ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತ್ರಿವರ್ಣ ಧ್ವಜ ಹಾರಿಸದೇ ಉಗ್ರರಿಗೆ ಪ್ರೋತ್ಸಾಹ: ಬಿಜೆಪಿ (BJP | flag hoisting | Lal Chowk | tricolour flag)
Bookmark and Share Feedback Print
 
ಶ್ರೀನಗರದ ಲಾಲ್‌ಚೌಕ್‌ನಲ್ಲಿ ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜ ಹಾರಿಸದಿರುವ ನಿರ್ಧಾರಕ್ಕೆ ಬರುವ ಮೂಲಕ ಕೇಂದ್ರ ಸರಕಾರವು ಕಣಿವೆಯಲ್ಲಿನ ಪ್ರತ್ಯೇಕವಾದಿಗಳಿಗೆ ಶರಣಾಗಿದೆ ಎಂದು ಆರೋಪಿಸಿರುವ ಬಿಜೆಪಿ, ಈ ನಡೆಯು ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಬಣ್ಣಿಸಿದೆ.

ಲಾಲ್‌ಚೌಕ್‌ನಲ್ಲಿ ಧ್ವಜಾರೋಹಣ ಮಾಡದೇ ಇರುವ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ಅನಗತ್ಯ ಪ್ರಚೋದನೆ ನೀಡಲು ತಾನು ಬಯಸುತ್ತಿಲ್ಲ ಎಂದು ಹೇಳಿತ್ತು. ಆದರೆ ಯಾರಿಗೆ ಪ್ರಚೋದನೆ ಎಂಬುದು ನಮ್ಮ ಪ್ರಶ್ನೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸರಕಾರದ ಈ ನಿರ್ಧಾರವು ಭದ್ರತಾ ಪಡೆಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸುವುದಲ್ಲದೆ, ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡಿದಂತಾಗಿದೆ. ಕಾಶ್ಮೀರ ಕಣಿವೆಯಲ್ಲಿನ ಪ್ರತ್ಯೇಕವಾದಿಗಳಿಗೆ ಸರಕಾರ ಸಂಪೂರ್ಣವಾಗಿ ಶರಣಾಗತವಾಗಿದೆ ಎಂದು ಬಿಜೆಪಿ ಟೀಕಿಸಿದೆ.

ರಾಷ್ಟ್ರಧ್ವಜವನ್ನು ಹಾರಿಸದೇ ಇರುವಂತಹ ಅಪಮಾನಕಾರಿ ತೀರ್ಮಾನಕ್ಕೆ ಬಂದಿರುವ ನಿರ್ಧಾರ ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರಿಗೆ ಪ್ರಚೋದನೆ ನೀಡಿದಂತೆ. ಬಿಎಸ್ಎಫ್ ಮತ್ತು ಸಿಆರ್‌ಪಿಎಫ್‌ ಭದ್ರತಾ ಪಡೆಗಳು ಲಾಲ್‌ಚೌಕ್‌ನಲ್ಲಿ ರಾಷ್ಟ್ರೀಯ ಧ್ವಜ ಹಾರಿಸದಂತೆ ಆದೇಶ ನೀಡುವ ಮೂಲಕ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸಲಾಗಿದೆ ಎಂದು ಬಿಜೆಪಿ ಹೇಳಿದೆ.

ಭದ್ರತಾ ಪಡೆಗಳು ಮತ್ತು ಭಾರತದ ನಾಗರಿಕರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ನಿರ್ಧಾರವನ್ನು ಕೇಂದ್ರ ಸರಕಾರ ತೆಗೆದುಕೊಂಡಿದೆ. ಪ್ರತೀ ವರ್ಷ ಗಣರಾಜ್ಯೋತ್ಸವದಂದು ಬಂದ್ ನಡೆಸುವ 'ಹುರಿಯತ್' ಹಿಮ್ಮೆಟ್ಟಿಸುವ ಹೋರಾಟದಲ್ಲಿ ಸರಕಾರ ಹಿನ್ನಡೆ ಅನುಭವಿಸಿದೆ ಎಂದು ಜಾವಡೇಕರ್ ತಿಳಿಸಿದ್ದಾರೆ.

ಕಳೆದ ವರ್ಷ ಲಾಲ್‌ಚೌಕ್‌ನಲ್ಲಿ ಬಿಜೆಪಿಯು ಧ್ವಜಾರೋಹಣ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಕಾಶ್ಮೀರಿ ಜನತೆ ಇದರಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸಿದ್ದರು ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದ್ದಾರೆ. ಆದರೆ ಈ ವರ್ಷ ಯಾಕೆ ನಡೆಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ತಡವರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ