ಹಿಂದಿನ 108 ವರ್ಷಗಳ ಪೈಕಿ ಕಳೆದ ವರ್ಷ (2009) ಭಾರತದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. 2009ರ ಸರಾಸರಿ 24.64ರಷ್ಟು ತಾಪಮಾನ ದಾಖಲಾಗಿದ್ದು ಇದು 108 ವರ್ಷಗಳಲ್ಲೇ ಅತ್ಯಧಿಕ ಸರಾಸರಿ ತಾಪಮಾನವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೇಶದ 500 ಉಷ್ಣಾಂಶ ದಾಖಲು ಕೇಂದ್ರಗಳಿಂದ ಕಲೆ ಹಾಕಲಾಗಿರುಲ ಅಂಕಿ ಅಂಶಗಳ ಆಧಾರದಲ್ಲಿ ಕಳೆದ ವರ್ಷದ ತಾಪಮಾನ ಈವರೆಗಿನ ಅತ್ಯಂತ ಹೆಚ್ಚಿನ ತಾಪಮಾನ ಎಂದು ತಿಳಿದು ಬಂದಿದೆ.
1931ರಿಂದ 1960 ಹಾಗೂ 1961ರಿಂದ 1990ರ ಅವಧಿಗಳಲ್ಲಿ ಸರಾಸರಿ ತಾಪಮಾನದ ಲೆಕ್ಕಾಚಾರದಲ್ಲಿಯೂ 2009ರ ಇಸವಿಯಲ್ಲಿ ಭಾರತ ಕಂಡ ಸರಾಸರಿ ತಾಪಮಾನವೇ ಅತಿ ಹೆಚ್ಚು ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.