ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೇನಾಧಿಕಾರಿ ವಿರುದ್ಧ ಕೋರ್ಟ್ ಮಾರ್ಷಲ್‌ಗೆ ಕಪೂರ್ ಆದೇಶ (Court martial | Avadhesh Prakash | A K Antony | Gen Deepak Kapoor)
Bookmark and Share Feedback Print
 
ಪಶ್ಚಿಮ ಬಂಗಾಲದ ಸುಖ್ನಾ ಭೂವಿವಾದಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವ ಎ.ಕೆ. ಆಂಟನಿ ನೀಡಿದ್ದ ಸೂಚನೆಯನ್ನು ಪಾಲಿಸಿರುವ ಸೇನಾ ಮುಖ್ಯಸ್ಥ ಜನರಲ್ ದೀಪಕ್ ಕಪೂರ್, ತನ್ನ ಆಪ್ತ ಹಾಗೂ ಲೆಫ್ಟಿನೆಂಟ್ ಜನರಲ್ ಅವದೇಶ್ ಪ್ರಕಾಶ್ ವಿರುದ್ಧ ಕೋರ್ಟ್ ಮಾರ್ಷಲ್‌ಗೆ ಶುಕ್ರವಾರ ಆದೇಶ ನೀಡಿದ್ದಾರೆ.

ಮಿಲಟರಿ ಕಾರ್ಯದರ್ಶಿಯವರನ್ನು ಸೇನಾ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸುವಂತೆ ರಕ್ಷಣಾ ಸಚಿವರು ಸಲಹೆ ನೀಡಿದ ಎರಡು ದಿನಗಳ ನಂತರ ಭೂಸೇನಾ ಮುಖ್ಯಸ್ಥರು ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.

ಸುಖ್ನಾ ಭೂ ಹಗರಣದಲ್ಲಿ ಸಿಲುಕಿರುವ ಅವದೇಶ್ ಕೋರ್ಟ್ ಮಾರ್ಷಲ್ ಎದುರಿಸಬೇಕಾಗಿದ್ದು, ಭೂಸೇನಾ ಮುಖ್ಯಸ್ಥರು ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶ ನೀಡಿದ್ದಾರೆ. ಈ ಪ್ರಕರಣದಲ್ಲಿ ಆಂಟನಿಯವರು ನೀಡಿದ ಸಲಹೆಯಂತೆ ಮಿಲಿಟರಿ ಮುಖ್ಯಸ್ಥರು ನಡೆದುಕೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಈ ಹಗರಣದಲ್ಲಿ ಸೇನಾಧಿಕಾರಿ ಅವದೇಶ್ ಅವರು ಇತರ ಇಬ್ಬರು ಸೇನಾಧಿಕಾರಿಗಳು ಮತ್ತು ಒಬ್ಬ ಮೇಜರ್ ಜನರಲ್ ಪಾಲ್ಗೊಂಡಿದ್ದಾರೆ. ಬಹುಕೋಟಿ ಭೂ ಹಗರಣದಲ್ಲಿ ಸಿಲುಕಿರುವ ನಾಲ್ಕು ಸೇನಾಧಿಕಾರಿಗಳಲ್ಲಿ ಅವದೇಶ್ ಹಿರಿಯರಾಗಿದ್ದು, ಜನವರಿ 31ರಂದು ನಿವೃತ್ತರಾಗಲಿದ್ದಾರೆ.

ಪಶ್ಚಿಮ ಬಂಗಾಲದ ಡಾರ್ಜಲಿಂಗ್‌ನ ಸುಖ್ನಾ ಮಿಲಿಟರಿ ನೆಲೆ ಪಕ್ಕದ 71 ಎಕರೆ ಭೂಮಿಯನ್ನು ಅವದೇಶ್ ಸಂಬಂಧಿಯೋರ್ವರಿಗೆ ಮಾರಾಟ ಮಾಡಲು ಕಾನೂನನ್ನು ಉಲ್ಲಂಘಿಸಿ ನಿರಕ್ಷೇಪಣಾ ಪತ್ರ ನೀಡಿದ್ದಾರೆ ಎಂದು ಅವದೇಶ್ ಮತ್ತು ಇತರ ಮೂವರು ಸೇನಾಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ತನಿಖೆ ನಡೆಸಿದ್ದ ಪೂರ್ವ ವಲಯ ಭೂಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವಿ.ಕೆ. ಸಿಂಗ್ ಶಿಫಾರಸು ಮಾಡಿದ್ದರು.

ಶಿಫಾರಸಿನ ನಂತರ ಸೇನಾ ಮುಖ್ಯಸ್ಥ ದೀಪಕ್ ಕಪೂರ್ ಅವರು ತನ್ನ ಆಪ್ತ ಎನ್ನಲಾದ ಅವದೇಶ್ ವಿರುದ್ಧ ಆಡಳಿತಾತ್ಮಕ ಕ್ರಮಕ್ಕೆ ಮಾತ್ರ ಆದೇಶ ನೀಡಿದ್ದರು. ಈ ಬಗ್ಗೆ ನೀಡಿದ್ದ ಶೋಕಾಸ್ ನೊಟೀಸಿಗೆ ಅವದೇಶ್ ಸ್ಪಷ್ಟನೆ ನೀಡಿದ್ದರು.

ಆದರೆ ಅವದೇಶ್ ವಿರುದ್ಧ ಕೇವಲ ಆಡಳಿತಾತ್ಮಕ ಕ್ರಮ ಕೈಗೊಂಡ ನಿರ್ಧಾರ ರಕ್ಷಣಾ ಸಚಿವರಿಗೆ ಸರಿ ಕಂಡು ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಕೋರ್ಟ್ ಮಾರ್ಷಲ್‌ಗೆ ಒಳಪಡಿಸುವಂತೆ ಕಪೂರ್ ಅವರಿಗೆ 'ಸಲಹೆ' ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ