ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗವಾಯಿ, ಚುಂಚನಗಿರಿ ಶ್ರೀ, ಅರುಂಧತಿ, ಅಮೀರ್‌ಗೆ ಪದ್ಮ ಪ್ರಶಸ್ತಿ
(Aamir Khan | Saina Nehwal | Saif Ali Khan | Padmabhushan)
ಗವಾಯಿ, ಚುಂಚನಗಿರಿ ಶ್ರೀ, ಅರುಂಧತಿ, ಅಮೀರ್‌ಗೆ ಪದ್ಮ ಪ್ರಶಸ್ತಿ
ನವದೆಹಲಿ, ಸೋಮವಾರ, 25 ಜನವರಿ 2010( 18:24 IST )
ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರಪತಿಗಳು ಪ್ರದಾನ ಮಾಡುವ ರಾಷ್ಟ್ರದ ಅತ್ಯುನ್ನತ ಗೌರವಗಳಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಡಾ. ಬಾಲಗಂಗಾಧರನಾಥ ಸ್ವಾಮೀಜಿ, ಪಂಡಿತ್ ಡಾ. ಪುಟ್ಟರಾಜ ಗವಾಯಿ, ಇಳಯರಾಜ, ಎ.ಆರ್. ರೆಹಮಾನ್, ಅಮೀರ್ ಖಾನ್‌ರವರಿಗೆ ಪದ್ಮಭೂಷಣ ಹಾಗೂ ಅರುಂಧತಿ ನಾಗ್, ಚಿತ್ರನಟಿ ರೇಖಾ, ರಸೂಲ್ ಪೂಕುಟ್ಟಿ, ಸೈಫ್ ಆಲಿ ಖಾನ್, ಸೈನಾ ನೆಹ್ವಾಲ್, ವಿಜೇಂದರ್ ಸಿಂಗ್, ವೀರೇಂದ್ರ ಸೆಹ್ವಾಗ್ ಅವರನ್ನು ಪದ್ಮಶ್ರೀ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
ಕರ್ನಾಟಕದ ಆದಿಚುಂಚನಗಿರಿ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ, ಪಂಡಿತ್ ಡಾ. ಪುಟ್ಟರಾಜ ಗವಾಯಿ, ಪ್ರೊ. ಬೆಳ್ಳೆ ಮೋನಪ್ಪ ಹೆಗ್ಡೆಯವರಿಗೆ ಪದ್ಮಭೂಷಣ ಹಾಗೂ ರಂಗಭೂಮಿ ಕಲಾವಿದೆ ಅರುಂಧತಿ ನಾಗ್, ಡಾ. ಬಿ. ರಮಣ ರಾವ್, ಪ್ರೊ. ಕೊಡಗನೂರ್ ಎಸ್. ಗೋಪಿನಾಥ್, ಪ್ರೊ. ಎಂ.ಆರ್. ಸತ್ಯನಾರಾಯಣ ರಾವ್, ಡಾ. ವಿಜಯಲಕ್ಷ್ಮಿ ರವೀಂದ್ರನಾಥ್ ಅವರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಎಚ್.ಎನ್. ಸತ್ಯನಾರಾಯಣ ರಾವ್, ಎಂ.ಆರ್. ಪೂಜಾರ್, ಶೇಖ್ ಅಬ್ದುಲ್ ಖಾದಿರ್ ಸೇರಿದಂತೆ ಕರ್ನಾಟಕದ 18 ಪೊಲೀಸ್ ಅಧಿಕಾರಿಗಳಿಗೂ ಪೊಲೀಸ್ ಪದಕ ಪ್ರಶಸ್ತಿ ಪ್ರಕಟಿಸಲಾಗಿದೆ.
ಕನ್ನಡ ನಟ ಸಾಹಸಸಿಂಹ ವಿಷ್ಣುವರ್ದನ್ ಅವರಿಗೆ ಮರಣೋತ್ತರ ಪದ್ಮಭೂಷಣ ಪ್ರಶಸ್ತಿ ನೀಡಬೇಕೆಂದು ರಾಜ್ಯ ಸರಕಾರ ಮನವಿ ಮಾಡಿತ್ತಾದರೂ, ಕೇಂದ್ರ ಈ ಬಗ್ಗೆ ಗಮನಹರಿಸದೆ ಕನ್ನಡಿಗರಿಗೆ ತೀವ್ರ ನಿರಾಸೆಯುಂಟು ಮಾಡಿದೆ.
ಮಾರ್ಚ್-ಏಪ್ರಿಲ್ ತಿಂಗಳೊಳಗೆ ರಾಷ್ಟ್ರಪತಿಗಳು ಪ್ರದಾನ ಮಾಡುವ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳಿಗಾಗಿ ಒಟ್ಟು 130 ಮಂದಿ ಗಣ್ಯರನ್ನು ಆಯ್ಕೆ ನಡೆಸಲಾಗಿದೆ. ಇದರಲ್ಲಿ ಆರು ಪದ್ಮವಿಭೂಷಣ, 43 ಪದ್ಮಭೂಷಣ ಹಾಗೂ 81 ಪದ್ಮ ಶ್ರೀ ಪ್ರಶಸ್ತಿಗಳು ಸೇರಿವೆ. ಒಟ್ಟು 17 ಮಹಿಳೆಯರನ್ನು ಕೂಡ ಪ್ರಶಸ್ತಿಗಳಿಗೆ ಪರಿಗಣಿಸಿರುವುದು ವಿಶೇಷ.
ಇವರಿಗೆ ಪದ್ಮವಿಭೂಷಣ... * ಇಬ್ರಾಹಿಂ ಅಲ್ಕಾಜಿ, ಕಲೆ, ದೆಹಲಿ * ಉಮಯಾಲ್ಪುರಂ ಕೆ. ಶ್ರೀನಿವಾಸನ್, ಕಲೆ, ತಮಿಳುನಾಡು * ಝೋಹ್ರಾ ಸೇಗಾಲ್, ಕಲೆ, ದೆಹಲಿ * ಡಾ. ಯಾಗಾ ವೇಣುಗೋಪಾಲ ರೆಡ್ಡಿ, ಸಾರ್ವಜನಿಕ ವ್ಯವಹಾರ, ಆಂಧ್ರಪ್ರದೇಶ * ಡಾ. ವೆಂಕಟರಾಮನ್ ರಾಮಕೃಷ್ಣನ್, ವಿಜ್ಞಾನ ಮತ್ತು ಇಂಜಿನಿಯರಿಂಗ್, ಬ್ರಿಟನ್ * ಡಾ. ಪ್ರತಾಪ್ ಚಂದ್ರ ರೆಡ್ಡಿ, ಉದ್ಯಮ ಮತ್ತು ಕೈಗಾರಿಕೆ, ತಮಿಳುನಾಡು.
ಪದ್ಮಭೂಷಣ ಪಡೆದ ಕರ್ನಾಟಕದವರು: * ಪಂಡಿತ್ ಡಾ. ಪುಟ್ಟರಾಜ ಗವಾಯಿ, ಕಲೆ * ಪ್ರೊ. ಬೆಳ್ಳೆ ಮೋನಪ್ಪ ಹೆಗ್ಡೆ (ಬಿ.ಎಂ. ಹೆಗ್ಡೆ), ಮೆಡಿಸಿನ್ * ಡಾ. ಬಾಲಗಂಗಾಧರನಾಥ ಸ್ವಾಮೀಜಿ, ಸಮಾಜಸೇವೆ
ಪದ್ಮಭೂಷಣ ಪಡೆದ ಇತರ ಪ್ರಮುಖರು: * ಇಳಯರಾಜ, ಸಂಗೀತ ನಿರ್ದೇಶಕ, ತಮಿಳುನಾಡು * ಅಮೀರ್ ಖಾನ್, ನಟ-ನಿರ್ದೇಶಕ, ಮಹಾರಾಷ್ಟ್ರ * ಎ.ಆರ್. ರೆಹಮಾನ್, ಸಂಗೀತ ನಿರ್ದೇಶಕ, ತಮಿಳುನಾಡು * ಮಲ್ಲಿಕಾ ಸಾರಾಭಾಯ್, ನೃತ್ಯಗಾತಿ, ಗುಜರಾತ್ * ಡಾ. ಪನ್ನಿಯಂಪಿಳ್ಲೈ ಕೃಷ್ಣ ವಾರಿಯರ್, ಮೆಡಿಸಿನ್, ಕೇರಳ
ಪದ್ಮಶ್ರೀ ಪಡೆದ ಕರ್ನಾಟಕದವರು: * ಅರುಂಧತಿ ನಾಗ್, ರಂಗಭೂಮಿ * ಡಾ. ಬಿ. ರಮಣ ರಾವ್, ಮೆಡಿಸಿನ್ * ಪ್ರೊ. ಕೊಡಗನೂರ್ ಎಸ್. ಗೋಪಿನಾಥ್, ಮೆಡಿಸಿನ್ * ಪ್ರೊ. ಎಂ.ಆರ್. ಸತ್ಯನಾರಾಯಣ ರಾವ್, ವಿಜ್ಞಾನ ಮತ್ತು ಇಂಜಿನಿಯರಿಂಗ್ * ಡಾ. ವಿಜಯಲಕ್ಷ್ಮಿ ರವೀಂದ್ರನಾಥ್, ವಿಜ್ಞಾನ ಮತ್ತು ಇಂಜಿನಿಯರಿಂಗ್
ಪದ್ಮಶ್ರೀ ಪಡೆದ ಇತರ ಪ್ರಮುಖರು: * ರೇಖಾ, ಬಾಲಿವುಡ್ ನಟಿ, ಮಹಾರಾಷ್ಟ್ರ * ಕೆ. ರಾಘವನ್, ಕಲೆ, ಕೇರಳ * ರಸೂಲ್ ಪೂಕುಟ್ಟಿ, ಸಿನಿಮಾ ಶಬ್ದಗ್ರಹಣಕಾರ, ಕೇರಳ * ಸೈಫ್ ಆಲಿ ಖಾನ್, ಬಾಲಿವುಡ್ ನಟ, ಮಹಾರಾಷ್ಟ್ರ * ಕೆ.ಕೆ. ಅಗರ್ವಾಲ್, ಮೆಡಿಸಿನ್, ದೆಹಲಿ * ಇಗ್ನೇಸ್ ಟಿರ್ಕೆ, ಹಾಕಿ ಆಟಗಾರ, ಒರಿಸ್ಸಾ * ಕುಮಾರ್ ರಾಮ್ ಕಾರ್ತಿಕೇಯನ್, ಕ್ರೀಡೆ, ತಮಿಳುನಾಡು * ಸೈನಾ ನೆಹ್ವಾಲ್, ಬ್ಯಾಡ್ಮಿಂಟನ್, ಆಂಧ್ರಪ್ರದೇಶ * ವಿಜೇಂದರ್ ಸಿಂಗ್, ಬಾಕ್ಸಿಂಗ್, ಹರ್ಯಾಣ * ವೀರೇಂದ್ರ ಸೆಹ್ವಾಗ್, ಕ್ರಿಕೆಟ್, ದೆಹಲಿ
ಪೊಲೀಸರ ವಿಶಿಷ್ಟ ಸೇವಾ ಪದಕಕ್ಕೆ ಆಯ್ಕೆಯಾದ ಕರ್ನಾಟಕದವರು: * ಎಚ್.ಎನ್. ಸತ್ಯನಾರಾಯಣ ರಾವ್ - ಪೂರ್ವವಲಯ ಐಜಿಪಿ * ಎಂ.ಆರ್. ಪೂಜಾರ್ - ಐಜಿಪಿ ಮತ್ತು ಹೆಚ್ಚುವರಿ ಆಯುಕ್ತ * ಶೇಖ್ ಅಬ್ದುಲ್ ಖಾದಿರ್ - ಡಿವೈಎಸ್‌ಪಿ, ಬೆರಳಚ್ಚು ವಿಭಾಗ, ಮಂಗಳೂರು
ಅತ್ಯುತ್ತಮ ಸೇವೆಯನ್ನು ಗುರುತಿಸಿ ನೀಡಲಾಗುವ ಪದಕಕ್ಕೆ ಆಯ್ಕೆಯಾದ ಕರ್ನಾಟಕ ಪೊಲೀಸರು: ಪ್ರಣಬ್ ಮೊಹಾಂತಿ (ಲೋಕಾಯುಕ್ತ ಡಿಐಜಿ, ಬೆಂಗಳೂರು), ಅಲೋಕ್ ಕುಮಾರ್ (ಜಂಟಿ ಪೊಲೀಸ್ ಆಯುಕ್ತ, ಕ್ರೈಮ್ ವಿಭಾಗ, ಬೆಂಗಳೂರು), ರಮೇಶ್ ಎಸ್. ಹರಿಹರ್ (ರೈಲ್ವೇ ಡಿಐಜಿ, ಬೆಂಗಳೂರು), ಟಿ. ದ್ಯಾವೇ ಗೌಡ (ಬೆಂಗಳೂರು ಗುಪ್ತಚರ ವಿಭಾಗದ ಸಹಾಯಕ ಮೀಸಲು ಎಸ್‌ಐ), ಅನಂತಯ್ಯ (ಸಿಐಡಿ ಬೆಂಗಳೂರು ಅರಣ್ಯ ವಿಭಾಗ ಎಸ್‌ಐ), ಎಂ. ಪುಟ್ಟಸ್ವಾಮಿ (ಮೀಸಲು ಎಸ್‌ಐ, ಮೈಸೂರು), ಬಸವರಾಜ್ ಶಿರೂರಮಠ್ (ಬೆರಳಚ್ಚು ವಿಭಾಗದ ಇನ್ಸ್‌ಪೆಕ್ಟರ್, ಗುಲ್ಬರ್ಗಾ), ಅಣ್ಣಯ್ಯ ರಘುವೀರ್ (ನಿಯಂತ್ರಣ ಕೊಠಡಿ ಎಸಿಪಿ, ಬೆಂಗಳೂರು ನಗರ), ಎಂ.ಜಿ. ನಾಗಲಿಂಗಯ್ಯ (ಕೆಎಸ್‌ಆರ್‌ಪಿ ಸಹಾಯಕ ಕಮಾಂಡೆಂಟ್, ಬೆಂಗಳೂರು), ಎಂ.ಜಿ. ನಾಗಲಿಂಗಯ್ಯ (ಕೆಎಸ್‌ಆರ್‌ಪಿ ಸಹಾಯಕ ಕಮಾಂಡೆಂಟ್, ಬೆಂಗಳೂರು), ಸಿ.ಪಿ. ಜನವಾದ್ (ಡಿಎಸ್‌ಪಿ, ಚಿಕ್ಕೋಡಿ), ಎಸ್.ಪಿ. ಬಾಲಾಜಿ ಸಿಂಗ್ (ಡಿಎಸ್‌ಪಿ, ಬೆಂಗಳೂರು), ಬಸವರಾಜ ಯಲ್ಲಪ್ಪ ಮಲಗಟ್ಟಿ (ಡಿಸಿಪಿ, ಬೆಂಗಳೂರು ನಗರ), ಬಿ.ಎನ್. ನೀಲಾಗರ್ (ಲೋಕಾಯುಕ್ತ ಎಸ್‌ಪಿ, ಗುಲ್ಬರ್ಗಾ), ಆರ್.ಬಿ. ಮೋಹನ್ ರೆಡ್ಡಿ (ಎಐಜಿ, ಬೆಂಗಳೂರು) ಹಾಗೂ ಪಿ.ಸಿ. ಹಿರೀಮಠ್ (ಕೆಎಸ್‌ಆರ್‌ಪಿ ಕಮಾಂಡೆಂಟ್, ಬೆಂಗಳೂರು).