ಸಂಘ-ಪರಿವಾರ ಮತ್ತು ಬಿಜೆಪಿ ಗಾಂಧಿ ಬಗ್ಗೆ ಹೊಗಳುವುದು ತೆಗಳುವುದು ಒಂದು ಅಜೆಂಡಾವಾಗಿದೆ...ಆದರೆ ನೂತನ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಇದೀಗ ಒಂದು ಹೆಜ್ಜೆ ಮುಂದೆ ಹೋಗಿದ್ದು, ಬಡವರ ಪರ ಕಾಳಜಿ ವಿಷಯದಲ್ಲಿ ಮೋದಿ ಮತ್ತು ಗಾಂಧಿ ಒಂದೇ ಎಂದು ವಿಶ್ಲೇಷಿಸಿದ್ದಾರೆ!
ಮಹಾತ್ಮಾಗಾಂಧಿ ಅವರ ಹುಟ್ಟೂರಾದ ಗುಜರಾತ್‌ನ ಫೋರ್‌ಬಂದರ್‌ನ ಕೀರ್ತಿ ಮಂದಿರದಲ್ಲಿ ಶನಿವಾರ ನಡೆದ ಗಾಂಧೀಜಿಯ 61ನೇ ಪುಣ್ಯತಿಥಿ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಅವರು, ಗಾಂಧಿ ಸಿದ್ದಾಂತಗಳನ್ನು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಬಳಸಬೇಕೇ ಹೊರತು ಅಧಿಕಾರದ ಚುಕ್ಕಾಣಿ ಹಿಡಿಯಲು ಅಲ್ಲ ಎಂದು ಸಲಹೆ ನೀಡಿದರು. ಅಲ್ಲದೇ, ಬಡವರ ಪರ ಕಾಳಜಿ ವಿಚಾರದಲ್ಲಿ ಗಾಂಧೀಜಿ ಮತ್ತು ಮೋದಿ ಸಾಧನೆ ಒಂದೇ ಎಂದರು.
ಗಾಂಧೀಜಿ ಮತ್ತು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಕೂಡ ಏಕತೆ ಮತ್ತು ಸಮಾನತೆ ವಿಚಾರದಲ್ಲಿ ಒಂದೇ ದೃಷ್ಟಿಕೋನ ಹೊಂದಿದ್ದರು. ಹಳ್ಳಿಗಳ ಅಭಿವೃದ್ಧಿಯೇ ಗಾಂಧೀಜಿಯ ಅವರ ಮುಖ್ಯ ಗುರಿಯಾಗಿತ್ತು ಎಂದ ಅವರು, ಮೋದಿ ಗುರಿ ಕೂಡ ಅದೇ ಆಗಿದೆ ಎಂದು ಹೇಳಿದರು. ಎಂದು ಗಡ್ಕರಿ ಹೇಳಿದರು.