ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹುಡ್ಗೀರು ಲೇಟಾಗಿ ಮದ್ವೆಯಾದ್ರೆ ಜನಸಂಖ್ಯೆ ನಿಯಂತ್ರಣಕ್ಕೆ! (early marriage | girls | control population | ASHA)
Bookmark and Share Feedback Print
 
ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನ ಹೊಂದಿರುವ ಭಾರತ ಕೆಲವೇ ವರ್ಷಗಳಲ್ಲಿ ಚೀನಾವನ್ನು ಮೀರಿಸುವುದನ್ನು ತಪ್ಪಿಸಬೇಕೆಂದು ಸರಕಾರಕ್ಕಿಂತ ಹೆಚ್ಚು ಸಂಘ-ಸಂಸ್ಥೆಗಳು ಶ್ರಮಿಸುತ್ತಿರುವುದು ಗೊತ್ತಿರುವ ವಿಷಯವಷ್ಟೆ.

ಈ ನಿಟ್ಟಿನಲ್ಲಿ ಹೆತ್ತವರಿಗೆ ಕರೆ ನೀಡಿರುವ ಸಾಮಾಜಿಕ ಸೇವಾ ಸಂಘಟನೆಯೊಂದು ನಿಮ್ಮ ಹೆಣ್ಮಕ್ಕಳಿಗೆ ಎಳೆಯ ಪ್ರಾಯದಲ್ಲೇ ಮದುವೆ ಮಾಡಬೇಡಿ ಎಂದಿದೆ. ಇದು ಜನಸಂಖ್ಯಾ ಸ್ಫೋಟಕ್ಕೆ ಕಾರಣವಾಗುತ್ತದೆ ಎಂಬುದು ಅದರ ಅಭಿಪ್ರಾಯ.
WD


ಆಶಾ ಸಂಘಟನೆಯ ಮುಖ್ಯಸ್ಥೆ ಮಾತನಾಡುತ್ತಾ, ಹೆಣ್ಮಕ್ಕಳಿಗೆ 19 ವರ್ಷ ತುಂಬುವ ಮೊದಲು ಮದುವೆ ಮಾಡದಂತೆ ಜಾಗೃತಿ ಮೂಡಿಸಬೇಕಾಗಿದೆ. ಅಲ್ಲದೆ ಅವರು ಮದುವೆಯಾದ ಮೂರು ವರ್ಷಗಳ ನಂತರವಷ್ಟೇ ತಮ್ಮ ಮೊದಲನೇ ಮಗುವನ್ನು ಹೆರುವಂತಾಗಬೇಕು ಎಂದು ಸಲಹೆ ನೀಡಿದರು.

ಇಬ್ಬರು ಮಕ್ಕಳಾದ ಮೇಲೆ ಕುಟುಂಬ ಕಲ್ಯಾಣ ಯೋಜನೆಯನ್ನು ಅನುಸರಿಸುವವರನ್ನು ನಾವೆಲ್ಲ ಪ್ರೋತ್ಸಾಹಿಸಬೇಕು. ಇದರಿಂದ ಜನಸಂಖ್ಯೆಯಲ್ಲಾಗುತ್ತಿರುವ ಭಾರೀ ಏರಿಕೆಯನ್ನು ತಡೆಯಬಹುದಾಗಿದೆ ಎಂದರು.

ಹೆಣ್ಣಾಗಲಿ ಗಂಡಾಗಲಿ ಮಗು ಎರಡಿರಲಿ ಎಂಬ ನಿಯಮವನ್ನೂ ಸಡಿಲಿಸುವ ಅಗತ್ಯವಿದ್ದು, ಒಂದೇ ಮಗುವಿಗೆ ಸೀಮಿತವಾಗಬೇಕಾದ ಅನಿವಾರ್ಯತೆ ನಮ್ಮ ವ್ಯವಸ್ಥೆಯಲ್ಲಿ ಸೃಷ್ಟಿಯಾಗುತ್ತಿದೆ ಎಂದೂ ಇದೇ ಸಂದರ್ಭದಲ್ಲಿ ಅಭಿಪ್ರಾಯಪಡಲಾಯಿತು.

ಜನಸಂಖ್ಯೆ ಕಡಿಮೆಗೊಳಿಸಲು ಲೇಟಾಗಿ ಮದುವೆಯಾಗಬೇಕು ಎಂದು ಈ ಹಿಂದೆ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬೀ ಆಜಾದ್ ಕೂಡ ಹೇಳಿದ್ದರು.

18 ವರ್ಷದ ನಂತರ ಮದುವೆಯಾಗುವ ಮತ್ತು ಕುಟುಂಬ ಯೋಜನೆ ಮಾಡಿಸಿಕೊಂಡಿರುವ ದಂಪತಿಗಳನ್ನು ಪುರಸ್ಕರಿಸುವ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಆಜಾದ್, ಇಂಥವರನ್ನೆಲ್ಲಾ ಸನ್ಮಾನಿಸುವ ಅಗತ್ಯವಿಲ್ಲ. ಯಾಕೆಂದರೆ ಅವರೆಲ್ಲರೂ ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದಾರೆ. 30-31 ವರ್ಷದವರು ಮದುವೆಯಾದರೆ ಮಾತ್ರವೇ ಸನ್ಮಾನ ಮಾಡಬೇಕು ಎಂದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ