ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬುರ್ಖಾ ತೆಗಿಯಲ್ಲ ಅಂದ್ರೆ ಓಟ್ ಹಾಕೋದು ಬೇಡ: ಸುಪ್ರೀಂ (vote | burqa | Muslim women | KG Balakrishnan)
Bookmark and Share Feedback Print
 
ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಚುನಾವಣಾ ಗುರುತು ಚೀಟಿಯಲ್ಲಿ ಮುದ್ರಿಸುವುದು ಇಸ್ಲಾಂ ಧರ್ಮದ ಪ್ರಕಾರ ನಿಷಿದ್ಧ. ಹಾಗಾಗಿ ಇದರಿಂದ ವಿನಾಯಿತಿ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿರುವ ಸುಪ್ರೀಂ ಕೋರ್ಟ್, ಬುರ್ಖಾ ತೆಗೆಯಲು ನಿರಾಕರಿಸುವ ಮುಸ್ಲಿಂ ಮಹಿಳೆಯರಿಗೆ ಚುನಾವಣಾ ಗುರುತು ಚೀಟಿ ನೀಡಬಾರದು ಎಂದು ಆದೇಶ ನೀಡಿದೆ.

ಮಧುರೈ ನಿವಾಸಿ ಅಜ್ಮಲ್ ಖಾನ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಆಲಿಸಿದ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತು ದೀಪಕ್ ವರ್ಮಾ ಅವರನ್ನೊಳಗೊಂಡ ಪೀಠವು ಬೇಡಿಕೆಯನ್ನು ನಿರಾಕರಿಸಿದೆ.
IFM


ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಮತದಾರರ ಗುರುತು ಚೀಟಿಯಲ್ಲಿ ಮುದ್ರಿಸುವುದು ಇಸ್ಲಾಂಗೆ ವಿರುದ್ಧವಾದುದು ಮತ್ತು ಇದು ಧಾರ್ಮಿಕ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುತ್ತದೆ ಎಂದು ಖಾನ್ ವಾದಿಸಿದ್ದರು.

ಅವರ ವಾದದಿಂದ ಸಮಾಧಾನಗೊಳ್ಳದ ಸುಪ್ರೀಂ ಕೋರ್ಟ್, ಮುಸ್ಲಿಂ ಮಹಿಳೆಯರು ಚುನಾವಣೆಗಳಲ್ಲಿ ಸ್ಪರ್ಧಿಸಬೇಕಾದಲ್ಲಿ ಏನು ಮಾಡುತ್ತೀರಿ ಎಂದು ಪ್ರಶ್ನಿಸಿತು.

ನಿಮ್ಮ ಮಹಿಳೆಯರು ಚುನಾವಣೆಗೆ ಸ್ಪರ್ಧಿಸುವ ಸಂದರ್ಭಗಳಲ್ಲಿ ಏನು ಮಾಡುತ್ತೀರಿ? ಸಾರ್ವಜನಿಕರು ನೋಡಬಾರದೆಂಬ ಆ ರೀತಿಯ ಪ್ರಬಲ ಧಾರ್ಮಿಕ ಭಾವನೆಗಳು ನಿಮಗಿದ್ದರೆ ಮತದಾನ ಮಾಡಲು ಹೋಗಬೇಡಿ. ನೀವು ಬುರ್ಖಾ ಹಾಕಿಕೊಂಡು ಮತ ಚಲಾಯಿಸುವಂತಿಲ್ಲ. ಬುರ್ಖಾದೊಂದಿಗೆ ಓಟು ಹಾಕಲು ಹೋದಲ್ಲಿ ಗುರುತಿಸುವಿಕೆ ವಿಚಾರದಲ್ಲಿ ಗೊಂದಲ ಉಂಟಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಮುಖ ಮುಚ್ಚಿಕೊಂಡಿರುವ ಚಿತ್ರವನ್ನು ಹೊಂದಿರುವ ಗುರುತುಚೀಟಿಯೊಂದಿಗೆ ಬುರ್ಖಾ ಹಾಕಿಕೊಂಡು ಮತ ಚಲಾಯಿಸಲು ಯಾರಾದರೂ ಬಂದಲ್ಲಿ ಅವರನ್ನು ಯಾರೆಂದು ಗುರುತಿಸುವುದಾದರೂ ಹೇಗೆ ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ಅರ್ಜಿದಾರರನ್ನು ಪ್ರಶ್ನಿಸಿತು.

ಮುಸ್ಲಿಂ ಮಹಿಳೆಯರು ಪರ್ದಾ ಮತ್ತು ಬುರ್ಖಾ ಹಾಕಿಕೊಳ್ಳಬೇಕೆಂದು ಪವಿತ್ರ ಕುರಾನ್ ಹೇಳುತ್ತದೆ. ಅವರು ತಮ್ಮ ಗಂಡಂದಿರು ಮತ್ತು ಸಂಬಂಧಿಕರಿಗೆ ಮಾತ್ರ ತಮ್ಮ ಮುಖ ತೋರಿಸಬಹುದಾಗಿದೆ ಎಂದು ಖಾನ್ ತನ್ನ ಅರ್ಜಿಯಲ್ಲಿ ಹೇಳಿದ್ದರು.

ಮುಸ್ಲಿಂ ಮಹಿಳೆಯರು ಮತದಾರರ ಗುರುತು ಚೀಟಿಯ ವಿರೋಧಿಗಳಲ್ಲ, ಆದರೆ ತಮ್ಮ ಚಿತ್ರಗಳನ್ನು ಸಾರ್ವಜನಿಕ ದಾಖಲೆಯಲ್ಲಿ ಮುದ್ರಿಸುವುದನ್ನು ಅವರು ವಿರೋಧಿಸುತ್ತಾರೆ ಎಂದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ