ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಲಿಂಗಕಾಮ ಆದೇಶ ವಿರುದ್ಧ ಮುಸ್ಲಿಂ ಮಂಡಳಿ ಸು.ಕೋರ್ಟ್‌ಗೆ (Muslim law board | gay sex | decriminalising homosexuality | homosexuality)
Bookmark and Share Feedback Print
 
WD
ಇಬ್ಬರು ಒಪ್ಪಿಗೆ ಮೇರೆಗೆ ಸಲಿಂಗಕಾಮ ನಡೆಸಿದರೆ ಅದು ಅಪರಾಧವಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯ ನೀಡಿದ್ದ ಐತಿಹಾಸಿಕ ತೀರ್ಪಿನ ವಿರುದ್ಧ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸೋಮವಾರ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ.

ಸಲಿಂಗರತಿಯನ್ನು ಅಪರಾಧವಲ್ಲ ಎಂದು ಪರಿಗಣಿಸಿರುವುದು ಭಾರತೀಯ ಸಂಸ್ಕೃತಿ ಮತ್ತು ಸಮಾಜಕ್ಕೆ ದೊಡ್ಡ ಬೆದರಿಕೆಯಾಗಿದೆ ಎಂದು ಮುಸ್ಲಿಂ ಕಾನೂನು ಮಂಡಳಿಯು ಸುಪ್ರೀಂ ಕೋರ್ಟಿನಲ್ಲಿ ವಾದಿಸಿದೆ.

ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತಿರುವುದು ಇದೇ ಮೊದಲಲ್ಲ. 2009ರಲ್ಲಿ ಸುರೇಶ್ ಕೌಶಲ್ ಎಂಬ ಜ್ಯೋತಿಷಿಯೊಬ್ಬರು ಕೂಡ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಆಗ ಅಪೆಕ್ಸ್ ಕೋರ್ಟ್ ನಿರಾಕರಿಸಿತ್ತು. ಅಲ್ಲದೆ ಯೋಗ ಗುರು ಬಾಬಾ ರಾಮದೇವ್ ಕೂಡ ಸುಪ್ರೀಂ ಮೆಟ್ಟಿಲೇರಿದ್ದಾರೆ.

2009ರ ಜೂನ್ 2ರಂದು ದೆಹಲಿ ಹೈಕೋರ್ಟ್ ಸಲಿಂಗಕಾಮವನ್ನು ಅಪರಾಧವಲ್ಲ ಎಂದು ತೀರ್ಪು ನೀಡಿತ್ತು. ನ್ಯಾಯಮೂರ್ತಿಗಳಾದ ಎ.ಪಿ. ಶಾಹ್ ಮತ್ತು ಎಸ್. ಮುರಳೀಧರ್ ಅವರನ್ನೊಳಗೊಂಡ ಪೀಠವು ಈ ಐತಿಹಾಸಿಕ ನಿರ್ಣಯವನ್ನು ನೀಡಿತ್ತು.

ಇಬ್ಬರು ವಯಸ್ಕರು ಪರಸ್ಪರ ಸಮ್ಮತಿಯೊಂದಿಗೆ ಸಲಿಂಗಕಾಮ ನಡೆಸುವುದನ್ನು ಅಪರಾಧ ಎಂದು ಹೇಳುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಕೋರ್ಟ್ ಹೇಳಿತ್ತು.

ಭಾರತೀಯ ದಂಡ ಸಂಹಿತೆಯ 377ನೇ ಕಲಂ ಪ್ರಕಾರ, ಅನೈಸರ್ಗಿಕವಾಗಿ ಪುರುಷ, ಮಹಿಳೆ ಅಥವಾ ಪ್ರಾಣಿಗಳೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿದ ವ್ಯಕ್ತಿಗೆ ಜೀವಾವಧಿ ಅಥವಾ 10 ವರ್ಷಕ್ಕೂ ಹೆಚ್ಚು ಅವಧಿಯ ಶಿಕ್ಷೆಯನ್ನು ವಿಧಿಸಬಹುದು, ಜತೆಗೆ ದಂಡವನ್ನೂ ಕೂಡ ವಿಧಿಸಬಹುದಾಗಿತ್ತು. ಇದಕ್ಕೆ ಸೂಕ್ತ ತಿದ್ದುಪಡಿ ತರುವಂತೆ ಸರಕಾರಕ್ಕೆ ನ್ಯಾಯಾಲಯವು ಶಿಫಾರಸು ಮಾಡಿತ್ತು.

ಆರಂಭದಲ್ಲಿ ಕೇಂದ್ರ ಸರಕಾರವು ಈ ವಿಚಾರದಲ್ಲಿ ದ್ವಂದ್ವ ನೀತಿ ಹೊಂದಿತ್ತಾದರೂ ಬಳಿಕ ಯಾವುದೇ ವಿರೋಧ ವ್ಯಕ್ತಪಡಿಸಲು ಮುಂದಾಗಲಿಲ್ಲ. ಆದರೆ ಹಲವು ಹಿಂದೂ ಸಂಘಟನೆಗಳು ಮತ್ತು ಮುಸ್ಲಿಂ ಸಂಘಟನೆಗಳು ಸಲಿಂಗಕಾಮದ ಅಧಿಕೃತತೆಗೆ ವಿರೋಧ ವ್ಯಕ್ತಪಡಿಸಿದ್ದವು.
ಸಂಬಂಧಿತ ಮಾಹಿತಿ ಹುಡುಕಿ