ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ; ರಾಜೀನಾಮೆ ಅಂಗೀಕಾರಕ್ಕೆ ಒತ್ತಾಯಿಸಿ ನ್ಯಾಯಾಲಯಕ್ಕೆ (Telangana | Andhra Pradesh | Seperate State | MLA)
Bookmark and Share Feedback Print
 
ತಾವು ನೀಡಿರುವ ರಾಜೀನಾಮೆಗಳನ್ನು ಅಂಗೀಕರಿಸಬೇಕೆಂದು ವಿಧಾನಸಭಾ ಸ್ಪೀಕರ್ ಅವರಿಗೆ ನಿರ್ದೇಶನ ನೀಡಬೇಕೆಂದು ತೆಲಂಗಾಣ ಪ್ರಾಂತ್ಯದ ಶಾಸಕರು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಮಾಜಿ ಸಂಸದ ಹಾಗೂ ಪ್ರಸಕ್ತ ಶಾಸಕರಾಗಿರುವ ಎಂ. ನಾರಾಯಣ ರೆಡ್ಡಿಯವರು ಕೆ.ಜಿ. ಬಾಲಕೃಷ್ಣನ್ ಮುಖ್ಯನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಿದ್ದು, ಫೆಬ್ರವರಿ ಒಂದರಂದು ವಿಚಾರಣೆಗೆ ಸ್ವೀಕರಿಸುವುದಾಗಿ ಅರ್ಜಿದಾರರಿಗೆ ನ್ಯಾಯಾಲಯ ತಿಳಿಸಿದೆ.

ಕಳೆದ ವರ್ಷದ ಡಿಸೆಂಬರ್ 10 ಮತ್ತು 23ರಂದು ರಾಜೀನಾಮೆ ನೀಡಿದ್ದ ತೆಲಂಗಾಣ ಪ್ರಾಂತ್ಯದ ಎಲ್ಲಾ ಪಕ್ಷಗಳ 139 ಶಾಸಕರು ಈ ಅರ್ಜಿಯಲ್ಲಿ ತಮ್ಮ ಹೆಸರುಗಳನ್ನು ಸೇರಿಸಿದ್ದಾರೆ. ಆಂಧ್ರಪ್ರದೇಶ ವಿಧಾನಸಭೆ ಒಟ್ಟು 284 ಶಾಸಕರನ್ನು ಹೊಂದಿದೆ.

ತೆಲಂಗಾಣ ಪ್ರತ್ಯೇಕ ರಚನೆ ಕುರಿತಂತೆ ಕೇಂದ್ರ ಸರಕಾರ ತನ್ನ ನಿಲುವು ಬದಲಾಯಿಸಿದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದ ಶಾಸಕರು, ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದು ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸುತ್ತಿದ್ದಾರೆ.

ಈ ಸಂಬಂಧ ಎಲ್ಲಾ ಪಕ್ಷಗಳ ಅಭಿಪ್ರಾಯ ಪಡೆಯಲು ಇತ್ತೀಚೆಗಷ್ಟೇ ಕೇಂದ್ರ ಕರೆದಿದ್ದ ಸರ್ವಪಕ್ಷಗಳ ಸಭೆ ಯಾವುದೇ ನಿರ್ಧಾರಕ್ಕೆ ಬರಲು ವಿಫಲವಾಗಿತ್ತು. ಬಳಿಕ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಪಿ. ಚಿದಂಬರಂ, ಸ್ಪಷ್ಟ ನಿಲುವು ತಳೆಯುವ ಮೊದಲು ಇನ್ನಷ್ಟು ಚರ್ಚೆ ನಡೆಯಬೇಕಿದೆ ಎಂದಿದ್ದರು.

ಕಳೆದ ಹಲವಾರು ತಿಂಗಳುಗಳಿಂದ ಆಂಧ್ರಪ್ರದೇಶವು ಅಖಂಡ ಮತ್ತು ಪ್ರತ್ಯೇಕತೆಯ ಕೂಗಿನಿಂದಾಗಿ ನಲುಗುತ್ತಿದ್ದು, ಬಂದ್-ಪ್ರತಿಭಟನೆಗಳಿಂದಾಗಿ ಅಪಾರ ಆರ್ಥಿಕ ನಷ್ಟಕ್ಕೊಳಗಾಗಿದೆ ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ