ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ 'ಇಟಾಲಿಯನ್ ಮಮ್ಮಿಯದ್ದಲ್ಲ': ರಾಹುಲ್‌ಗೆ ಠಾಕ್ರೆ (Italian mummy | Mumbai | Shiv Sena | Rahul Gandhi | Saamna)
ಶಿವಸೇನೆಯ ಧೋರಣೆ ವಿರುದ್ಧ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತ ಪ್ರತಿಯೊಬ್ಬ ಭಾರತೀಯನಿಗೂ ಸೇರಿದ್ದು ಎಂಬ ಹೇಳಿಕೆಗೆ ಶಿವಸೇನೆ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಸೋನಿಯಾಗಾಂಧಿ ಅವರ ವಿದೇಶಿ ಮೂಲವನ್ನೇ ಮತ್ತೊಮ್ಮೆ ಕೆದಕಿ ತಿರುಗೇಟು ನೀಡಿದೆ.
ಉತ್ತರ ಭಾರತದಿಂದ ಮಹಾರಾಷ್ಟ್ರಕ್ಕೆ ವಲಸೆ ಬಂದಿರುವವರನ್ನು ಶಿವಸೇನಾ ಮತ್ತು ಮಹಾರಾಷ್ಟ್ರ ನವ ನಿರ್ಮಾಣ್ ಸೇನಾ ನಿಂದಿಸಿದ ಒಂದು ದಿನದ ನಂತರ ರಾಹುಲ್ ಪಾಟ್ನಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಭಾರತದ ಯಾವುದೇ ಭಾಗದಲ್ಲಿ ಭಾರತೀಯನ ಮೇಲೆ ಹಲ್ಲೆ ನಡೆದರೆ ಸುಮ್ಮನಿರುವುದಿಲ್ಲ. ಭಾರತ ಪ್ರತಿಯೊಬ್ಬ ಭಾರತಿಯನಿಗೂ ಸೇರಿದ್ದು ಎಂದು ಹೇಳಿದ್ದರು.
ಮುಂಬೈ ಎಲ್ಲಾ ಭಾರತೀಯರಿಗೂ ಸೂಕ್ತ ಸ್ಥಳ. ಆದರೆ ಮುಂಬೈ ಇಟಾಲಿಯನ್ ಮಮ್ಮಿ(ಸೋನಿಯಾಗಾಂಧಿ)ಸ್ವತ್ತಲ್ಲ ಎಂದು ಠಾಕ್ರೆ ಶಿವಸೇನೆಯ ಮುಖವಾಣಿ ಸಾಮ್ನಾದ ಬುಧವಾರ ಸಂಚಿಕೆಯ ಸಂಪಾದಕೀಯದಲ್ಲಿ ಗಂಭೀರವಾಗಿ ಪ್ರಶ್ನಿಸಿದ್ದಾರೆ.
PTI
ಕಾಂಗ್ರೆಸ್ ಯುವರಾಜ ಪೂರ್ಣಪ್ರಮಾಣದಲ್ಲಿ ಒತ್ತಡಕ್ಕೆ ಒಳಗಾಗಿದ್ದಾರೆ. ಆ ನಿಟ್ಟಿನಲ್ಲಿಯೇ ರಾಹುಲ್ ಗಾಂಧಿ ಮರಾಠಿ ಜನರು ಮತ್ತು ಮಹಾರಾಷ್ಟ್ರಕ್ಕೆ ಅಪಮಾನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಅಲ್ಲದೇ, ಮುಂಬೈಗೆ ಯಾರು ಬೇಕಾದ್ರೂ ಬಂದು ಠಿಕಾಣಿ ಹೂಡಬಹುದು ಎಂಬುದಕ್ಕೆ ಮುಂಬೈ ಧರ್ಮಶಾಲೆ(ಗೆಸ್ಟ್ ಹೌಸ್) ಅಲ್ಲ ಎಂಬುದಾಗಿಯೂ ಬಲವಾಗಿ ಪ್ರತಿಪಾದಿಸಿದ್ದಾರೆ.
1920ರಲ್ಲಿ ನಡೆದ ಸಂಯುಕ್ತ ಮಹಾರಾಷ್ಟ್ರ ಚಳವಳಿ ಸಂದರ್ಭದಲ್ಲಿ ಸುಮಾರು 105ಮಂದಿ ತಮ್ಮ ಜೀವವನ್ನು ಬಲಿದಾನ ನೀಡುವ ಮೂಲಕ ಮುಂಬೈ ಧರ್ಮಶಾಲಾವಾಗಿ ಪರಿವರ್ತನೆಗೊಂಡಿತ್ತು ಎಂದು ಇತಿಹಾಸವನ್ನು ಕೆದಕುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಮುಂಬೈ ದಾಳಿ ಸಂದರ್ಭದಲ್ಲಿ ಬಿಹಾರಿ ಕಮಾಂಡೋಗಳು ಮಹಾರಾಷ್ಟ್ರವನ್ನು ರಕ್ಷಿಸಿದ್ದಾರೆಂಬ ರಾಹುಲ್ ಹೇಳಿಕೆ ಮರಾಠಿ ಹಾಗೂ ಆ ಸಂದರ್ಭದಲ್ಲಿ ಹುತಾತ್ಮರಾದ ಅಧಿಕಾರಿಗಳಿಗೆ ಮಾಡಿದ ಅವಮಾನ ಎಂದು ಶಿವಸೇನಾ ವರಿಷ್ಠ ಬಾಳಠಾಕ್ರೆ ಸಂಪಾದಕೀಯದಲ್ಲಿ ತಿಳಿಸಿದ್ದಾರೆ. ಮುಂಬೈ ಮುಂದೆ ಮಹಾರಾಷ್ಟ್ರ ಮತ್ತು ಮರಾಠಿಗರದ್ದಾಗಲಿದೆ ಎಂದು ಆಶಯ ವ್ಯಕ್ತಪಡಿಸಿರುವ ಸೇನೆ, ತನ್ನ ಮರಾಠಿಪ್ರೇಮವನ್ನು ಮತ್ತೆ ಹೊರಹಾಕಿದೆ.