ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ವಿಷಯದಲ್ಲಿ ಕೇಂದ್ರ ರಚಿಸಿರುವ ಸಮಿತಿಯ ವರದಿಗೆ ಕಾಲಮಿತಿ ಇರಬೇಕು ಎಂದು ಜಂಟಿ ಕ್ರಿಯಾಸಮಿತಿ ತಿಳಿಸಿದೆ. ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಲು ಕೇಂದ್ರಕ್ಕೆ ಜ.29ರ ಗಡುವು ನೀಡಿದ್ದ ಜಂಟಿ ಕ್ರಿಯಾ ಸಮಿತಿ, ಈ ಬಗ್ಗೆ ಕೇಂದ್ರ ರಚಿಸಿರುವ ಸಮಿತಿ ಡಿಸೆಂಬರ್ 9ರೊಳಗೆ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿದೆ.