ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವರದಕ್ಷಿಣೆ ನೀಡದ್ದಕ್ಕೆ ಮಗನ ಮದುವೆ ರದ್ದುಗೊಳಿಸಿದ ಸಚಿವ (UP minister | dowry | wedding | Ayodhya Prasad Pal)
Bookmark and Share Feedback Print
 
ಮಾಯಾವತಿ ಸರಕಾರ ಮತ್ತೊಮ್ಮೆ ಕೆಟ್ಟ ಕಾರಣಕ್ಕಾಗಿ ಸುದ್ದಿಯಾಗಿದೆ. ಈ ಬಾರಿ ಅವರ ಸಂಪುಟ ಸಚಿವರೊಬ್ಬರು ವರದಕ್ಷಿಣೆಗಾಗಿ ಬೇಡಿಕೆ ಸಲ್ಲಿಸಿದ್ದಲ್ಲದೆ, ಮಗನ ಮದುವೆಯನ್ನು ಇದೇ ಕಾರಣಕ್ಕಾಗಿ ರದ್ದುಪಡಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ.

ಉತ್ತರ ಪ್ರದೇಶದ ಕ್ರೀಡಾ ಸಚಿವ ಅಯೋಧ್ಯಾ ಪ್ರಸಾದ್ ಪಾಲ್ ಎಂಬವರು ತನ್ನ ಮಗನ ಮದುವೆ ನಿಗದಿಪಡಿಸಿದ್ದರು. 50 ಲಕ್ಷ ರೂಪಾಯಿ ವರದಕ್ಷಿಣೆ ನೀಡಬೇಕೆಂದು ಸಚಿವರು ಬೇಡಿಕೆ ಮುಂದಿಟ್ಟದ್ದನ್ನು ಈಡೇರಿಸಲು ವಧುವಿನ ಕಡೆಯವರು ನಿರಾಕರಿಸಿದ್ದಕ್ಕೆ, ಮಗ ಓಂ ದತ್‌ ಎಂಬಾತನ ಮದುವೆಯನ್ನೇ ರದ್ದುಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

2008ರ ಅಕ್ಟೋಬರ್ ತಿಂಗಳಲ್ಲಿ ಚಿತ್ರಕೂಟದಲ್ಲಿನ ವೈದ್ಯರೊಬ್ಬರ ಪುತ್ರಿಯ ಜತೆ ಸಚಿವರ ಪುತ್ರನ ಮದುವೆ ನಿಶ್ಚಿತಾರ್ಥ ನಡೆದಿತ್ತು. ಆದರೆ ನಿಶ್ಚಿತಾರ್ಥ ಬಳಿಕ ಸಚಿವರ ಕುಟುಂಬ ಮದುವೆ ಮಾತುಕತೆಯಿಂದ ಹಿಂದಕ್ಕೆ ಸರಿದಿತ್ತು.

ಲೋಕಸಭಾ ಚುನಾವಣೆಗಿಂತಲೂ ಮೊದಲು ಈ ಮದುವೆ ನಡೆಯಬೇಕಾಗಿತ್ತು. ಆದರೆ ದಿನ ಹತ್ತಿರ ಬರುತ್ತಿದ್ದರೂ ಅವರ ಕಡೆಯವರನ್ನು ಭೇಟಿ ಮಾಡುವ ಯತ್ನಗಳು ಸಫಲವಾಗಲಿಲ್ಲ. ಮನೆಗೆ ಹೋದಾಗಲೂ ಅವರು ಭೇಟಿ ಮಾಡಲು ನಿರಾಕರಿಸಿದರು ಎಂದು ಸಚಿವರ ಪುತ್ರನ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗಿಯ ತಂದೆ ಡಾ. ಪ್ರಬಲ್ ಪ್ರತಾಪ್ ವಿವರಿಸಿದ್ದಾರೆ.

ಅವರ ವರದಕ್ಷಿಣೆ ಬೇಡಿಕೆಯನ್ನು ಪೂರೈಸಲು ತಮಗೆ ಸಾಧ್ಯವಾಗದೇ ಇರುವುದಕ್ಕೆ ಮದುವೆಯನ್ನು ರದ್ದುಗೊಳಿಸಲಾಯಿತು ಎಂದು ಹುಡುಗಿಯ ಕುಟುಂಬ ಆರೋಪಿಸಿದೆ.

ನೀವು 50 ಲಕ್ಷ ರೂಪಾಯಿ ವರದಕ್ಷಿಣೆ ಕೊಡುವವರೆಗೆ ಮದುವೆ ಸಾಧ್ಯವಿಲ್ಲ ಎಂದು ಸಚಿವರನ್ನು ಭೇಟಿಯಾಗುವ ಯತ್ನಗಳು ವಿಫಲಗೊಂಡ ನಂತರ ವರನ ತಾಯಿ ಮತ್ತು ಸಹೋದರಿಯರು ನನಗೆ ತಿಳಿಸಿದರು ಎಂದು ಪ್ರತಾಪ್ ತಿಳಿಸಿದ್ದಾರೆ.

ಈ ಮದುವೆಯಿಂದ ಹೊರ ಬಂದ ಸಚಿವರು ತನ್ನ ಮಗನಿಗೆ ಅಲಹಾಬಾದ್‌ನಲ್ಲಿನ ಇಂಜಿನಿಯರ್ ಮಗಳೊಂದಿಗೆ ನಿಶ್ಚಿತಾರ್ಥ ನಡೆಸಿದ್ದರು ಎಂದು ಹೇಳಲಾಗಿದೆ.

ಆದರೆ ಈ ಆರೋಪಗಳನ್ನು ಸಚಿವರು ನಿರಾಕರಿಸಿದ್ದಾರೆ. ಮದುವೆಯನ್ನು ರದ್ದುಗೊಳಿಸುವ ನಿರ್ಧಾರ ಪರಸ್ಪರ ಸಮಾಲೋಚನೆ ನಡೆಸಿದ ನಂತರ ತೆಗೆದುಕೊಂಡಿದ್ದಾಗಿತ್ತು. ಈಗ ಮಾಡುತ್ತಿರುವ ಆರೋಪಗಳು ತನ್ನ ಘನತೆಯನ್ನು ಮಣ್ಣುಪಾಲು ಮಾಡಲಲ್ಲದೆ ಮತ್ತೇನಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ