ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ಯಾರಾ-ಗ್ಲೈಡರ್ ಮೂಲಕ ಭಾರತ ದಾಳಿಗೆ ಲಷ್ಕರ್ ಸಿದ್ಧತೆ (para-glider | suicide attack | Lashkar-e-Taiba | India)
Bookmark and Share Feedback Print
 
ಯೂರೋಪ್‌ನಿಂದ 50ಕ್ಕೂ ಹೆಚ್ಚು ಪ್ಯಾರಾ-ಗ್ಲೈಡರುಗಳನ್ನು ಪಡೆದುಕೊಂಡಿರುವ ಪಾಕಿಸ್ತಾನ ಮೂಲದ ಲಷ್ಕರ್ ಇ ತೋಯ್ಬಾ ಉಗ್ರಗಾಮಿಗಳು ಭಾರತದ ಮೇಲೆ ಗಾಳಿಯಲ್ಲೇ ಬಂದು ಆತ್ಮಹತ್ಯಾ ದಾಳಿಗಳನ್ನು ನಡೆಸಬಹುದು ಎಂದು ಗುಪ್ತಚರ ಮಾಹಿತಿಗಳು ಎಚ್ಚರಿಕೆ ನೀಡಿವೆ.

ಗಣರಾಜ್ಯೋತ್ಸವ ದಿನ ಹತ್ತಿರವಾಗುತ್ತಿದ್ದಂತೆ ಗುಪ್ತಚರ ಇಲಾಖೆಯು ಈ ಮಾಹಿತಿಯನ್ನು ನೀಡಿರುವುದರಿಂದ ದೇಶದಾದ್ಯಂತ ಪ್ರಮುಖ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಕಟ್ಟೆಚ್ಚರ ರವಾನಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಲಷ್ಕರ್ ಇ ತೋಯ್ಬಾಕ್ಕೆ ನಿಷ್ಠರಾಗಿರುವ ಕೆಲವು ಪ್ಯಾರಾ-ಗ್ಲೈಡಿಂಗ್ ನಿಷ್ಣಾತರ ಕುರಿತು ಮಾಹಿತಿಗಳನ್ನು ನೀಡಲಾಗಿದೆ. ಇವರು ಯೂರೋಪ್‌ನಿಂದ ಸುಲಭವಾಗಿ ಈ ಪರಿಕರಗಳನ್ನು ಹೇಗೆ ಖರೀದಿಸಲು ಸಾಧ್ಯವಾಯಿತು ಎಂಬ ಬಗ್ಗೆ ಇದೀಗ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಲಷ್ಕರ್ ಇ ತೋಯ್ಬಾ ಭಯೋತ್ಪಾದಕರ ಗಾಳಿಯಲ್ಲೇ ನಡೆಸುವ ಸಂಭಾವ್ಯ ಆತ್ಮಾಹುತಿ ದಾಳಿಯನ್ನು ತಡೆಯುವ ಭಾಗವಾಗಿ ದೇಶದ ಹಲವು ಕಡೆಗಳಲ್ಲಿ ಭದ್ರತಾ ಪಡೆಗಳು ಅಣಕು ಕಾರ್ಯಾಚರಣೆಗಳನ್ನು ನಡೆಸಿವೆ.

ಲಷ್ಕರ್ ಇ ತೋಯ್ಬಾ ಮತ್ತು ಇತರ ಭಯೋತ್ಪಾದನಾ ಸಂಘಟನೆಗಳು ಏರ್ ಇಂಡಿಯಾ ವಿಮಾನಗಳನ್ನು ಅಪಹರಣ ಮಾಡುವ ಯೋಜನೆಗಳನ್ನು ರೂಪಿಸುತ್ತಿವೆ ಎಂದು ಬಂಧಿತ ಹುಜಿ ಉಗ್ರಗಾಮಿ ಸಂಘಟನೆ ದಕ್ಷಿಣ ಭಾರತ ಕಮಾಂಡರ್ ಬಾಯ್ಬಿಟ್ಟ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಹೆಚ್ಚಿನ ತಪಾಸಣೆಗಳನ್ನು ನಡೆಸಲಾಗುತ್ತಿದೆ.

ಆಯಕಟ್ಟಿನ ಸ್ಥಳಗಳಲ್ಲಿ ರಾಡಾರ್‌ಗಳನ್ನು ನಿರ್ಮಿಸಲಾಗಿದ್ದು, ಕಡಿಮೆ ಎತ್ತರದಲ್ಲಿ ಹಾರುತ್ತಿರುವ ವಸ್ತುಗಳಿಂದ ತೊಂದರೆ ಸಂಭವಿಸದಂತೆ ಹೊಡೆದುರುಳಿಸುವ ಯಾವುದೇ ಅವಕಾಶಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ಮೂಲಗಳು ಹೇಳಿವೆ.

ರಾಷ್ಟ್ರಪತಿ ಭವನ, ಪ್ರಧಾನ ಮಂತ್ರಿಗಳ ಕಚೇರಿ, ಗೃಹ ಸಚಿವಾಲಯ, ರಕ್ಷಣಾ ಸಚಿವಾಲಯ, ಹಣಕಾಸು ಸಚಿವಾಲಯ, ವಿದೇಶಾಂಗ ಸಚಿವಾಲಯ ಸೇರಿದಂತೆ ಹಲವು ಪ್ರಮುಖ ಕಟ್ಟಡಗಳ ಮೇಲೆ ಯಾವುದೇ ಹಾರಾಟ ನಡೆಸಲು ಪ್ರಸಕ್ತ ಅನುಮತಿಯಿಲ್ಲ. ಹಾಗಾಗಿ ಉಳಿದೆಡೆ ಕೂಡ ಯಾವುದೇ ವಿಧ್ವಂಸಕ ಕೃತ್ಯಗಳು ನಡೆಯದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ