ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತದ ಕೆಲ ಭಾಗವನ್ನು ಪಾಕಿಸ್ತಾನಕ್ಕೆ ಮಾರಿದ ಸಿಜಿಎಫ್! (CGF website | India | Commonwealth Games Federation | Pakistan)
Bookmark and Share Feedback Print
 
ಸಿಜಿಎಫ್ ಪ್ರಕಟಿಸಿರುವ ಭೂಪಟವಿದು..
PR
ಮೊನ್ನೆ ಮೊನ್ನೆಯಷ್ಟೇ ಪಾಕಿಸ್ತಾನದ ಅಧಿಕಾರಿಯ ಭಾವಚಿತ್ರವನ್ನು ಕೇಂದ್ರ ಸರಕಾರ ತನ್ನ ಜಾಹೀರಾತಿನಲ್ಲಿ ಬಳಸಿ ದಿಗ್ಭ್ರಮೆ ಮೂಡಿಸಿದ ಬೆನ್ನಿಗೆ ಮತ್ತೊಂದು ಆವಾಂತರಕ್ಕೆ ದೇಶ ಸಾಕ್ಷಿಯಾಗಿದೆ. ಈ ಬಾರಿ ದೇಶದ ಕೆಲವು ಭಾಗಗಳನ್ನು ಪಾಕಿಸ್ತಾನದ ಭೂಪಟಕ್ಕೆ ಅಕ್ರಮವಾಗಿ ಸೇರಿಸಲಾಗಿದೆ.

ಇದೇ ವರ್ಷ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಮಹೋನ್ನತ ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಸಿದ್ಧಪಡಿಸಲಾಗಿರುವ ವೆಬ್‌ಸೈಟಿನಲ್ಲಿ ಈ ಅಚಾತುರ್ಯವನ್ನು ಮೆರೆಯಲಾಗಿದ್ದು, ಜಮ್ಮು-ಕಾಶ್ಮೀರ ಮತ್ತು ಗುಜರಾತ್ ರಾಜ್ಯಗಳ ಕೆಲ ಭಾಗಗಳನ್ನು ಪಾಕಿಸ್ತಾನದ ಮ್ಯಾಪಿನೊಳಕ್ಕೆ ಸೇರಿಸಲಾಗಿದೆ.

ಈ ರೀತಿ ಭಾರತದ ಭೂಪಟವನ್ನು ವಿರೂಪಗೊಳಿಸುವುದರ ಬಗ್ಗೆ ತಕ್ಷಣ ಪ್ರತಿಕ್ರಿಯೆ ನೀಡಲು ಕೇಂದ್ರ ಕ್ರೀಡಾ ಸಚಿವ ಎಂ.ಎಸ್. ಗಿಲ್ ಸಿಕ್ಕಿಲ್ಲ. ದೆಹಲಿಯಲ್ಲೇ ಇರುವ ಕಾಮನ್‌ವೆಲ್ತ್ ಗೇಮ್ಸ್ ಪೆಡರೇಷನ್ ಅಧ್ಯಕ್ಷರು ತಕ್ಷಣ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.

ಈ ಅಂತರ್ಜಾಲ ತಾಣ (thecgf) ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್ ಮಾಲಕತ್ವದ್ದಾಗಿಗ್ದು, ಅದೇ ಸಂಸ್ಥೆಯು ನಿರ್ವಹಣೆ ಕೂಡ ಮಾಡುತ್ತಿದೆ. ವಿಶ್ವದಾದ್ಯಂತ ನಡೆಯುವ ಕಾಮನ್‌ವೆಲ್ತ್ ಗೇಮ್ಸ್‌ಗಳನ್ನು ಸಂಘಟಿಸುವ ಸಂಸ್ಥೆಯಿದಾಗಿರುವ ಕಾರಣ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಈ ರೀತಿಯ ಪ್ರಮಾದವನ್ನೆಸಗಿರುವ ಬಗ್ಗೆ ಭಾರೀ ಟೀಕೆಗಳು ಕೇಳಿ ಬಂದಿವೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಮನ್‌ವೆಲ್ತ್ ಗೇಮ್ಸ್ ಸಂಘಟನಾ ಸಮಿತಿ ಕಾರ್ಯದರ್ಸಿ ಲಲಿತ್ ಭನೂತ್, ಈ ಬಗ್ಗೆ ನಾವು ಕಾಮನ್‌ವೆಲ್ತ್ ಗೇಮ್ಸ್ ಪೆಡರೇಷನ್ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಶೀಘ್ರವೇ ಇದನ್ನು ಸರಿಪಡಿಸುವ ಭರವಸೆ ಸಿಕ್ಕಿದೆ ಎಂದಿದ್ದಾರೆ.

ಇದು ತೀವ್ರ ಕಳವಳಕಾರಿ ವಿಚಾರವಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸರಕಾರವನ್ನು ಭಾರತೀಯ ಬಾಕ್ಸಿಂಗ್ ಫೆಡರೇಷನ್ ಆಗ್ರಹಿಸಿದೆ. ಬಿಲಿಯನ್‌ಗಟ್ಟಲೆ ಜನತೆಯ ಭಾವನೆಗಳ ಜತೆ ಆಟವಾಡುವವರನ್ನು ಸುಮ್ಮನೆ ಬಿಡಬಾರದು ಎಂದು ಇದರ ಅಧ್ಯಕ್ಷರು ಕಿಡಿ ಕಾರಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರಕಾರ ಪ್ರಕಟಿಸಿದ್ದ ಪೂರ್ಣ ಪುಟದ ಪತ್ರಿಕಾ ಜಾಹೀರಾತೊಂದರಲ್ಲಿ ಪಾಕಿಸ್ತಾನದ ವಾಯುಪಡೆಯ ಮಾಜಿ ಅಧಿಕಾರಿಯೊಬ್ಬರ ಭಾವಚಿತ್ರವನ್ನು ಸಮವಸ್ತ್ರ ಸಮೇತವಾಗಿ ಪ್ರಕಟಿಸಿ ನಗೆಪಾಟಲಿಗೀಡಾಗಿತ್ತು. ಈ ಬಗ್ಗೆ ಕೇಂದ್ರ ಸರಕಾರವು ದೇಶದ ಕ್ಷಮೆ ಯಾಚಿಸಿದ್ದು, ತನಿಖೆ ನಡೆಸುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಭರವಸೆಯನ್ನೂ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ