ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಲೆಯೇರಿಕೆ ರಾಜಕಾರಣಿಗಳಿಗೆ ತಟ್ಟಿಲ್ಲ, ಯಾಕೆಂದು ಗೊತ್ತೇ? (food inflation | Parliament canteen | Indian Railways | India)
Bookmark and Share Feedback Print
 
ತಿನಸುಬೆಲೆ - ರೂ.ಗಳಲ್ಲಿ
ಟೀ1
ಸೂಪ್5.50
ಒಂದು ಕಪ್ ದಾಲ್1.50
ಸಸ್ಯಾಹಾರಿ ಊಟ12.50
ಮಾಂಸಾಹಾರಿ ಊಟ22
ಮೊಸರಣ್ಣ11
ವೆಜ್ ಪುಲಾವ್8
ಚಿಕನ್ ಬಿರಿಯಾನಿ34
ಫಿಸ್ ಕರಿ-ರೈಸ್13
ಟೊಮ್ಯಾಟೋ ರೈಸ್7
ಫಿಶ್ ಕರಿ17
ಚಿಕನ್ ಕರಿ20.50
ಚಿಕನ್ ಮಸಾಲಾ24.50
ಬಟರ್ ಚಿಕನ್27
ಚಪಾತಿ1
ಪ್ಲೇಟ್ ಅನ್ನ2
ದೋಸೆ4
ಖೀರ್5.50
ಫ್ರ್ಯೂಟ್ ಕೇಕ್9.50
ಫ್ರ್ಯೂಟ್ ಸಲಾಡ್9.50
ಇಂದು ಹೋದ ಹೊಟೇಲಿನಲ್ಲಿ ನಾಳೆ ಊಟ-ತಿಂಡಿ ಬೆಲೆ ಹೆಚ್ಚಾಗಿರುತ್ತದೆ. ಮನೆಗೆ ತರಕಾರಿ-ಸಾಮಾನು ಕೊಂಡೊಯ್ಯುವಾಗ ಉದಾರಿಗಳಾಗಿದ್ದವರು ಕೂಡ ಈಗ ತೀರಾ ಚೌಕಾಸಿ ಮಾಡುತ್ತಾರೆ. ಕಾರಣ, ದಿನಬಳಕೆಯ ವಸ್ತುಗಳ ದರಯೇರಿಕೆ. ಇದು ಇಡೀ ದೇಶವನ್ನೇ ತಟ್ಟಿದೆ-- ಭಾರತದ ಅಧಿಕಾರ ಕೇಂದ್ರ ಸಂಸತ್ತೊಂದನ್ನು ಹೊರತುಪಡಿಸಿ!

ಕೇವಲ 1 ರೂಪಾಯಿಗೆ ಚಪಾತಿ ಅಥವಾ ಟೀ ಬೇಕೇ? 4 ರೂಪಾಯಿಗೆ ದೋಸೆ ಬೇಕೇ? ಕೇವಲ 2 ರೂಪಾಯಿಗೆ ಒಂದು ಪ್ಲೇಟ್ ಅನ್ನ ಬೇಕೇ? ಬರೀ 20 ರೂಪಾಯಿಗೆ ನಾಲಗೆ ಚಪ್ಪರಿಸುವ ಕೋಳಿ ಪದಾರ್ಥ ಬೇಕೇ ಎಂದು ಸಂಸತ್ತಿನ ಕ್ಯಾಂಟೀನು ಸಂಸದರನ್ನು ಅತ್ತೂ ಕರೆದು ಭೂರಿ ಭೋಜನವನ್ನು ಹೊಟ್ಟೆ ತುಂಬಾ ಬಡಿಸುತ್ತಿದೆ. ಇಂತಿಪ್ಪ ಹೊಟ್ಟೆ ಪೂರ್ತಿ ಜುಜುಬಿ ಬೆಲೆ ತೆತ್ತು ತಿಂದುಂಡ ನಮ್ಮ ರಾಜಕಾರಣಿಗಳಿಗೆ ದೇಶದಲ್ಲಾಗಿರುವ ಬೆಲೆಯೇರಿಕೆ ಪರಿಣಾಮ ತಟ್ಟುವುದು ಹೇಗೆ, ಬಡವರ ಕಷ್ಟಗಳು ಅರ್ಥವಾಗುವುದು ಹೇಗೆ ಎಂದೂ ಪ್ರಶ್ನಿಸಬಹುದು.
PR


ಬೆಲೆಯೇರಿಕೆಯ ಬಗ್ಗೆ ಅಧಿವೇಶನಗಳ ಸಂದರ್ಭದಲ್ಲಿ ಚರ್ಚೆಗೆ ಸಂಸತ್ತು ತೆರೆದುಕೊಂಡಾಗ ಬಾಯೆಲ್ಲ ಹರಿದುಹೋಗುವಂತೆ ನಮ್ಮ ಸಂಸದರು ಬೊಬ್ಬೆ ಹಾಕುತ್ತಾರೆ, ಆದರೆ ತಪ್ಪಿಯೂ ನಮ್ಮ ಕ್ಯಾಂಟೀನಿನಲ್ಲಿನ ಫುಡ್ ಮೆನುವಿನಲ್ಲಿನ ದರಗಳನ್ನು (ಎಡಗಡೆಯಲ್ಲಿ ನೀಡಲಾಗಿರುವ ಪಟ್ಟಿಯನ್ನು ಗಮನಿಸಿ) ಹೆಚ್ಚು ಮಾಡಬೇಕೆಂದು ಹೇಳುವುದಿಲ್ಲ.

ಅಂದ ಹಾಗೆ ಈ ಸೌಲಭ್ಯ ಕೇವಲ ಸಂಸದರಿಗಷ್ಟೇ ಅಲ್ಲ, ಸಂಸತ್ತಿನ ಸಿಬ್ಬಂದಿಗಳು, ಭದ್ರತಾ ಸಿಬ್ಬಂದಿಗಳು ಸೇರಿದಂತೆ ಪತ್ರಕರ್ತರೂ ಇದರ ಲಾಭವನ್ನು ಪಡೆಯುತ್ತಿದ್ದಾರೆ-- ಅದೂ ಕಳೆದೊಂದು ದಶಕದಿಂದ!

2004ರಲ್ಲಿ ಕ್ಯಾಂಟೀನಿನ ಊಟ-ತಿಂಡಿಯ ಬೆಲೆ ಪರಿಷ್ಕರಣೆ ಕುರಿತು 15 ಸದಸ್ಯರ ಜಂಟಿ ಸಂಸದೀಯ ಸಮತಿಯೊಂದನ್ನು ರಚಿಸಲಾಗಿತ್ತಾದರೂ, ಅದು ಯಾವುದೇ ಪರಿಷ್ಕರಣೆಯನ್ನು ಸೂಚಿಸಿರಲಿಲ್ಲ. ಆ ನಂತರ ಯಾವುದೇ ಪರಿಷ್ಕರಣೆ ಪ್ರಸ್ತಾಪವೇ ಬಂದಿಲ್ಲ. ಹಾಗಾಗಿ ದಶಕಗಳ ಹಿಂದಿನ ದರಗಳೇ ಮುಂದುವರಿಯತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಸತ್ತಿನ ಒಳಗೆ ಮತ್ತು ಹೊರಗೆ ಬೆಲೆಯೇರಿಕೆ ಬಗ್ಗೆ ಪಕ್ಷ ಭೇದವಿಲ್ಲದೆ ಹೇಳಿಕೆ ನೀಡುವ ಕಾಂಗ್ರೆಸ್, ಬಿಜೆಪಿ, ಶಿವಸೇನೆ, ಡಿಎಂಕೆ, ಜೆಡಿಯು, ಜೆಡಿಎಸ್ ಮುಂತಾದ ಪಕ್ಷಗಳ ಮುಖಂಡರು ಇದಕ್ಕೇನನ್ನುತ್ತಾರೋ?
ಸಂಬಂಧಿತ ಮಾಹಿತಿ ಹುಡುಕಿ