ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೈಂಗಿಕ ಕಾರ್ಯಕರ್ತೆಯರು ಆರೋಪಿಗಳಲ್ಲ, ಬಲಿಪಶುಗಳು (Sex workers | Immoral Trafficking | Karnataka | Sex)
Bookmark and Share Feedback Print
 
ಕರ್ನಾಟಕ ಮೂಲದ ಇಬ್ಬರು ಮಹಿಳೆಯರನ್ನು ಬಂಧಿಸಿದ್ದ ಪ್ರಕರಣವನ್ನು ಉದಾಹರಿಸಿರುವ ಇಲ್ಲಿನ ನ್ಯಾಯಾಲಯವೊಂದು, ಲೈಂಗಿಕ ಕಾರ್ಯಕರ್ತೆಯರನ್ನು ಆರೋಪಿಗಳೆಂದು ಪರಿಗಣಿಸುವ ಬದಲು ಬಲಿಪಶುಗಳೆಂದು ಗುರುತಿಸಬೇಕು ಎಂದು ಹೇಳಿದೆ.

20ರ ಹರೆಯದಲ್ಲೇ ಕರ್ನಾಟಕದಿಂದ ಬಂದಿದ್ದ ಇಬ್ಬರು ಯುವತಿಯರನ್ನು ಜನವರಿ 12ರಂದು ಕೊಯಂಬತ್ತೂರು ಮಹಿಳಾ ಪೊಲೀಸರು ಅನೈತಿಕ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿಯಲ್ಲಿ ಬಂಧಿಸಿದ್ದರು. ಅವರು ಬೀದಿಗಳಲ್ಲಿ ನಿಂತು ಗಿರಾಕಿಗಳನ್ನು ಆಕರ್ಷಿಸಲು ಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿತ್ತು.
WD


ಪ್ರಕರಣದ ವಿಚಾರಣೆ ನಡೆಸಿದ ಕೊಯಂಬತ್ತೂರು ಮ್ಯಾಜಿಸ್ಟ್ರೇಟ್ ಕೋರ್ಟ್, ವ್ಯಾವಹಾರಿಕ ಲೈಂಗಿಕ ಕಾರ್ಯಕರ್ತೆಯನ್ನು ಅನೈತಿಕ ಚಟುವಟಿಕೆ ಕಾಯ್ದೆಯಡಿಯಲ್ಲಿ ಬಂಧಿಸಬೇಡಿ. ಅವರನ್ನು ಬಲಿಪಶುಗಳು ಎಂದು ಪರಿಗಣಿಸಿ ಜೈಲಿಗೆ ಕಳುಹಿಸಬೇಕೇ ಹೊರತು, ಆರೋಪಿಗಳೆಂದಲ್ಲ ಎಂದು ನಿರ್ದೇಶನ ನೀಡಿದೆ.

ಮಹಿಳೆಯರ ಜಾಮೀನು ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಎಲ್.ಸಿ. ಸತ್ಯಮೂರ್ತಿ, ತಕ್ಷಣವೇ ಅವರನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿದರು.

ಲೈಂಗಿಕ ಕಾರ್ಯಕರ್ತೆಯರೆಡೆಗಿನ ನ್ಯಾಯಾಂಗದ ದೃಷ್ಟಿಕೋನವನ್ನು ಪರಾಮರ್ಶಿಸಿದ ನ್ಯಾಯಾಧೀಶರು, ಅವರು ಈ ವ್ಯವಹಾರಕ್ಕಳಿಯಲು ಹಣದ ಅಗತ್ಯ, ಬೇರೆ ಅವಕಾಶಗಳು ಇಲ್ಲದೇ ಇರುವುದು ಮತ್ತು ನತದೃಷ್ಟಗಾರಿರುವುದು ಕಾರಣ ಎಂದು ವಿಶ್ಲೇಷಿಸಿದರು.
ಸಂಬಂಧಿತ ಮಾಹಿತಿ ಹುಡುಕಿ