ನಕ್ಸಲೀಯರನ್ನು ಮಾತುಕತೆಗೆ ಆಹ್ವಾನಿಸಿರುವ ಜಾರ್ಖಂಡ್ ಮುಖ್ಯಮಂತ್ರಿ ಶಿಬುಸೊರೇನ್ ಅವರ ಕ್ರಮವನ್ನು ನಕ್ಸಲರು ಸ್ವಾಗತಿಸಿದ್ದಾರೆ. ಪಾಟ್ನಾದಿಂದ ಸುಮಾರು 160ಕಿ.ಮೀ.ದೂರದಲ್ಲಿರು ಶಿರ್ಘಾಟಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಉತ್ತರ ಛತ್ತೀಸ್ಗಢದ ವಿಶೇಷ ಪ್ರದೇಶ ಸಮಿತಿಯ ಮಾವೋವಾದಿ ವಕ್ತಾರ ಗೋಪಾಲ್, ಮಾತುಕತೆಗೆ ಆಹ್ವಾನಿಸಿರುವ ಜಾರ್ಖಂಡ್ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದಿದ್ದಾರೆ.