ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್ ರಾಜಕೀಯ ಸಂವಾದ; ಬಿಜೆಪಿ ಸರ್ಕಾರ ನೊಟೀಸ್ (ABVP | Rahul Gandhi | Congress | BJP)
Bookmark and Share Feedback Print
 
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯವರ ಜತೆಗಿನ ವಿದ್ಯಾರ್ಥಿಗಳ ರಾಜಕೀಯ ಸಂವಾದಕ್ಕೆ ಅವಕಾಶ ಮಾಡಿಕೊಟ್ಟ ಇಂದೋರ್ ಯುನಿವರ್ಸಿಟಿಯೊಂದಕ್ಕೆ ಮಧ್ಯಪ್ರದೇಶ ಬಿಜೆಪಿ ಸರಕಾರ ನೊಟೀಸ್ ಜಾರಿ ಮಾಡಿದೆ.

ರಾಜ್ಯ ಸರಕಾರದ ಅನುಮತಿಯಿಲ್ಲದೆ ರಾಜಕಾರಣಿಯೊಬ್ಬರನ್ನು ಯುನಿವರ್ಸಿಟಿಯ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲು ಅವಕಾಶ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಎಬಿವಿಪಿ ಮತ್ತು ಬಿಜೆಪಿ ಭಾರೀ ಪ್ರತಿಭಟನೆ ನಡೆಸಿದ ನಂತರ ಸರಕಾರ ಈ ನೊಟೀಸ್ ನೀಡಿದೆ.

ದೇವಿ ಅಹಲ್ಯಾಭಾಯ್ ವಿಶ್ವ ವಿದ್ಯಾಲಯಕ್ಕೆ ಭೇಟಿ ನೀಡಿದ್ದ ರಾಹುಲ್, ವಿದ್ಯಾರ್ಥಿಗಳನ್ನು ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಭಾರತೀಯ ವಿದ್ಯಾರ್ಥಿ ಸಂಘಟನೆ (ಎನ್‌ಎಸ್‌ಯುಐ) ಮತ್ತು ಯುವ ಕಾಂಗ್ರೆಸ್ ಸೇರಿದಂತೆ ರಾಜಕೀಯಕ್ಕೆ ಸೇರುವಂತೆ ಒತ್ತಾಯಿಸಿದ್ದರು. ದೇಶಕ್ಕೆ ಯುವ ರಾಜಕಾರಣಿಗಳ ಅಗತ್ಯವಿದ್ದು, ರಾಜಕೀಯ ಕ್ಷೇತ್ರವನ್ನು ಆರಿಸಿಕೊಳ್ಳಿ ಎಂದು ತನ್ನನ್ನೇ ಉದಾಹರಣೆಯಾಗಿಟ್ಟುಕೊಂಡು ಹೇಳಿದ್ದರು.

ರಾಹುಲ್ ಅವರನ್ನು ಕಾಲೇಜು ಕ್ಯಾಂಪಸ್ಸಿನೊಳಗೆ ಪ್ರವೇಶಿಸಲು ಅವಕಾಶ ನೀಡಿದ ವಿಶ್ವವಿದ್ಯಾಲಯದ ಉಪ ಕುಲಪತಿ ಮತ್ತು ರಿಜಿಸ್ಟ್ರಾರ್ ಅವರಿಗೆ ಮಧ್ಯಪ್ರದೇಶ ಪ್ರೌಢ ಶಿಕ್ಷಣ ಇಲಾಖೆಯು ನೊಟೀಸ್ ಜಾರಿ ಮಾಡಿದ್ದು, ಸರಕಾರದ ಪೂರ್ವಾನುಮತಿ ಪಡೆಯದೆ ಇಂತಹ ರಾಜಕೀಯ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಉತ್ತರ ನೀಡುವಂತೆ ಆದೇಶಿಸಿದೆ.

ರಾಹುಲ್ ಹಲವು ಯುನಿವರ್ಸಿಟಿಗಳಿಗೆ ಭೇಟಿ ನೀಡಿ ರಾಜಕೀಯ ಸಂವಾದ ನಡೆಸಿದ್ದು, ಎಲ್ಲಾ ಕಾಲೇಜುಗಳಿಗೂ ರಾಜ್ಯ ಸರಕಾರ ನೊಟೀಸ್ ನೀಡಿದೆ. ಆದರೆ ಉಳಿದ ಕಾಲೇಜುಗಳು ಖಾಸಗಿಯಾಗಿರುವ ಕಾರಣ ಸರಕಾರ ಏನೂ ಮಾಡುವಂತಿಲ್ಲ ಎಂದು ಮೂಲಗಳು ಹೇಳಿವೆ.

ಬಿಜೆಪಿ ಸರಕಾರದ ಕ್ರಮಕ್ಕೆ ಇಲ್ಲಿನ ಕಾಂಗ್ರೆಸ್ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಾಹುಲ್ ಜನಪ್ರಿಯತೆಯನ್ನು ಸಹಿಸಿಕೊಳ್ಳಲಾಗದೆ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಟೀಕಿಸಿದೆ.

ಅಷ್ಟಕ್ಕೂ ರಾಹುಲ್‌ ಒಬ್ಬ ಕಾಂಗ್ರೆಸ್ ನಾಯಕರಾಗಿ ಯುನಿವರ್ಸಿಟಿಗಳಿಗೆ ಭೇಟಿ ನೀಡಿರಲಿಲ್ಲ. ಅವರೊಬ್ಬ ಸಂಸದರಾಗಿ ಬಂದಿದ್ದರು ಮತ್ತು ಅವರನ್ನು ಆಹ್ವಾನಿಸಲಾಗಿತ್ತು. ಅಲ್ಲಿ ಅವರು ಯಾವುದೇ ರಾಜಕೀಯ ಭಾಷಣ ಮಾಡಿಲ್ಲ. ಪಕ್ಷ ಅಥವಾ ಅದರ ಘಟಕಗಳನ್ನು ಸೇರಿವಂತೆಯೂ ಹೇಳಿಲ್ಲ. ರಾಜಕೀಯಕ್ಕೆ ಸೇರಬೇಕು ಎಂದು ಹೇಳುವ ಮೂಲಕ ವಿದ್ಯಾರ್ಥಿಗಳಲ್ಲಿ ರಾಜಕಾರಣದ ಕುರಿತಾಗಿನ ಕೆಟ್ಟ ಅಭಿಪ್ರಾಯಗಳನ್ನು ತೊಡೆದು ಹಾಕಲು ಯತ್ನಿಸಿದ್ದರು ಎಂದು ರಾಜ್ಯ ಕಾಂಗ್ರೆಸ್ ಘಟಕ ಸ್ಪಷ್ಟಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ