ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ ದಾಳಿ ಹಿಂದೆ ಲಖ್ವಿ ಮಾತ್ರವಲ್ಲ: ಪಾಕ್‌ಗೆ ಭಾರತ (Pakistan | Lashkar-e-Taiba | P Chidambaram | Zakiur Rehman Lakhvi)
Bookmark and Share Feedback Print
 
ಮುಂಬೈ ದಾಳಿ ಹಿಂದೆ ಲಷ್ಕರ್ ಇ ತೋಯ್ಬಾ ಪಾತ್ರವಿರುವುದನ್ನು ಪಾಕಿಸ್ತಾನ ಒಪ್ಪಿಕೊಂಡದ್ದು ಬಹಿರಂಗವಾದ ಬೆನ್ನಿಗೆ ಪ್ರತಿಕ್ರಿಯಿಸಿರುವ ಭಾರತ, ಲಷ್ಕರ್ ಕಮಾಂಡರ್ ಝಾಕಿರ್ ರೆಹಮಾನ್ ಲಖ್ವಿ ಮಾತ್ರ ಹತ್ಯಾಕಾಂಡದ ರೂವಾರಿಯಲ್ಲ; ಇತರ ಹಲವರಿದ್ದಾರೆ ಎಂದಿದೆ.

ನವದೆಹಲಿಯಲ್ಲಿ ಮಾತನಾಡುತ್ತಿದ್ದ ಗೃಹ ಸಚಿವ ಪಿ. ಚಿದಂಬರಂ, ಮುಂಬೈ ದಾಳಿಯ ಹಿಂದಿನ ಪ್ರಮುಖ ರೂವಾರಿಗಳಲ್ಲಿ ಲಖ್ವಿಯೂ ಒಬ್ಬ. ಇತರರೂ ಹಲವರಿದ್ದಾರೆ. ಅವರ ಹೆಸರುಗಳು ನಮಗೆ ಗೊತ್ತು ಮತ್ತು ಪಾಕಿಸ್ತಾನಕ್ಕೂ ಗೊತ್ತು ಎಂಬುದು ನಮ್ಮ ಭಾವನೆ. ಉಳಿದವರನ್ನೂ ಅವರು ವಿಚಾರಣೆಗೆ ಒಳಪಡಿಸದಿದ್ದರೆ ನಾವು ಇಚ್ಛೆಗೆ ವಿರುದ್ಧವಾಗಿ ವಿಷಾದಕರ ರೀತಿಯಲ್ಲಿ ಪಾಕಿಸ್ತಾನ ಈಗಲೂ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಹಿಂದಕ್ಕೆ ಹೆಜ್ಜೆಯಿಡುತ್ತಿದೆ ಎಂಬ ನಿಲುವಿಗೆ ಬರಬೇಕಾಗುತ್ತದೆ ಎಂದರು.

ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಪಾಲ್ಗೊಂಡು ಬಂಧಿತರಾದ ಏಳು ಮಂದಿ ಉಗ್ರರ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಬುಧವಾರ ಪಾಕಿಸ್ತಾನದ ತನಿಖಾ ದಳಗಳು ಒಪ್ಪಿಕೊಂಡಿದ್ದವು. ಆದರೆ ಭಾರತದ ಸತತ ಮನವಿಗಳ ಹೊರತಾಯಿಗೂ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಝ್ ಸಯೀದ್ ವಿರುದ್ಧ ಯಾವುದೇ ಕ್ರಮಗಳನ್ನು ಪಾಕಿಸ್ತಾನ ಕೈಗೊಂಡಿಲ್ಲ. ಈ ಸಂಬಂಧ ಭಾರತವು ಸೂಕ್ತ ದಾಖಲೆಗಳನ್ನು ಭಾರತ ಹಸ್ತಾಂತರಿಸಿಲ್ಲ ಎನ್ನುವುದು ಪಾಕ್ ವಾದ.

ಮುಂಬೈ ದಾಳಿಯಲ್ಲಿ ಬದುಕುಳಿದಿರುವ ಏಕೈಕ ಉಗ್ರ ಅಜ್ಮಲ್ ಕಸಬ್ ನೀಡಿರುವ ಹೇಳಿಕೆಯನ್ನು ಒಪ್ಪಿಕೊಂಡಿರುವ ಪಾಕಿಸ್ತಾನದ ವಿಶೇಷ ತನಿಖಾ ದಳಗಳು, ತಮ್ಮ ವರದಿಯನ್ನು ಅಲ್ಲಿನ ಉಗ್ರ ನಿಗ್ರಹ ನ್ಯಾಯಾಲಯಕ್ಕೆ ಸಲ್ಲಿಸಿವೆ.

ಏಳು ಮಂದಿ ಆರೋಪಿಗಳ ವಿಚಾರಣೆ ನಡೆಸುತ್ತಿರುವ ವಿಚಾರಣಾ ನ್ಯಾಯಾಲಯಕ್ಕೆ ಪಾಕಿಸ್ತಾನ ವಿಶೇಷ ತನಿಖಾ ದಳವು ತನ್ನ ವರದಿಯನ್ನು ಒಪ್ಪಿಸಿದ್ದು, ಲಷ್ಕರ್ ಕಮಾಂಡರ್ ಲಖ್ವಿ ಮತ್ತಿತರರು ಮುಂಬೈ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ ಎಂಬುದನ್ನು ಸಾಬೀತು ಪಡಿಸುವ ದಾಖಲೆಗಳನ್ನು ಕೂಡ ಸಲ್ಲಿಸಿವೆ.

2008ರ ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿನ ಸರಕಾರಿ ಅಧಿಕಾರಿಗಳನ್ನು ಗುರುತಿಸುವಂತೆ ಭಾರತ ಹೇಳಿದ್ದರೂ, ವರದಿಯಲ್ಲಿ ಈ ಕುರಿತು ಯಾವುದೇ ಪ್ರಸ್ತಾಪ ಮಾಡಲಾಗಿಲ್ಲ. ಈ ಸಂಬಂಧ ಹಫೀಜ್ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಭಾರತ ಆಗ್ರಹಿಸಿತ್ತು. ಆದರೆ ಅವನ ಹೆಸರನ್ನೂ ವರದಿಯಲ್ಲಿ ಸೇರಿಸಲಾಗಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ