ದೇಶದ ಎಲ್ಲಾ ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ರಾಜಕೀಯಕ್ಕಿಂತ ವಿಭಿನ್ನವಾಗಿ ಯೋಚಿಸಿ, ಆ ನಿಟ್ಟಿನಲ್ಲಿ ಬೆಳೆದು ವಲಸೆಗಾರರ ಸಮಸ್ಯೆಗಳಿಗೆ ಒಂದು ಪರಿಹಾರ ಕಂಡುಕೊಳ್ಳುವಂತೆ ರಾಷ್ಟ್ರೀಯ ಸ್ವಯಂ ಸೇವಕ್ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ಕರೆ ನೀಡಿದ್ದಾರೆ.
ಸಮಸ್ತ ಭಾರತವೂ ಪ್ರತಿಯೊಬ್ಬ ಭಾರತೀಯನಿಗೂ ಸೇರಿದ್ದು. ಭಾರತೀಯರು ತಾವು ಇಚ್ಛಿಸಿದಲ್ಲಿ ತಮ್ಮ ಉದ್ಯೋಗ ಅರಿಸಿಕೊಂಡು ಹೋಗಬಹುದು. ಭಾಷೆ, ಜಾತಿ, ಉಪಜಾತಿ, ಪಂಗಡಗಳು, ಗುಂಪುಗಳು ಬೇರೆ, ಬೇರೆಯಾಗಿದ್ದರೂ ಎಲ್ಲರೂ ಭಾರತಾಂಬೆಯ ಮಕ್ಕಳು. ವಲಸೆಗಾರರ ಆಗಮನದಿಂದ ಉದ್ಯೋಗಾವಕಾಶಗಳ ಸಂಖ್ಯೆ ಕ್ಷೀಣಿಸಿದೆ ಎಂಬುದು ತಪ್ಪು ಅಭಿಪ್ರಾಯ. ಇದಕ್ಕೆ ಪರಿಹಾರ ಕಂಡುಹಿಡಿದುಕೊಳ್ಳುವುದು ಅನಿವಾರ್ಯ ಎಂದರು.
ಉಲ್ಫಾ ಉಗ್ರಗಾಮಿ ಸಂಘಟನೆಯೊಂದಿಗಿನ ಮಾತುಕತೆ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ದೇಶದ ಸಾರ್ವಭೌಮತ್ವ, ಏಕತೆ, ಸಾಮರಸ್ಯದ ವಿಷಯವನ್ನು ಹೊರತುಪಡಿಸಿ, ಬೇರೆ ಯಾವುದೇ ವಿಷಯವನ್ನು ಉಗ್ರ ಸಂಘಟನೆಯೊಂದಿಗೆ ಮುಕ್ತವಾಗಿ ಮಾತನಾಡಿ ಉಲ್ಭಣವಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.