಇರುವ ಮೊಬೈಲ್ ಸೇವಾದಾರರ ಮೇಲೆ ಭಾರೀ ದಂಡ ಹಾಕುವ ನಿಯಮಾವಳಿಗೆ ರಾಜ್ಯ ಸರಕಾರವೂ ತನ್ನ ಬೆಂಬಲ ಸೂಚಿಸಿತ್ತು.

ಸುಲಭವಾಗಿ ಕಿರಾಣಿ ಅಂಗಡಿಗಳಲ್ಲೂ ಸಿಗುವ ಪ್ರಿ-ಪೇಯ್ಡ್ ಸಿಮ್‌ಗಳನ್ನು ಭಯೋತ್ಪಾದಕರು ಪಡೆದುಕೊಂಡು ದುರುಪಯೋಗ ಪಡಿಸಿಕೊಳ್ಳುತ್ತಿರುವ ಉದಾಹರಣೆಗಳು ಹೆಚ್ಚಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಪ್ರಿ-ಪೇಯ್ಡ್ ಮೊಬೈಲ್ ಸೇವೆಯನ್ನು ಜಮ್ಮು-ಕಾಶ್ಮೀರದಲ್ಲಿ ರದ್ದುಗೊಳಿಸಿತ್ತು. ಸೇವಾದಾರರು ಅಗತ್ಯ ದಾಖಲೆಗಳನ್ನು ಪರಿಶೀಲಿಸುವ ಗೋಜಿಗೆ ಹೋಗದೆ ಸಿಮ್‌ಗಳನ್ನು ನೀಡುವುದರಿಂದ ಉಗ್ರರಿಗೆ ಸಹಕಾರವಾಗುತ್ತದೆ, ಹಾಗಾಗಿ ಪೋಸ್ಟ್-ಪೇಯ್ಡ್ ಮೊಬೈಲ್‌ಗಳಿಗೆ ಮಾತ್ರ ಅವಕಾಶವಿದೆ ಎಂದು ಕೇಂದ್ರ ಹೇಳಿತ್ತು.
ಸಂಬಂಧಿತ ಮಾಹಿತಿ ಹುಡುಕಿ