ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚೀನಾ ದೃಷ್ಟಿಯಲ್ಲಿ ನೆಹರು ಕೊಳಕ, ಭಾರತ ತಳವಿಲ್ಲದ ಹಳ್ಳ (China | India | Jawaharlal Nehru | Hindi Chini Bhai Bhai)
Bookmark and Share Feedback Print
 
ಭಾರತ ಮತ್ತು ಚೀನಾ ನಡುವಿನ ಸಂಬಂಧ ವೃದ್ಧಿಗೆ ಯತ್ನಿಸಿ 'ಹಿಂದಿ ಚೀನಿ ಭಾಯಿ ಭಾಯಿ' ಎಂಬ ಜನಪ್ರಿಯ ಘೋಷಣೆ ಮಾಡಿದ್ದ ಮಾಜಿ ಪ್ರಧಾನ ಮಂತ್ರಿ ನೆಹರು ಅವರನ್ನು 'ಕೊಳಕ' ಮತ್ತು ಭಾರತವನ್ನು 'ತಳವಿಲ್ಲದ ಹಳ್ಳ' ಎಂದು ಚೀನಾ ಭಾವಿಸಿತ್ತು.

ಮಲೇಷಿಯಾ, ಸಿಲೋನ್ ಮತ್ತಿತರ ದೇಶಗಳನ್ನೊಳಗೊಂಡ ಭಾರತೀಯ ಸಾಮ್ರಾಜ್ಯವನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದ ನೆಹರು ತನ್ನ ಅಭಿಲಾಷೆಯನ್ನು 'ಡಿಸ್ಕವರಿ ಆಫ್ ಇಂಡಿಯಾ' ಪುಸ್ತಕದ ಮೂಲಕ ಹೊರಗೆಡವಿದ್ದರೆ, ಅವರ ಪುತ್ರಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಕೂಡ ಅದೇ ತತ್ವಗಳಲ್ಲಿ ನಂಬಿಕೆಯಿಟ್ಟಿದ್ದರು ಪುಸ್ತಕವೊಂದರಲ್ಲಿ ಹೇಳಲಾಗಿದೆ.

ಇಂದಿರಾ ಗಾಂಧಿಯವರನ್ನು ನಾಯಿ ಮತ್ತು ಮಾಟಗಾತಿ ಎಂದೆಲ್ಲಾ ಕರೆದಿದ್ದ ಅಮೆರಿಕಾದ ಮಾಜಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮತ್ತು ಭಾರತೀಯರನ್ನು 'ಬಾಸ್ಟರ್ಡ್ಸ್' ಎಂದು ಕರೆದಿದ್ದ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಹೆನ್ರಿ ಕಿಸ್ಸಿಂಜರ್ ಅವರ ಭೇಟಿ ಸಂದರ್ಭದಲ್ಲಿ ಚೀನಾದ ಮಾಜಿ ಪ್ರಧಾನ ಮಂತ್ರಿ ಚೂ ಯೆನ್ ಲೈ ಈ ರೀತಿಯಲ್ಲಿ ಸಂಭಾಷಣೆ ನಡೆಸಿದ್ದರು.

ಈ ಮಾತುಗಳೀಗ ಹಿರಿಯ ಪತ್ರಕರ್ತ ಕಲ್ಯಾಣಿ ಶಂಕರ್ ಅವರು ಬರೆದಿರುವ 'ನಿಕ್ಸನ್, ಇಂದಿರಾ ಮತ್ತು ಭಾರತ: ರಾಜಕೀಯ ಮತ್ತು ಅದರ ಹೊರತಾಗಿದ್ದು' ಎಂಬ ಪುಸ್ತಕದಲ್ಲಿ ದಾಖಲಾಗಿವೆ.

ಅಮೆರಿಕಾದ ಆರ್ಥಿಕ ಸಹಾಯವನ್ನು ಭಾರತವು ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಗಾಗಿ ಬಳಸುತ್ತಿದೆ. ಹಾಗಾಗಿ ನಾವು ಪಾಕಿಸ್ತಾನಕ್ಕೂ ಇದೇ ರೀತಿಯ ಸಹಾಯ ಮಾಡುತ್ತೇವೆ. ಅವರು ಕೂಡ ಇತರ ಮೂಲಗಳಿಂದ ಶಸ್ತ್ರಾಸ್ತ್ರಗಳನ್ನು ಪಡೆದುಕೊಳ್ಳಲು ಅದನ್ನು ಬಳಸಬಹುದು ಎಂದು ನಿಕ್ಸನ್ 1972ರ ಫೆಬ್ರವರಿ 23ರಂದು ಚೀನಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದ್ದರು.

ಅಮೆರಿಕಾ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಚೀನಾ ಪ್ರಧಾನಿ, ನಿಜಕ್ಕೂ ಭಾರತ ತಳವಿಲ್ಲದ ಹಳ್ಳ ಎಂದು ಗೇಲಿ ಮಾಡಿದ್ದರು. ಆಗ ಮತ್ತೆ ಮುಂದುವರಿಸಿದ ನಿಕ್ಸನ್, ನಾವೀಗ ಭಾರತಕ್ಕೆ ಆರ್ಥಿಕ ಸಹಕಾರದ ವಿಚಾರಕ್ಕೆ ಬಂದಾಗ ತೀರಾ ಚೌಕಾಶಿ ಮಾರ್ಗವನ್ನು ಅನುಸರಿಸುತ್ತೇವೆ ಎಂದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ