ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜೀವ್ ಗಾಂಧಿ ಜಾಹೀರಾತಿಗೆ 2 ತಿಂಗಳಲ್ಲಿ 3 ಕೋಟಿ ವೆಚ್ಚ! (Rajiv glorified | Shastri ignored | Rajiv Gandhi | Lal Bahadur Shastri)
Bookmark and Share Feedback Print
 
PR
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜಾಹೀರಾತುಗಳಿಗಾಗಿ ಕೇಂದ್ರ ಸರಕಾರವು ಕೇವಲ ಎರಡು ತಿಂಗಳುಗಳಲ್ಲಿ ಬರೋಬ್ಬರಿ ಮೂರು ಕೋಟಿ ರೂಪಾಯಿಗಳನ್ನು ವ್ಯಯಿಸಿದೆ ಎಂಬ ಅಂಶ ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಬಹಿರಂಗವಾಗಿದೆ.

2009ರ ಜುಲೈ ತಿಂಗಳಿನಿಂದ ಆಗಸ್ಟ್ ತಿಂಗಳ ನಡುವಿನ ಎರಡು ತಿಂಗಳುಗಳ ಅವಧಿಯಲ್ಲಿ ರಾಜೀವ್ ಗಾಂಧಿ ಅವರನ್ನು ವೈಭವೀಕರಿಸುವ ಎಂಟು ಜಾಹೀರಾತುಗಳನ್ನು ಕೇಂದ್ರ ಸರಕಾರ ನೀಡಿದೆ. ಈ ಎಲ್ಲಾ ಜಾಹೀರಾತುಗಳಲ್ಲೂ ರಾಜೀವ್ ಅವರ ಭಾವಚಿತ್ರವಿತ್ತು. ಇದಕ್ಕೆ ವ್ಯಯಿಸಲಾದ ಒಟ್ಟು ಮೊತ್ತ 2,97,70,498 ರೂಪಾಯಿಗಳು!

ಮಾಜಿ ಪ್ರಧಾನಿಯೊಬ್ಬರಿಗೆ ಸರಕಾರ ಸಲ್ಲಿಸುವ ಗೌರವ ಎಂದು ಸಮರ್ಥನೆ ಮಾಡಿಕೊಳ್ಳುವ ಅಂಶಗಳಿಗೆ ಇಲ್ಲಿ ಕೊರತೆ ಕಾಣುವುದು ಇತರ ಪ್ರಧಾನಿಗಳನ್ನು ಕೇಂದ್ರ ನಿರ್ಲಕ್ಷಿಸಿರುವುದರಿಂದ.

ಮತ್ತೊಬ್ಬ ಮಾಜಿ ಪ್ರಧಾನಿ ಮತ್ತು ರಾಜೀವ್ ಗಾಂಧಿಯವರಷ್ಟೇ ಜನಪ್ರಿಯರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ 10 ವರ್ಷಗಳ ಅವಧಿಯಲ್ಲಿ ವ್ಯಯಿಸಿದ್ದು ಕೇವಲ 87 ಲಕ್ಷ ರೂಪಾಯಿ. ಅಂದರೆ ರಾಜೀವ್ ಗಾಂಧಿಯವರ ಜಾಹೀರಾತಿಗೆ ಎರಡು ತಿಂಗಳುಗಳಲ್ಲಿ ವೆಚ್ಚ ಮಾಡಿದ ಹಣದ ಮೂರನೇ ಒಂದು ಭಾಗವನ್ನು ಕಳೆದ 10 ವರ್ಷಗಳಲ್ಲಿ ಶಾಸ್ತ್ರಿಯವರ ಜಾಹೀರಾತಿಗೆ ಖರ್ಚು ಮಾಡಲಾಗಿದೆ!

2000-01ರಿಂದ 2009-2010ರ ನಡುವಿನ 10 ವರ್ಷಗಳ ಅವಧಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಐದು ಜಾಹೀರಾತುಗಳನ್ನು ಅವರ ಚಿತ್ರ ಸಹಿತ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ. ಇದಕ್ಕಾಗಿ 87,23,901 ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆ ಮೂಲಕ ವಿವರಗಳನ್ನು ಪಡೆದುಕೊಂಡಿರುವ ಅಜಯ್ ಮರಾಠೆ ಎಂಬವರು ವಿವರಣೆ ನೀಡಿದ್ದಾರೆ.

ರಾಜೀವ್ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಇಬ್ಬರೂ ಭಾರತದ ಮಾಜಿ ಪ್ರಧಾನಿಗಳು. ಇಬ್ಬರೂ ರಾಷ್ಟ್ರದ ಏಳಿಗೆ, ಪ್ರಗತಿಗಾಗಿ ಶ್ರಮಿಸಿದವರು. ಶಾಸ್ತ್ರಿಯವರು ಸ್ವಾತಂತ್ರ್ಯ ಹೋರಾಟ ಚಳುವಳಿಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡವರು. ಆದರೆ ಅವರುಗಳನ್ನು ನೆನಪಿಸಿಕೊಳ್ಳುವಾಗ ಈ ತಾರತಮ್ಯ ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಅದೇ ಹೊತ್ತಿಗೆ ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಹೊರತುಪಡಿಸಿ ಉಳಿದ ಪ್ರಧಾನ ಮಂತ್ರಿಗಳ ಜಾಹೀರಾತುಗಳನ್ನು ಚಿತ್ರ ಸಹಿತವಾಗಿ ಕೇಂದ್ರ ಪ್ರಕಟಿಸಿಲ್ಲ ಎಂಬ ಆಘಾತಕಾರಿ ಅಂಶವೂ ಮಾಹಿತಿ ಹಕ್ಕು ಕಾಯ್ದೆ ವರದಿಯಲ್ಲಿ ಬಹಿರಂಗವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ