ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜಕೀಯದಿಂದ ಕ್ರಿಮಿನಲ್‌ಗಳನ್ನು ದೂರವಿಡಿ: ಸೋನಿಯಾ ಕರೆ (Sonia Gandhi | Congress | Indian politics | political parties)
Bookmark and Share Feedback Print
 
ಭಾರತದ ರಾಜಕಾರಣವನ್ನು ಚೊಕ್ಕವಾಗಿಡುವ ಕೆಲಸಕ್ಕೆ ಕೈ ಹಾಕಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅಪರಾಧಿ ಪ್ರವೃತ್ತಿಯುಳ್ಳವರನ್ನು ರಾಜಕೀಯದಿಂದ ದೂರ ಇಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಕ್ರಿಮಿನಲ್ ಹಿನ್ನೆಲೆಯ ಹೊಂದಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸದಂತೆ ರಾಜಕೀಯ ಪಕ್ಷಗಳು ಒಮ್ಮತದ ನಿರ್ಧಾರಕ್ಕೆ ಬರಬೇಕು, ಈ ಸಂಬಂಧ ಪ್ರಯತ್ನ ನಡೆಯಬೇಕಿದೆ ಎಂದು ಸೋನಿಯಾ ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ರಾಜಕೀಯದಲ್ಲಿ ಅಪರಾಧಿ ಹಿನ್ನೆಲೆಯುಳ್ಳವರು ಹೆಚ್ಚಾಗಿದ್ದು, ಯಾವುದೇ ಪಕ್ಷಗಳು ಹೊರತಲ್ಲ. ಎಲ್ಲಾ ಪಕ್ಷಗಳಲ್ಲೂ ಹೆಚ್ಚಿನ ಸಂಖ್ಯೆಗಳಲ್ಲಿ ಕ್ರಿಮಿನಲ್ ಅಭ್ಯರ್ಥಿಗಳಿರುತ್ತಾರೆ ಎಂಬ ಬಗ್ಗೆ ಭಾರೀ ಸಾರ್ವಜನಿಕ ಟೀಕೆಗಳು ಕೇಳಿ ಬರುತ್ತಿವೆ.

ಚುನಾವಣಾ ಆಯೋಗದ ವಜ್ರ ಮಹೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಮುಖ್ಯಸ್ಥೆ ಈ ರೀತಿ ಅಭಿಪ್ರಾಯಪಟ್ಟರು.

ಭಾರತ ಗಣರಾಜ್ಯ ವ್ಯವಸ್ಥೆಗೊಳಪಡುವ ಒಂದು ದಿನ ಮೊದಲು ಅಂದರೆ 1950ರ ಜನವರಿ 25ರಂದು ಜಾರಿಗೆ ಬಂದಿದ್ದ ಚುನಾವಣಾ ಆಯೋಗವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಚುನಾವಣಾ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿಡಲು ಯತ್ನಿಸುತ್ತಿದೆ.

ವರ್ಷದುದ್ದಕ್ಕೂ ನಡೆಯುವ ಈ ಸಂಭ್ರಮಾಚರಣೆಯನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಉದ್ಘಾಟಿಸಿದ್ದರು.

ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ, ಎಡರಂಗದ ಪ್ರಮುಖರಾದ ಪ್ರಕಾಶ್ ಕಾರಟ್ ಮತ್ತು ಎಬಿ ಬರ್ದನ್ ಸೇರಿದಂತೆ ಕೇಂದ್ರ ಸಚಿವರುಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ