ಆಹಾರ ಧಾನ್ಯಗಳ ಹೆಲೆ ಏರಿಕೆ ಹಿನ್ನೆಲೆಯಲ್ಲಿ ಜನವರಿ ಹಾಗೂ ಫೆಬ್ರವರಿ ತಿಂಗಳ ಪಡಿತರ ವ್ಯವಸ್ಥೆ ಮೂಲಕ ಪೂರೈಸುವ ಗೋಧಿ ಹಾಗೂ ಅಕ್ಕಿ ಪ್ರಮಾಣವನ್ನು 10 ಕೆ.ಜಿ.ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಒಂದು ಕುಟುಂಬಕ್ಕೆ ಗರಿಷ್ಟವಾಗಿ ನೀಡಲಾಗುವ 35 ಕೆ.ಜಿ. ಅಕ್ಕಿ ಹಾಗೂ ಗೋಧಿ ಜೊತೆ ಈ ಹೆಚ್ಚುವರಿ ಧಾನ್ಯ ವಿತರಿಸಲಾಗುತ್ತದೆ.