ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ಪರ ಮಾತಾಡಿದ್ರೆ ಸುಮ್ಮನಿರಲ್ಲ: ಶಾರುಖ್‌ಗೆ ಶಿವಸೇನೆ
(Shiv Sena, Kolkata Knight Riders, Shah Rukh Khan, My Name Is Khan, Pakistan, IPL)
ಇಂಡಿಯನ್ ಪ್ರೀಮಿಯರ್ ಲೀಗ್‌ನ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಆಟಗಾರರಿಗೆ ಬೆಂಬಲ ನೀಡಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಮಾಲಕ ಹಾಗೂ ಬಾಲಿವುಡ್ ನಟ ಶಾರೂಖ್ ಖಾನ್ ಹೇಳಿಕೆಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆ, ಅವರ ಮುಂದಿನ ಸಿನಿಮಾ 'ಮೈ ನೇಮ್ ಈಸ್ ಖಾನ್'ಗೆ ಬಹಿಷ್ಕಾರ ಹಾಕಲು ನಿರ್ಧರಿಸಿದೆ.
IFM
ಪಾಕಿಸ್ತಾನೀಯರನ್ನು ಹೊಗಳುವ ಯಾರನ್ನೂ ಸಹಿಸಿಕೊಳ್ಳಲು ನಮ್ಮಿಂದಾಗದು ಎಂದು ಶಿವಸೇನೆಯು ಶಾರುಖ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಫೆಬ್ರವರಿ 12ರಂದು ಬಿಡುಗಡೆಯಾಗಲಿರುವ ಚಿತ್ರವನ್ನು ತೆರೆಗೆ ಬರಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದೆ.
ಇಲ್ಲಿ ಪಾಕಿಸ್ತಾನದ ಆಟಗಾರರು ಆಡಬೇಕೆಂದು ಶಾರುಖ್ ಬಯಸುತ್ತಿದ್ದರೆ, ಅವರು ಕರಾಚಿ ಮತ್ತು ಇಸ್ಲಾಮಾಬಾದ್‌ಗೆ ಹೋಗಿ ಅವರೊಂದಿಗೆ ಆಡಲಿ. ಅವರ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಪಾಕಿಸ್ತಾನಿ ಆಟಗಾರರನ್ನು ಒಂದು ವೇಳೆ ಸೇರಿಸಿಕೊಂಡಲ್ಲಿ ಅದರ ಪರಿಣಾಮವನ್ನು ಎದುರಿಸಲು ಸಿದ್ಧರಾಗಬೇಕು ಎಂದು ಶಿವಸೇನೆಯ ವಕ್ತಾರ ಸಂಜಯ್ ರಾವುತ್ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ನಡೆದಿದ್ದ ಐಪಿಎಲ್ ಹರಾಜಿನಲ್ಲಿ ಪಾಕಿಸ್ತಾನದ ಆಟಗಾರರನ್ನು ಯಾವುದೇ ತಂಡ ಖರೀದಿಸದೇ ಇದ್ದುದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದ ಶಾರುಖ್, ಅವರನ್ನು ನಾವು ಸ್ವಾಗತಿಸಬೇಕಿತ್ತು ಎಂದಿದ್ದರು.
ಪಾಕಿಸ್ತಾನಿ ಆಟಗಾರರನ್ನು ತಂಡಗಳಿಗೆ ಆರಿಸಬೇಕಿತ್ತು. ಅವರು ನಿಯಮಾವಳಿಗಳ ಪ್ರಕಾರ ಲಭ್ಯರಿದ್ದಾರೆಂದರೆ ತಂಡಗಳಿಗೆ ಅವರನ್ನು ಆಯ್ಕೆಗೊಳಿಸುವ ಮೂಲಕ ಸ್ವಾಗತಿಸಬೇಕಿತ್ತು. ತಂಡಗಳ ಈ ನಿರ್ಧಾರ ತೀರಾ ವಿಷಾದನೀಯ ಎಂದು ಖಾನ್ ತಿಳಿಸಿದ್ದರು.
ಶಾರುಖ್ ಅವರ ಮುಂದಿನ ಚಿತ್ರವನ್ನು ನಾವು ಬಿಡುಗಡೆಯಾಗಲು ಬಿಡುವುದಿಲ್ಲ ಎಂದು ಥಾಣೆಯಲ್ಲಿನ ಶಿವಸೇನಾ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಅಲ್ಲಿನ ಮಾಲ್‌ಗಳ ಎದುರುಗಡೆ ಪೋಸ್ಟರ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.