ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತದ ಸುಂದರಿ ಹಿಜಿಡಾಗಳಿಗೊಂದು ಸೌಂದರ್ಯ ಸ್ಪರ್ಧೆ! (transgenders | Sonia Ajmeri | Sonia De | Indian Super Queen)
Bookmark and Share Feedback Print
 
PR
ತಾವು ಗಂಡೋ-ಹೆಣ್ಣೋ ಎಂದು ಗುರುತಿಸಿಕೊಳ್ಳಲು ಹೆಣಗಾಡುವವರು, ದೇಹಕ್ಕೂ ಮನಸ್ಥಿತಿಗೂ ಸಂಬಂಧವಿಲ್ಲದೆ ಒದ್ದಾಡುತ್ತಿರುವವರು, ಲಿಂಗ ಬದಲಾಯಿಸಿಕೊಂಡು ಸಮಾಧಾನ ಹುಡುಕಿಕೊಂಡವರು-- ಹೀಗೆ ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವ ಜೀವಗಳಿಗೊಂದು ಖುಷಿ ಕೊಡುವ, ಆತ್ಮವಿಶ್ವಾಸ ಹೆಚ್ಚಿಸುವ 'ಸೌಂದರ್ಯ ಸ್ಪರ್ಧೆ' ನಮ್ಮ ದೇಶದಲ್ಲೂ ನಡೆಯುತ್ತಿದೆ.

ವಿದೇಶಗಳಲ್ಲಿ ಈಗಾಗಲೇ ಜನಪ್ರಿಯವಾಗಿರುವ ಖೋಜಾಗಳ ಸೌಂದರ್ಯ ಸ್ಪರ್ಧೆ ಭಾರತದಲ್ಲಿ 'ಇಂಡಿಯನ್ ಸೂಪರ್ ಕ್ವೀನ್' ಎಂಬ ಹೆಸರಿನಲ್ಲಿ ಜನಪ್ರಿಯವಾಗುತ್ತಿದ್ದು, ಈಗಾಗಲೇ ಹಲವು ರಾಜ್ಯಗಳಲ್ಲಿ ಒಂದು ಸುತ್ತಿನ ಸ್ಪರ್ಧೆ ನಡೆದಿದೆ.

ಇದರ ಸೆಮಿಫೈನಲ್ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ನಡೆಯಲಿದ್ದರೆ, ಫೈನಲ್ ನವದೆಹಲಿಯಲ್ಲಿ ನಡೆಯಲಿದೆ.

ಇತ್ತೀಚೆಗಷ್ಟೇ ಅಹಮದಾಬಾದ್‌ನಲ್ಲಿ ರಾಜ್ಯ ಮಟ್ಟದ ಈ ಸ್ಪರ್ಧೆ ನಡೆದಿದೆ. 16ಕ್ಕೂ ಹೆಚ್ಚು ಸುಂದರಿಯರು ಇದರಲ್ಲಿ ಪಾಲ್ಗೊಂಡಿದ್ದು, ಸೋನಿಯಾ ಡೇ ಎಂದು ಕರೆಸಿಕೊಳ್ಳಲಿಚ್ಛಿಸುವ ಸೋನಿಯಾ ಅಜ್ಮೀರಿ ಎಂಬವರು ವಿಜೇತರಾಗಿದ್ದಾರೆ.

ನಂತರ ಪ್ರತಿಕ್ರಿಯಿಸಿರುವ ಅವರು, ಹೆತ್ತವರು ತಮ್ಮ ನಪುಂಸಕ ಮಕ್ಕಳನ್ನು ಯಾವುದೇ ಕಾರಣಕ್ಕೆ ತ್ಯಜಿಸದೆ, ಇತರ ಸಾಮಾನ್ಯ ಮಕ್ಕಳಂತೆ ನೋಡಿಕೊಳ್ಳಬೇಕು; ನಪುಂಸಕ ವರ್ಗದ ಮಕ್ಕಳಿಗೂ ಅತ್ಯುತ್ತಮ ವಿದ್ಯಾಭ್ಯಾಸ ದೊರಕುವುದು ಮುಖ್ಯವಾಗಿದ್ದು, ಈ ಬಗ್ಗೆ ಸರಕಾರ ಯಾವುದೇ ತಾರತಮ್ಯ ಮಾಡದೆ ನಮಗೂ ಅವಕಾಶಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಭೋಪಾಲ್, ಭುವನೇಶ್ವರ, ಅಹಮದಾಬಾದ್, ಜೈಪುರ ಮತ್ತು ಕೊಲ್ಕತ್ತಾಗಳಲ್ಲಿ ಈ ಸ್ಪರ್ಧೆ ನಡೆಯುತ್ತದೆ. ಪ್ರತೀ ನಗರದಿಂದ ಅವರ ಜಾಣ್ಮೆ, ಆತ್ಮವಿಶ್ವಾಸ ಮತ್ತು ಕ್ರಿಯಾಶೀಲತೆಯನ್ನು ಆಧರಿಸಿ ಫೆಬ್ರವರಿ 6ರಂದು ಮುಂಬೈಯಲ್ಲಿ ನಡೆಯಲಿರುವ ಸೆಮಿಫೈನಲಿಗೆ ಮೂವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಸೆಮಿಫೈನಲ್‌ನಿಂದ 12 ಅಭ್ಯರ್ಥಿಗಳನ್ನು ಆಯ್ದು ಅವರಿಗೆ ಉದ್ಯಮದವರಿಂದ ತರಬೇತಿ ನೀಡಲಾಗುತ್ತದೆ. ಅವರಲ್ಲೊಬ್ಬರನ್ನು ದೆಹಲಿಯಲ್ಲಿ ಫೆಬ್ರವರಿ 21ರಂದು ನಡೆಯಲಿರುವ ಫೈನಲ್‌ನಲ್ಲಿ 'ಇಂಡಿಯನ್ ಸೂಪರ್ ಕ್ವೀನ್' ಎಂದು ಆಯ್ಕೆ ಮಾಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ಹುಟ್ಟಿನಿಂದಲೇ ದೇಹಕ್ಕೆ ಹೊಂದಿಕೊಳ್ಳದ ಮನಸ್ಥಿತಿಯೊಂದಿಗೆ ಬೆಳೆದ, ಲಿಂಗವೇ ಇಲ್ಲದ ಅಥವಾ ವಿಚಿತ್ರವಾಗಿರುವ ದೈಹಿಕ ಮನೋವಿಕಲತೆಯೊಂದಿಗೆ ಬದುಕುತ್ತಿರುವ ಜೀವಗಳಿಗೆ ಈ ಕಾರ್ಯಕ್ರಮ ಆತ್ಮವಿಶ್ವಾಸ ತುಂಬಬಲ್ಲುದು. ಅಲ್ಲದೆ ಲಿಂಗ ಬದಲಾಯಿಸಿಕೊಂಡು ಹುಡುಗಿಯಾಗುವವರ ಸಂಖ್ಯೆ ಈಗೀಗ ಭಾರತದಲ್ಲೂ ಜನಪ್ರಿಯವಾಗುತ್ತಿದೆ. ಇಂಥವರಿಗೆಲ್ಲ ಇದು ಸಹಕಾರಿ ಎಂದು ಇದರ ರೂವಾರಿ ಲಕ್ಷ್ಮೀ ನಾರಾಯಣ್ ತ್ರಿಪಾಠಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ