ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇದು ಮಹಾರಾಷ್ಟ್ರ ಸರಕಾರದ 'ಮೂನ್‌ವಾಕ್': ಠಾಕ್ರೆ ಲೇವಡಿ (Bal Thackeray | Shiv Sena | Maharashtra | taxi permits)
Bookmark and Share Feedback Print
 
ಮಹಾರಾಷ್ಟ್ರ ಸರಕಾರದ ಮರಾಠಿ ನಿಷ್ಠೆ ಒಂದೇ ದಿನದಲ್ಲಿ ಬದಲಾಗಿರುವುದನ್ನು ಮೈಕೆಲ್ ಜಾಕ್ಸನ್‌ರ 'ಮೂನ್‌ವಾಕ್'ಗೆ ಹೋಲಿಸಿರುವ ಶಿವಸೇನೆ ನಾಯಕ ಬಾಳ್ ಠಾಕ್ರೆ, ಕಾಂಗ್ರೆಸ್ ನೇತೃತ್ವದ ಆಡಳಿತಕಾರರು ಈ ರೀತಿ ವರ್ತಿಸುತ್ತಾರೆ ಎಂಬುದು ಮರಾಠಿಗರಿಗೆ ಅನಿರೀಕ್ಷಿತವೇನಲ್ಲ ಎಂದಿದ್ದಾರೆ.

ಮರಾಠಿ ಭಾಷಿಗರಿಗೆ ಮಾತ್ರ ಟ್ಯಾಕ್ಸಿ ಪರವಾನಗಿ ನೀಡಲಾಗುತ್ತದೆ ಎಂದು ನಿರ್ಧಾರ ಕೈಗೊಂಡ ಕೆಲವೇ ಗಂಟೆಗಳಲ್ಲಿ ಅದನ್ನು ಬದಲಾಯಿಸುವ ಮೂಲಕ ಮುಖ್ಯಮಂತ್ರಿ ಅಶೋಕ್ ಚೌಹಾನ್ ನೇತೃತ್ವದ ಸರಕಾರ ಮೈಕೆಲ್ ಜಾಕ್ಸನ್‌ರಂತೆ 'ಮೂನ್‌ವಾಕ್' ಮಾಡಿದೆ. ಇಂತಹ ಹಲವು ನಿದರ್ಶನಗಳೇ ಕಾಂಗ್ರೆಸ್ ಆಡಳಿತಗಾರರಿಗಿರುವುದರಿಂದ, ಮರಾಠಿ ಮಾನೂಗಳು ಇದನ್ನಷ್ಟೇ ನಿರೀಕ್ಷಿಸಲು ಸಾಧ್ಯ ಎಂದು ಠಾಕ್ರೆ ತನ್ನ ಪಕ್ಷದ ಮುಖವಾಣಿ 'ಸಾಮ್ನಾ'ದಲ್ಲಿ ಬರೆದ ಬಹಿರಂಗ ಪತ್ರದಲ್ಲಿ ಟೀಕಿಸಿದ್ದಾರೆ.
PTI


ನಾವು ಯಾವುದೇ ಭಾಷೆಯ ವಿರೋಧಿಗಳಲ್ಲ. ಆದರೆ ಮಹಾರಾಷ್ಟ್ರದಲ್ಲಿ ನೀವು ಮರಾಠಿಯನ್ನು ಗೌರವಿಸದಿದ್ದರೆ, ಸಾರ್ವಜನಿಕರಿಂದ ಸರಕಾರದ ವಿರುದ್ಧ ಭಾರೀ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದಷ್ಟೇ ನಾನು ಹೇಳಲು ಬಯಸುತ್ತೇನೆ. ಇಂತಹ ಮರಾಠಿಗರಿಗೆ ವಿಶ್ವಾಸದ್ರೋಹ ಮಾಡುವಂತಹ ನಿರ್ಧಾರಗಳ ರಾಜಕೀಯವನ್ನು ತಕ್ಷಣವೇ ನಿಲ್ಲಿಸಿ ಎಂದು ಠಾಕ್ರೆ ಆಗ್ರಹಿಸಿದ್ದಾರೆ.

ಶಿವಸೇನೆಯ ಮತ್ತೊಬ್ಬ ನಾಯಕ ಕೂಡ ಇದೇ ರೀತಿ ಆಕ್ರೋಶ ವ್ಯಕ್ತಪಡಿಸಿದ್ದು, ಚೌಹಾನ್ ಮುಖ್ಯಮಂತ್ರಿ ಹುದ್ದೆಗೆ ಅವಮಾನ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಒಂದೇ ದಿನದಲ್ಲಿ ತನ್ನ ನಿರ್ಧಾರವನ್ನು ಬದಲಾಯಿಸುವ ಮೂಲಕ ಚೌಹಾನ್ ಒತ್ತಡದಲ್ಲಿದ್ದಾರೆ ಎಂಬುದು ಬಯಲಾಗಿದೆ. ಅವರು ಆ ಸ್ಥಾನದಲ್ಲಿ ಮುಂದುವರಿಯಲು ನೈತಿಕತೆ ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.

ಮರಾಠಿ ಓದಲು ಮತ್ತು ಬರೆಯಲು ಬರುವವರಿಗೆ ಮತ್ತು ಮಹಾರಾಷ್ಟ್ರದಲ್ಲಿ ಕನಿಷ್ಠ 15 ವರ್ಷ ವಾಸಿಸಿದವರಿಗೆ ಮಾತ್ರ ಮುಂದೆ ಟ್ಯಾಕ್ಸಿ ಪರವಾನಗಿ ನೀಡಲಾಗುತ್ತದೆ ಎಂದು ಮಹಾರಾಷ್ಟ್ರ ಸರಕಾರ ನಿರ್ಧರಿಸಿದ ಬಳಿಕ ಭಾರೀ ಟೀಕೆಗಳು ಬಂದ ಹಿನ್ನೆಲೆಯಲ್ಲಿ ನಿಲುವಿನಲ್ಲಿ ಅಲ್ಪ ಬದಲಾವಣೆ ಮಾಡಿಕೊಂಡಿದ್ದ ಸರಕಾರ, ಹಿಂದಿ ಮತ್ತು ಗುಜರಾತಿ ಭಾಷೆ ಗೊತ್ತಿದ್ದವರಿಗೂ ಪರವಾನಗಿ ನೀಡುತ್ತೇವೆ ಎಂದು ಪ್ರಕಟಿಸಿತ್ತು.

ಸರಕಾರದ ಬದಲಾದ ನಿಲುವಿಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ರಾಜ್ ಠಾಕ್ರೆ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಪುಟವು ಒಮ್ಮತದಿಂದ ತೆಗೆದುಕೊಂಡ ತೀರ್ಮಾನವನ್ನು ಚೌಹಾನ್ ಹೇಗೆ ಬದಲಾಯಿಸುತ್ತಾರೆ? ಸಂಪುಟದ ನಿರ್ಧಾರಕ್ಕೆ ಬದ್ಧರಾಗಿ ಉಳಿಯದ ಮುಖ್ಯಮಂತ್ರಿ ಅಸಹಾಯಕರು ಎಂದು ಬಣ್ಣಿಸಿರುವ ರಾಜ್, ಮರಾಠಿಗರಿಗೆ ಮಾತ್ರ ನಿಷ್ಠವೆನಿಸುವ ಮೊದಲಿನ ತೀರ್ಮಾನಕ್ಕೆ ಮರಳುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.

ಅಲ್ಲದೆ ದೇಶದ ಉಳಿದ ರಾಜ್ಯಗಳು ಕೂಡ ಇಂತಹುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ, ಸ್ಥಳೀಯ ಭಾಷಿಗರಿಗೆ ನಿಷ್ಠೆ ತೋರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ