ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಿಲಯೆನ್ಸ್‌ ಮುಖೇಶ್‌ಗಿದ್ದಂತೆ ಮುಂಬೈ ಮರಾಠಿಗದ್ದು: ಠಾಕ್ರೆ (Marathi | Mukesh Ambani | Shiv Sena | Bal Thackeray)
Bookmark and Share Feedback Print
 
ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು ಎಂದು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಉದ್ಯಮಿ ಮುಖೇಶ್ ಅಂಬಾನಿಯವರಿಗೆ ತಿರುಗೇಟು ನೀಡಿರುವ ಶಿವಸೇನಾ ಮುಖ್ಯಸ್ಥ ಬಾಳ್ ಠಾಕ್ರೆ, ರಿಲಯೆನ್ಸ್ ಮೇಲೆ ಅಂಬಾನಿಗೆ ಇರುವಷ್ಟೇ ಅಧಿಕಾರ ಮುಂಬೈ ಮೇಲೆ ಮರಾಠಿಗರಿಗಿದೆ ಎಂದಿದ್ದಾರೆ.

ರಿಲಯೆನ್ಸ್ ಕಂಪನಿ ಮೇಲೆ ಮುಖೇಶ್ ಅಂಬಾನಿ ಯಾವ ರೀತಿಯ ಹಕ್ಕು ಹೊಂದಿದ್ದಾರೋ, ಅದೇ ರೀತಿ ಮುಂಬೈ ಮೇಲೆ ಮರಾಠಿ ಜನತೆ ಹಕ್ಕು ಹೊಂದಿದ್ದಾರೆ. ಮುಂಬೈ ಮಹಾರಾಷ್ಟ್ರದ ರಾಜಧಾನಿ ಮತ್ತು ಅದು ರಾಜಧಾನಿಯಾಗಿಯೇ ಉಳಿಯುತ್ತದೆ. ಹಾಗಾಗಿ ಮುಂಬೈ ಮತ್ತು ಮರಾಠಿ ಮಾನೂಗಳ ಹಾದಿಯಲ್ಲಿ ಯಾರೂ ಮಧ್ಯ ಪ್ರವೇಶಿಸಬೇಡಿ ಎಂದು ಠಾಕ್ರೆ ಶಿವಸೇನೆಯ ಮುಖವಾಣಿ 'ಸಾಮ್ನಾ'ದಲ್ಲಿ ಬರೆದುಕೊಂಡಿದ್ದಾರೆ.

ಮುಂಬೈ, ಚೆನ್ನೈ ಮತ್ತು ದೆಹಲಿಗಳು ಎಲ್ಲಾ ಭಾರತೀಯರಿಗೆ ಸೇರಿದ್ದು ಎಂದು 'ಪಂಡಿತ್ ಮುಖೇಶ್ ಅಂಬಾನಿ' ಹೇಳುವಾಗ ಅಹಮದಾಬಾದ್, ಜಮ್ನಾನಗರ್ ಮತ್ತು ರಾಜಕೋಟ್‌ಗಳನ್ನು ಯಾಕೆ ಕೈ ಬಿಟ್ಟಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಠಾಕ್ರೆ ವ್ಯಂಗ್ಯವಾಡಿದ್ದಾರೆ.

ಮುಂಬೈಯಲ್ಲಿ ಟ್ಯಾಕ್ಸಿ ಪರವಾನಗಿ ಪಡೆಯಬೇಕಾದರೆ ಮರಾಠಿ ಕಡ್ಡಾಯ ಎಂಬ ಸರಕಾರದ ನೀತಿ ದುರದೃಷ್ಟಕರ ಎಂದು ವ್ಯಾಖ್ಯಾನಿಸಿದ್ದ ಅಂಬಾನಿ, ಮೆಟ್ರೋಪಾಲಿಟನ್ ನಗರಗಳು ಎಲ್ಲಾ ಭಾರತೀಯರಿಗೆ ಸೇರಿದ್ದು ಎಂದು ಹೇಳುವ ಮೂಲಕ ವಿವಾದಕ್ಕೆ ಸಿಲುಕಿದ್ದರು.

ನಾವೆಲ್ಲರೂ ಭಾರತೀಯರು ಎನ್ನುವುದು ಮೊದಲು. ಮುಂಬೈ, ಚೆನ್ನೈ ಮತ್ತು ದೆಹಲಿಗಳು ಎಲ್ಲಾ ಭಾರತೀಯರಿಗೂ ಸೇರಿದ್ದು. ಇದು ವಾಸ್ತವ ವಿಚಾರ ಎಂದು ಲಂಡನ್ ವಾಣಿಜ್ಯ ಶಾಲೆಯೊಂದರಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರಿಲಯೆನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಅಂಬಾನಿ ಅಭಿಪ್ರಾಯಪಟ್ಟಿದ್ದರು.

ಇದೇ ವಿಚಾರವಾಗಿ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೂ ಎಚ್ಚರಿಕೆ ನೀಡಿದ್ದ ಶಿವಸೇನೆ, ರಾಜಕೀಯಕ್ಕೆ ತಮ್ಮ ಮಧ್ಯಪ್ರವೇಶ ಬೇಕಾಗಿಲ್ಲ ಎಂದಿತ್ತು.

ಅವರು ಕ್ರಿಕೆಟಿನ ವಿಕೆಟಿಗೆ ಅಂಟಿಕೊಂಡಿದ್ದರೆ ಸಾಕು, ರಾಜಕೀಯದ ಪಿಚ್‌ನಲ್ಲಿ ಓಡಾಡುವುದು ಬೇಡ. ಮುಂಬೈಗೆ ಯಾರು ಬರಬೇಕು ಮತ್ತು ಬರಬಾರದು ಎಂಬುವುದನ್ನು ನಿರ್ಧರಿಸುವ ಹಕ್ಕು ನಮ್ಮದು, ಸಚಿನ್‌ದ್ದಲ್ಲ ಎಂದು ಠಾಕ್ರೆಯವರು ಕುಟುಕಿದ್ದರು.
ಸಂಬಂಧಿತ ಮಾಹಿತಿ ಹುಡುಕಿ