ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಗುವಿನ ತಾಯ್ತಂದೆಯನ್ನು ಅಣ್ಣ-ತಂಗಿಯೆಂದು ತೀರ್ಪು ಕೊಟ್ಟರು! (Husband | wife | siblings | Haryana)
Bookmark and Share Feedback Print
 
ಮದುವೆಯಾಗಿ ಮೂರು ವರ್ಷಗಳ ಕಾಲ ಸುಖ ಸಂಸಾರ ನಡೆಸಿದ ಜೋಡಿಯೊಂದನ್ನು ಹರ್ಯಾಣದ ಪಂಚಾಯತಿ ಕಟ್ಟೆಯೊಂದು ಅಣ್ಣ-ತಂಗಿ ಎಂದು ಹೇಳುವ ಮೂಲಕ ಅಚ್ಚರಿಯ ತೀರ್ಪು ನೀಡಿದೆ. ಅದೂ ಮಗುವೊಂದರ ಜನ್ಮಕ್ಕೆ ಕಾರಣರಾದ ನಂತರ.

ಮೂರು ವರ್ಷಗಳ ಹಿಂದೆ ರೋಹ್ಟಕ್‌ನ ಖೇರಿ ಎಂಬ ಗ್ರಾಮದಲ್ಲಿ ಸತೀಶ್ ಬೇರ್ವಾಲ್ ಮತ್ತು ಕವಿತಾ ಬೈನಿವಾಲ್ ಪರಸ್ಪರ ಮದುವೆಯಾಗಿದ್ದರು. ಅದರ ಫಲವಾಗಿ 10 ತಿಂಗಳ ಗಂಡು ಮಗುವನ್ನೂ ಅವರು ಪಡೆದಿದ್ದಾರೆ.

ಆದರೆ ಇವರಿಬ್ಬರೂ ಒಂದೇ ವಂಶಕ್ಕೆ ಸೇರಿದ ರಕ್ತಸಂಬಂಧಿಗಳೆಂದು ತಿಳಿದುಕೊಂಡ ಗ್ರಾಮಸ್ಥರು ದಾಂಪತ್ಯದಲ್ಲಿ ಹುಳಿ ಹಿಂಡಿದ್ದಾರೆ. ತೀವ್ರ ವಿವಾದವಾದಾಗ ಇದು ಗ್ರಾಮದ ಪಂಚಾಯ್ತಿ ಕಟ್ಟೆಗೂ ತಲುಪಿದೆ. ಅವರು ಮದುವೆಯನ್ನೂ ಮುರಿದು ಹಾಕಿದ್ದಾರೆ.
Satish - Kavita
PR


ಜನವರಿ 30ರ ಶನಿವಾರ ವಿಶೇಷ ಸಭೆ ಸೇರಿದ ಗ್ರಾಮ ಮಂಡಳಿಯು ಸತೀಶ್-ಕವಿತಾರ ಮದುವೆಯನ್ನು ಅನೂರ್ಜಿತಗೊಳಿಸಿದ್ದಲ್ಲದೆ, ಅವರಿನ್ನು ಅಣ್ಣ-ತಂಗಿಯರಂತೆ ಬಾಳಬೇಕು ಎಂದು ತೀರ್ಪು ನೀಡಿದೆ.

ಮಗುವಿಗೆ ಸತೀಶ್ ತಂದೆಯಲ್ಲ, ಕೇವಲ ಪೋಷಕ ಮಾತ್ರ. ಕವಿತಾ ತಾಯಿಯಾಗಿರುತ್ತಾಳೆ. ಆದರೆ ತಂದೆಗೆ ಸಿಗಬೇಕಾದ ಎಲ್ಲಾ ಆಸ್ತಿಗಳಿಗೆ ಆತ ವಾರಸುದಾರನಾಗಿರುತ್ತಾನೆ ಎಂದೂ ಪಂಚಾಯ್ತಿ ಹೇಳಿದೆ.

ಆ ಹುಡುಗ-ಹುಡುಗಿಯ ನಡುವಿನ ಸಂಬಂಧವನ್ನು ನಾವು ಕಡಿದು ಹಾಕಿದ್ದು, ಸಹೋದರ-ಸಹೋದರಿಯೆಂದು ಘೋಷಿಸಿದ್ದೇವೆ. ಅವರ ಮಗ ಸತೀಶ್‌ನ ಆಸ್ತಿಗೆ ಹಕ್ಕುದಾರನಾಗಿರುತ್ತಾನೆ. ಸತೀಶ್ ಅವರ ತಂದೆ ಅಜಾದ್ ಸಿಂಗ್ ತನ್ನ ಮಗನಿಗೆ ಯಾವುದೇ ಆಸ್ತಿ ನೀಡುವಂತಿಲ್ಲ ಮತ್ತು ಮೂರು ಲಕ್ಷ ರೂಪಾಯಿಗಳನ್ನು ತನ್ನ ಮೊಮ್ಮಗನ ಹೆಸರಿನಲ್ಲಿ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಬೇಕು ಎಂದು ಗ್ರಾಮ ಪಂಚಾಯತ್‌ನ ಅಧ್ಯಕ್ಷ ಹವಾ ಸಿಂಗ್ ತಿಳಿಸಿದ್ದಾರೆ.

ಹಿಂದೂ ಧರ್ಮದ ಪ್ರಕಾರ ಒಂದೇ ಕುಲದ ಹುಡುಗ-ಹುಡುಗಿ ಮದುವೆಯಾಗುವುದು ನಿಷಿದ್ಧ.

10ರ ಹರೆಯದ ಮಗುವಿನೊಂದಿಗೆ ಕವಿತಾ ತವರು ಮನೆಗೆ ಹೋಗಬೇಕು. ಅವರಿಗೆ ನಾವು 28 ದಿನಗಳ ಕಾಲಾವಕಾಶ ನೀಡಿದ್ದೇವೆ. ಅಷ್ಟರೊಳಗೆ ಆದೇಶವನ್ನು ಪಾಲಿಸದೇ ಇದ್ದಲ್ಲಿ ನಾವು ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಪಂಚಾಯ್ತಿ ತಿಳಿಸಿದೆ.

ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕವಿತಾ, ತಾನು ಬದುಕುವುದಿದ್ದರೆ ಗಂಡನೊಂದಿಗೆ ಮಾತ್ರ, ಪಂಚಾಯ್ತಿಗೆ ನಮ್ಮನ್ನು ಬೇರೆ ಮಾಡಲು ಸಾಧ್ಯವಿಲ್ಲ. ನಮ್ಮ ಪುಟ್ಟ ಪಾಪು ಏನು ತಪ್ಪು ಮಾಡಿದ್ದಾನೆ ಎಂದು ಆಕೆ ಪ್ರಶ್ನಿಸಿದ್ದಾಳೆ.

ಈ ಬಗ್ಗೆ ಸತೀಶ್ ಮತ್ತು ಆತನ ತಂದೆ ಕೂಡ ಯಾವುದೇ ಮಾತನ್ನಾಡಲು ಹೆದರುತ್ತಿದ್ದಾರೆ. ಈ ವಿಚಾರದ ಬಗ್ಗೆ ಈಗೇನೂ ನಾನು ಹೇಳಲಾರೆ. ತೀರ್ಪನ್ನು ಮರು ಪರಿಶೀಲನೆ ನಡೆಸುವಂತೆ ನಾವು ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ