ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನೇ ವಾದ ಮಂಡಿಸ್ತೇನೆ: ಹೈಕೋರ್ಟ್‌ಗೆ ನಳಿನಿ ಮೊರೆ (Nalini Sriharan | Madras High Court | Rajiv Gandhi | HC registrar)
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ಕೋರ್ಟ್‌ಗೆ ಹಾಜರಾಗಲು ಅನುಮತಿ ಹಾಗೂ ತನ್ನ ಪ್ರಕರಣದ ಕುರಿತು ತಾನೇ ಸ್ವತಃ ವಾದ ಮಂಡಿಸಲು ಅವಕಾಶ ನೀಡಬೇಕೆಂದು ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಒಂದು ವೇಳೆ ಹೈಕೋರ್ಟ್ ಇದಕ್ಕೆ ಅನುಮತಿ ನೀಡಿದ್ದಲ್ಲಿ ನಳಿನಿ ಮೊದಲ ಬಾರಿಗೆ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಲಿದ್ದಾರೆ. ನಳಿನಿ ಈಗಾಗಲೇ 19ವರ್ಷಗಳ ಕಾಲ ಜೈಲಿನಲ್ಲಿಯೇ ಕಳೆದಿದ್ದಾರೆ.
ನಳಿನಿ ಮೂರು ಸಾಲುಗಳುಳ್ಳ ಟೆಲಿಗ್ರಾಂ ಒಂದನ್ನು ಕಳುಹಿಸಿದ್ದಾರೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಕಚೇರಿ ತಿಳಿಸಿದೆ. ಪತ್ರದಲ್ಲಿ ನ್ಯಾಯಮೂರ್ತಿಗಳಾದ ಎಲಿಪ್ ಧರ್ಮ ರಾವ್ ಮತ್ತು ಎನ್.ಪಾಲ್ ವಸಂತ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಎದುರು ಬರುವ ಮೊದಲು ಪ್ರಕರಣದ ಬಗ್ಗೆ ವಾದ ಮಂಡಿಸಲು ನನಗೆ ಅವಕಾಶ ನೀಡಬೇಕೆಂದು ಕೋರಿದ್ದಾರೆ. ವಿಭಾಗೀಯ ಪೀಠ ಈ ಹಿಂದೆ ವಿಚಾರಣೆಯನ್ನು ಫೆ.5ಕ್ಕೆ ಮುಂದೂಡಿತ್ತು.
ಈ ಹಿಂದೆ ಸಲಹಾ ಸಮಿತಿ ಜೈಲಿನಲ್ಲಿರುವ ನಳಿನಿ ಉತ್ತಮ ನಡತೆ ನೋಡಿ ಅವಧಿಗೆ ಮುಂಚೆ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಿತ್ತು.