ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಏರ್‌ಪೋರ್ಟ್ ಶೌಚಾಲಯದಲ್ಲಿ ಸಿಲುಕಿಕೊಂಡ ಪ್ರೀತಿ ಝಿಂಟಾ (Preity Zinta | toilet | Delhi airport | Twitter)
Bookmark and Share Feedback Print
 
IFM
ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಹತ್ತು ನಿಮಿಷಗಳಿಗೂ ಹೆಚ್ಚು ಕಾಲ ಬಂಧಿಯಾಗಿದ್ದ ಬಾಲಿವುಡ್ ನಟಿ ಪ್ರೀತಿ ಝಿಂಟಾ ಬಳಿಕ ಗೋಡೆ ಹಾರಿ ಹೊರ ಬಂದ ಪ್ರಸಂಗ ನಡೆದಿದೆ.

ರಾಜಧಾನಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಶೌಚಾಲಯಕ್ಕೆ ಹೋಗಿದ್ದ ಪ್ರೀತಿ, ಬಾಗಿಲು ಜಾಮ್ ಆದ ಕಾರಣ ಒಳಗೇ ಉಳಿದುಕೊಂಡಿದ್ದರು.

'ವಿಮಾನ ನಿಲ್ದಾಣದ ಟಾಯ್ಲೆಟ್‌ನಲ್ಲಿ ಬಾಕಿಯಾದ ಕಾರಣ ನಾನು 10 ನಿಮಿಷಗಳಿಗೂ ಹೆಚ್ಚು ಕಾಲ ಅಲ್ಲೇ ಕಳೆಯಬೇಕಾಯಿತು. ಕೊನೆಗೂ ಶೌಚಾಲಯದ ಗೋಡೆ ಏರಿ ಹಾರಿದೆ. ಜನ ನನ್ನ ಹೆಸರು ಹಿಡಿದು ಕೂಗುತ್ತಿದ್ದರು..' ಎಂದು ಪ್ರೀತಿ ತನ್ನ ಟ್ವಿಟ್ಟರ್ ಪುಟದಲ್ಲಿ ಹೇಳಿಕೊಂಡಿದ್ದಾರೆ.

ತಾನು ಅಲ್ಲಿ ಸತ್ತೇ ಹೋಗುತ್ತೇನೆ ಎಂಬ ಭೀತಿ ಎದುರಿಸಿದ್ದೆ ಎಂದು ವಿವರಣೆ ನೀಡಿರುವ 34ರ ಹರೆಯದ ನಟಿ, ಬದುಕಿಕೊಂಡಿದ್ದೇನೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

'ಹೊರ ಬರಲು ದಾರಿಯೇ ಕಾಣದಿದ್ದಾಗ ನಾನು ಸತ್ತೇ ಹೋಗುತ್ತೇನೆ ಎಂದುಕೊಂಡಿದ್ದೆ. ಆದರೆ ನನ್ನ ತೋಳಿನಲ್ಲಿನ ಮಾಂಸ ಖಂಡಗಳು ನನ್ನನ್ನು ಹಿಡಿದೆತ್ತಿದವು..' ಎಂದು ಟ್ವಿಟ್ಟರ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ನಾನು ಯುವತಿಯಾಗಿರುವ ಹೊತ್ತಿನಲ್ಲಿ ಗಂಡುಬೀರಿಯಾಗಿದ್ದು ಈಗ ನನಗೆ ಸಹಾಯಕ್ಕೆ ಬಂತು. ಗೋಡೆಯನ್ನು ಹತ್ತಲು ಯತ್ನಿಸುವುದೆಂದರೆ ಅಷ್ಟು ಸುಲಭವಲ್ಲ. ಈಗ ಮನೆಗೆ ಹೋಗಲು ಸಂತೋಷವಾಗುತ್ತಿದೆ ಎಂದು ಪ್ರೀತಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ