ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೋನಿಯಾಗೆ ಮೋದಿ ತರಾಟೆ, ಇಟಲಿ ಭಾಷೆಯಲ್ಲಿ ಪತ್ರ! (Gujarat | Narendra Modi | UPA | Sonia Gandhi)
Bookmark and Share Feedback Print
 
ಕೇಂದ್ರ ಸರಕಾರಕ್ಕೆ ಅರ್ಥವಾಗುವ ಭಾಷೆಯಲ್ಲಿ ಪತ್ರಗಳನ್ನು ಬರೆದು ನಾನು ತೀರಾ ಸುಸ್ತಾಗಿದ್ದೇನೆ, ಹಾಗಾಗಿ ಈಗ ಇಟಾಲಿಯನ್ ಭಾಷೆಯಲ್ಲಿಯೇ ಪತ್ರ ಬರೆಯುತ್ತೇನೆ ಎಂದು ಬೆಲೆಯೇರಿಕೆ ಕುರಿತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಸಹನೆ ವ್ಯಕ್ತಪಡಿಸಿದ್ದಾರೆ.

ಬೆಲೆಯೇರಿಕೆ ಕುರಿತು ಈಗಾಗಲೇ ಹಲವು ಪತ್ರಗಳನ್ನು ಕೇಂದ್ರ ಸರಕಾರಕ್ಕೆ ಬರೆದು ಸುಸ್ತಾಗಿದ್ದೇನೆ. ಅವರಿಗೆ ಅರ್ಥವಾಗುವ ಭಾಷೆಯಲ್ಲಿಯೇ ನಾನು ಅವರಿಗೆ ಪತ್ರ ಬರೆದು, ಆಹಾರ ವಸ್ತುಗಳು ಗಗನಕ್ಕೇರುತ್ತಿರುವುದರ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದೆ ಎಂದು ಮೋದಿ ಹೇಳಿದ್ದಾರೆ.

ಆದರೆ ಅವರಲ್ಲಿ ಬಡಜನತೆಯ ಕಡೆಗೆ ಯಾವುದೇ ಕರುಣೆ ಇದ್ದಂತೆ ಕಾಣುತ್ತಿಲ್ಲ. ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸಲು ಅವರು ಕ್ರಮ ಕೈಗೊಳ್ಳುವ ಯಾವ ಆಶಯವನ್ನೂ ಹೊಂದಿಲ್ಲ, ಈ ಕುರಿತು ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಹಾಗಾಗಿ ನಾನೀಗ ಅವರಿಗೆ ಇಟಾಲಿಯನ್ ಭಾಷೆಯಲ್ಲಿ ಪತ್ರ ಬರೆಯಬೇಕಾದ ಅನಿವಾರ್ಯತೆ ಬಂದಿದೆ ಎಂದರು.

ಪಠಾಣ್ ಜಿಲ್ಲೆಯಲ್ಲಿನ 'ಗರೀಬ್ ಕಲ್ಯಾಣ್ ಮೇಳ'ದಲ್ಲಿ ಮಾತನಾಡುತ್ತಿದ್ದ ಅವರು, ಕೇಂದ್ರವು ಬೆಲೆಯೇರಿಕೆ ಕುರಿತು ಚರ್ಚಿಸಲು ಸಭೆಯೊಂದನ್ನು ಕರೆದಿತ್ತು; ಆದರೆ ತಮಗೆ ಬೇರೆ ಕೆಲವು ಕೆಲಸಗಳಿರುವ ಕಾರಣ ಸಭೆಯನ್ನು ಮುಂದೂಡಿದ್ದೇವೆ ಎಂದು ತಿಳಿಸಿದ್ದಾರೆ. ಬೆಲೆಯೇರಿಕೆಯ ಕುರಿತು ಚರ್ಚಿಸುವುದಕ್ಕಿಂತಲೂ ಪ್ರಮುಖವಾದ ಬೇರೆ ಕೆಲಸವೇನೆಂದು ನನಗೆ ತಿಳಿಯುತ್ತಿಲ್ಲ ಎಂದು ಕೇಂದ್ರವನ್ನು ಮೋದಿ ತರಾಟೆಗೆ ತೆಗೆದುಕೊಂಡರು.

ಈ ರೀತಿ ಬಡವರನ್ನು ಉಪವಾಸದಲ್ಲಿ ಕೆಡವಿರುವ ಕೇಂದ್ರ ಸರಕಾರಕ್ಕೆ ಅವರು ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದರು.

ಯಾವುದೇ ಮಧ್ಯವರ್ತಿಗಳ ಪ್ರವೇಶವಿಲ್ಲದೆ ಬಡವರಿಗೆ ನೇರ ಯೋಜನೆಗಳನ್ನು ತಲುಪಿಸುವ ಯೋಜನೆಯು ಮೋದಿಯವರ ಕನಸಾಗಿದ್ದು, ಅದನ್ನು 'ಗರೀಬ್ ಕಲ್ಯಾಣ್ ಮೇಳ'ದ ಮುಖಾಂತರ ಪಸರಿಸುತ್ತಿದ್ದಾರೆ.

ಕೇಂದ್ರ ಸರಕಾರವು ಬಡವರಿಗೆಂದು 10 ರೂಪಾಯಿಗಳನ್ನು ಬಿಡುಗಡೆ ಮಾಡಿದರೆ ಅದು ಅವರ ಕೈಗೆ ತಲುಪುವಾಗ 1 ರೂಪಾಯಿ ಆಗಿರುತ್ತದೆ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದರು. ಆದರೆ ಇಂತಹ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ನಾನು ಆ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸಿದ್ದೇನೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ