ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಂದಿ ಭಾರತದ ರಾಷ್ಟ್ರಭಾಷೆಯಲ್ಲವೇ?: ಸುಪ್ರೀಂಗೆ ಪ್ರಶ್ನೆ (Hindi | national language | Gujarat High Court | Suresh Kachchadia)
Bookmark and Share Feedback Print
 
ಹಿಂದಿ ಭಾರತದ ಅಧಿಕೃತ ರಾಷ್ಟ್ರೀಯ ಭಾಷೆಯಲ್ಲ ಎಂದು ಹೇಳಿದ್ದ ಗುಜರಾತ್ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿರುವ ಕೃಷಿಕ ಸುರೇಶ್ ಕಚಾಡಿಯಾ, ಹಿಂದಿ ಭಾರತದ ರಾಷ್ಟ್ರಭಾಷೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಭಾರತದ ರಾಷ್ಟ್ರಭಾಷೆ ಹಿಂದಿಯಾಗಿರುವ ಕಾರಣ ಇಲ್ಲಿ ತಯಾರಾಗುವ ಉತ್ಪನ್ನಗಳ ಪೊಟ್ಟಣಗಳ ಮೇಲೆ ವಸ್ತುವಿನ ದರ ಮತ್ತು ಇತರ ವಿವರಗಳನ್ನು ಮುದ್ರಿಸುವುದನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಡ್ಡಾಯಗೊಳಿಸಬೇಕು ಎಂದು ನಿರ್ದೇಶನ ನೀಡುವಂತೆ 40ರ ಹರೆಯದ ಕಚಾಡಿಯಾ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು.

ಆದರೆ ಅವರ ಮನವಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯ, ಹಿಂದಿಯನ್ನು ದೇಶದ ಬಹುತೇಕ ಜನರು ರಾಷ್ಟ್ರಭಾಷೆಯೆಂದು ಸ್ವೀಕರಿಸಿರಬಹುದು. ಆದರೆ ಹಿಂದಿ ಭಾಷೆಗೆ ರಾಷ್ಟ್ರಭಾಷೆಯ ಸ್ಥಾನಮಾನ ನೀಡಲಾಗಿಲ್ಲ ಎಂದು ತೀರ್ಪು ನೀಡಿತ್ತು.

ತನ್ನ ವಿರುದ್ಧ ತೀರ್ಪು ಬಂದಿದ್ದರಿಂದ ನೊಂದುಕೊಂಡ ಸೂರತ್ ಮೂಲದ ಕಚಾಡಿಯಾ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣವು ಇದೀಗ ಪ್ರಮುಖ ವಿಚಾರವಾಗಿ ಮಾರ್ಪಟ್ಟಿರುವ ಕಾರಣ, ಇದಕ್ಕೊಂದು ಕಾನೂನಿನ ಅಂತ್ಯ ಕಾಣಿಸಬೇಕಾಗಿದೆ ಎಂದು ಮೂಲತಃ ಕೃಷಿಕರಾಗಿರುವ ಅವರು ತಿಳಿಸಿದ್ದಾರೆ.

ನಾನು ಇಂಗ್ಲೀಷ್ ವಿರೋಧಿಯಲ್ಲ. ಆದರೆ ಹೆಚ್ಚಿನ ಸಂದರ್ಭದಲ್ಲಿ ಗ್ರಾಹಕ ತನ್ನ ಪ್ರಾದೇಶಿಕ ಭಾಷೆ ಅಥವಾ ಹಿಂದಿಯಲ್ಲಿ ಉತ್ಪನ್ನಗಳ ದರ ಮತ್ತು ವಿವರಗಳು ಇಲ್ಲದೇ ಇರುವುದರಿಂದ ತೊಂದರೆಗೊಳಗಾಗುತ್ತಾನೆ. ಹಾಗಾಗಿ ಹೈಕೋರ್ಟ್ ಮೊರೆ ಹೋಗಿದ್ದೆ ಎಂದು ಅವರು ತಿಳಿಸಿದ್ದಾರೆ.

ಹಿಂದಿಗೆ ರಾಷ್ಟ್ರಭಾಷೆಯ ಸ್ಥಾನಮಾನ ನೀಡಿರುವ ಬಗ್ಗೆ ಯಾವುದಾದರೂ ಆದೇಶಗಳ ದಾಖಲೆಗಳಿವೆಯೇ ಎಂದು ನ್ಯಾಯಾಲಯ ಪ್ರಶ್ನಿಸಿತ್ತಲ್ಲದೆ, ಅಂತಹ ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ನೀಡುವಂತೆ ಹೇಳಿತ್ತು. ಆದರೆ ಹಿಂದಿ ಭಾಷೆಗೆ ರಾಷ್ಟ್ರಭಾಷೆಯ ಸ್ಥಾನಮಾನ ನೀಡಿರುವ ಬಗ್ಗೆ ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ ಎಂದು ಕಚಾಡಿಯಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ