ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾತ್ರಿರಾಣಿಯರಿಗೆ ತಾಳಿ ಬಿಗಿಯಲಿದ್ದಾರೆ ಸಾವಿರಾರು ಯುವಕರು! (marry sex workers | New Delhi | professionals | sex workers)
Bookmark and Share Feedback Print
 
ವೇಶ್ಯೆಯರಿಗೂ ಒಂದು ವೈಯಕ್ತಿಕ ಜೀವನವಿದೆ ಮತ್ತು ಅದನ್ನು ತಾವು ಗೌರವಿಸಬೇಕೆನ್ನುವ ಪ್ರಜ್ಞೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದಕ್ಕೆ ನಿದರ್ಶನವೆಂಬಂತೆ ಸಾವಿರಾರು ಯುವಕರು ಸಮಾಜದ ಕೆಳಸ್ತರದಲ್ಲಿರುವ ವೃತ್ತಿಯವರಿಗೆ ಬಾಳು ಕೊಡಲು ಮುಂದಾಗಿದ್ದಾರೆ.

ಹರ್ಯಾಣದಲ್ಲಿನ ಸಿರ್ಸಾದ 'ದೇರಾ ಸಚ್ಚಾ ಸೌದಾ' ಆಯೋಜಿಸುವ ಈ ಸಮಾರಂಭದಲ್ಲಿ ಕೊಲ್ಕತ್ತಾ ಮತ್ತು ನವದೆಹಲಿಗಳಲ್ಲಿನ ಲೈಂಗಿಕ ಕಾರ್ಯಕರ್ತೆಯರಿಗೆ ಮದುವೆ ಮಾಡಿಸಲಾಗುತ್ತದೆ. ಇದಕ್ಕೆ ಸೇರಿದ ಸಂಘಟನೆಯಲ್ಲಿ ವೃತ್ತಿಪರರೂ ಸೇರಿದಂತೆ 1,400ಕ್ಕೂ ಹೆಚ್ಚು ಯುವಕರಿದ್ದು, ಕೆಲವರು ನಾಳಿನ ಸಮಾರಂಭದಲ್ಲಿ ಮದುವೆಯಾಗಲಿದ್ದಾರೆ.

ವೇಶ್ಯಾವೃತ್ತಿಗೆ ಬಲವಂತವಾಗಿ ತಳ್ಳಲ್ಪಟ್ಟವರು ಮತ್ತು ಈ ನರಕದಿಂದ ಪಾರಾಗಲು ಬಯಸುವ ಮಹಿಳೆಯರನ್ನು ನಮ್ಮ ಸಂಘಟನೆಯ 1,400ಕ್ಕೂ ಹೆಚ್ಚು ಯುವಕರು ಸಿದ್ಧರಿದ್ದಾರೆ. ಆ ಪ್ರಯುಕ್ತ ನಾಳೆ ಕಾರ್ಯಕ್ರಮ ನಡೆಯುತ್ತಿದೆ. ಅಂತಹ ಯುವತಿಯರನ್ನು ಮತ್ತು ಅವರ ಮಕ್ಕಳನ್ನು ಕಾನೂನಿನ ಪ್ರಕಾರ ದತ್ತು ಪಡೆದುಕೊಲ್ಳಲು ಕೂಡ ಕೆಲವು ಕುಟುಂಬಗಳು ನಿರ್ಧರಿಸಿವೆ ಎಂದು ಈ ಯುವಕರ ಸಮೂಹದ ವಕ್ತಾರ ಆದಿತ್ಯ ಇನ್ಸಾನ್ ತಿಳಿಸಿದ್ದಾರೆ.

ನಮ್ಮ ಸಮೂಹ ಸಂಘಟನೆಯಲ್ಲಿರುವ ಎಲ್ಲಾ ಕಾರ್ಯಕರ್ತರು ದೇರಾಕ್ಕೆ ಸೇರಿದವರು ಎಂದು ಅವರು ಹೇಳಿಕೊಂಡಿದ್ದಾರೆ.

ಅವರಲ್ಲಿ ಎರಡು ಅಥವಾ ಮೂರು ಮಂದಿ ನಾಳೆ ಮದುವೆಯಾಗುತ್ತಿದ್ದಾರೆ. ಇತರರು ಕೂಡ ವರ್ಷದೊಳಗೆ ಇದೇ ಹಾದಿ ತುಳಿಯಲಿದ್ದಾರೆ. ಎಚ್‌ಐವಿ/ಏಡ್ಸ್‌ ಹರಡುವುದನ್ನು ನಿಯಂತ್ರಿಸುವುದು ಕೂಡ ನಮ್ಮ ಗುರಿ ಎಂದು ಇನ್ಸಾನ್ ತಿಳಿಸಿದ್ದಾರೆ.

ನಾವು ಮಾದಕ ದ್ರವ್ಯಗಳನ್ನು ಬಳಸುತ್ತಿರುವವರು ಮತ್ತು ಲೈಂಗಿಕ ಕಾರ್ಯಕರ್ತೆಯರನ್ನು ತೀವ್ರ ಅಪಾಯದಿಂದ ರಕ್ಷಿಸಲು ಯತ್ನಿಸುತ್ತೇವೆ. ಆ ಮೂಲಕ ಕಿಂಚಿತ್ತು ಸಮಾಧಾನ ನಮಗೆ ಸಿಗುತ್ತದೆ ಎಂದು ಸಂಘಟನೆ ಹೇಳಿಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ