ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತ ಸರಕಾರದ ಜಾಹೀರಾತಿನಲ್ಲಿ ಪಾಕ್ ಮಾಜಿ ಅಧಿಕಾರಿ! (Ex-Pak air force chief | Indian govt advt | National Girl Child Day | Pakistan)
Bookmark and Share Feedback Print
 
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಪತ್ರಿಕೆಗಳಿಗೆ ನೀಡಿದ್ದ ಪೂರ್ಣಪುಟದ ಜಾಹೀರಾತಿನಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಪಾಕಿಸ್ತಾನ ವಾಯುಪಡೆಯ ಮಾಜಿ ಮುಖ್ಯಸ್ಥರ ಚಿತ್ರವನ್ನೂ ಪ್ರಕಟಿಸುವ ಮೂಲಕ ಕೇಂದ್ರ ಸರಕಾರ ದಿಗ್ಭ್ರಮೆ ಹುಟ್ಟಿಸುವುದರೊಂದಿಗೆ ನಗೆಪಾಟಲಿಗೀಡಾಗಿದೆ.
ಸರಕಾರ ಪ್ರಕಟಿಸಿರುವ ಜಾಹೀರಾತು
PR


'ನಿಮ್ಮ ತಾಯಿಯನ್ನು ಹುಟ್ಟಲು ಬಿಡದೇ ಇರುತ್ತಿದ್ದರೆ ನೀವೆಲ್ಲಿರುತ್ತಿದ್ದೀರಿ?' ಎಂಬ ಸಂದೇಶವನ್ನು ಹೊತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಜಾಹೀರಾತಿನಲ್ಲಿ ಖ್ಯಾತ ಕ್ರೀಡಾಪಟುಗಳಾದ ಕಪಿಲ್ ದೇವ್, ವೀರೇಂದ್ರ ಸೆಹ್ವಾಗ್ ಮತ್ತು ಸರೋದ್ ಮಾಂತ್ರಿಕ ಉಸ್ತಾದ್ ಅಮ್ಜದ್ ಆಲಿ ಖಾನ್ ಅವರೊಂದಿಗೆ ಪಾಕಿಸ್ತಾನದ ವಾಯುಪಡೆಯ ಮಾಜಿ ಮುಖ್ಯಸ್ಥ ತನ್ವೀರ್ ಮಹ್ಮೂದ್ ಅಹ್ಮದ್ ಅವರ ಚಿತ್ರವನ್ನೂ ಮುದ್ರಿಸಲಾಗಿದೆ-- ಅದೂ ಪಾಕಿಸ್ತಾನ ನೌಕಾಪಡೆಯ ಸಮವಸ್ತ್ರದೊಂದಿಗೆ!

ಆಗಿರುವ ತಪ್ಪಿನ ಬಗ್ಗೆ ಪಶ್ಚಾತಾಪಪಡುವ ಬದಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಕೃಷ್ಣಾ ತಿರಾತ್ ಉದ್ಧಟತನವನ್ನೂ ಮೆರೆದಿದ್ದಾರೆ. ಅಲ್ಲದೆ, ಮಾಧ್ಯಮಗಳು ಇದನ್ನು ಅನಗತ್ಯವಾಗಿ ದೊಡ್ಡದು ಮಾಡುತ್ತಿವೆ ಎಂದೂ ಆರೋಪಿಸಿದ್ದಾರೆ.

ಒಂದು ಚಿತ್ರಕ್ಕಿಂತ ಅದರಲ್ಲಿನ ಸಂದೇಶ ಮುಖ್ಯ. ಚಿತ್ರವೆನ್ನುವುದು ಕೇವಲ ಸಾಂಕೇತಿಕ. ಹೆಣ್ಮಕ್ಕಳಿಗೆ ನೀಡುವ ಸಂದೇಶವೇ ಮಹತ್ವದ್ದು. ಆಕೆಯನ್ನು ರಕ್ಷಿಸಬೇಕು ಎಂದು ತಿರಾತ್ ತೇಪೆ ಹಚ್ಚಲೆತ್ನಿಸಿದ್ದಾರೆ.

ನಂತರ ಮಾತನಾಡಿದ ಅವರು, ಇದು ತನ್ನ ಸಚಿವಾಲಯದಿಂದ ಆಗಿರುವ ಪ್ರಮಾದವೋ ಅಥವಾ ಸರಕಾರಿ ಜಾಹೀರಾತುಗಳನ್ನು ಬಿಡುಗಡೆ ಮಾಡುವ ನಿರ್ದೇಶನಾಲಯದ (ಡಿಎವಿಪಿ) ತಪ್ಪೋ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದರು.

ಜಾಹೀರಾತು ಬಿಡುಗಡೆಯಾಗುವ ಕೊನೆಯ ಕ್ಷಣದಲ್ಲಿ ಡಿಎವಿಪಿ ಇದನ್ನು ನೋಡುತ್ತದೆ. ಅಷ್ಟಕ್ಕೂ ಪಾಕಿಸ್ತಾನದ ಈ ಮಾಜಿ ಅಧಿಕಾರಿಯ ಫೋಟೋ ಮಾತ್ರ ಪ್ರಕಟಿಸಲಾಗಿದೆ, ಹೆಸರನ್ನು ಪ್ರಕಟಿಸಿಲ್ಲವಲ್ಲ ಎಂದು ಮತ್ತೊಂದು 'ಆಗದ ಪ್ರಮಾದ'ದ ಬಗ್ಗೆ ಬೆನ್ನು ತಟ್ಟಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ