ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್ ಗಾಂಧಿಯನ್ನು ಫಾಲೋ ಮಾಡ್ತಿದ್ದಾರೆ ಮೋದಿ: ಕಾಂಗ್ರೆಸ್ (pro-rich | pro-poor | Narendra Modi | Garib Kalyan Melas)
Bookmark and Share Feedback Print
 
ತನ್ನ 'ಶ್ರೀಮಂತ ಪರ' ಅಭಿಪ್ರಾಯವನ್ನು 'ಬಡವರ ಪರ' ಎಂದು ಬದಲಾಯಿಸಲು ಯತ್ನಿಸುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯವರನ್ನು ಅನುಕರಿಸಲು ಯತ್ನಿಸುತ್ತಿದ್ದಾರೆ; ಆದರೆ ಬಿಜೆಪಿಯ ಬಣ್ಣ ಜನತೆಗೆ ಚೆನ್ನಾಗಿ ತಿಳಿದಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಗುಜರಾತ್‌ನ ಸಿಇಒ ಎಂದೇ ಜನಪ್ರಿಯವಾಗಿರುವ ಮೋದಿ ಇತ್ತೀಚಿನ ದಿನಗಳಲ್ಲಿ ರಾಜ್ಯದಾದ್ಯಂತ 'ಗರೀಬ್ ಕಲ್ಯಾಣ್ ಮೇಳ'ಗಳನ್ನು ನಡೆಸುತ್ತಿರುವುದನ್ನು ಟೀಕಿಸಿರುವ ಕಾಂಗ್ರೆಸ್, ಮೋದಿ ಇಮೇಜ್ ಬದಲಾವಣೆಗೆ ಯತ್ನಿಸುತ್ತಿದ್ದಾರೆ; ಅವರ ಶ್ರೀಮಂತಪರ ಧೋರಣೆಗಳನ್ನು ಬಡವರ ಪರ ತೋರಿಸಿಕೊಳ್ಳುವ ಮೂಲಕ ಬದಲಾವಣೆಗೆ ಯತ್ನಿಸುತ್ತಿರುವುದು 'ಹಗಲುವೇಷ' ಮತ್ತು 'ತಮಾಷೆ' ಎಂದಿದೆ.

ರಾಜ್ಯದಾದ್ಯಂತ ಸುಮಾರು 50 ಇಂತಹ ಮೇಳಗಳನ್ನು ನಡೆಸಲುದ್ದೇಶಿಸಿರುವ ಮೋದಿ ಈಗಾಗಲೇ 25 ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ತನ್ನ ಐದು ವರ್ಷಗಳ ಆಡಳಿತಾವಧಿಯಲ್ಲಿ ಕಾರ್ಪೊರೇಟ್ ವ್ಯಕ್ತಿತ್ವವನ್ನು ದೀನರ ವ್ಯಕ್ತಿತ್ವವನ್ನಾಗಿ ಮಾರ್ಪಡಿಸಿಕೊಳ್ಳಬೇಕೆಂದು ಹೊರಟಿರುವ ಮೋದಿ, ಸರಕಾರದ ಹಲವು ಯೋಜನೆಗಳನ್ನು ಮಧ್ಯವರ್ತಿಗಳಿಲ್ಲದೆ ನೇರವಾಗಿ ಜನತೆಗೆ ತಲುಪಿಸಿದ್ದೇನೆ ಎಂದು ಹೇಳುತ್ತಿದ್ದಾರೆ.

ಆದರೆ ಇದನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದ್ದು, ಇಮೇಜ್ ಬದಲಾವಣೆಯೇ ಹಾಸ್ಯಾಸ್ಪದ ಎಂದಿದೆ.

ಅವರು 'ಗರೀಬ್ ಕಲ್ಯಾಣ್ ಮೇಳ'ದಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ರೀಮಂತಪರ ಇಮೇ‌ಜ್‌ನಿಂದ ಬಡವರ ಪರ ಎಂದು ತೋರಿಸಿಕೊಳ್ಳುವ ಯತ್ನ ಎಂಬುದು ಸ್ಪಷ್ಟ. ಆದರೆ ಮೋದಿಯವರು ಇದರಲ್ಲಿ ವೈಫಲ್ಯತೆ ಕಾಣಲಿದ್ದಾರೆ. ಅವರು ರಾಹುಲ್ ಗಾಂಧಿಯವರನ್ನು ಅನುಕರಿಸಲು ಯತ್ನಿಸುತ್ತಿದ್ದಾರೆ. ಆದರೆ ಜನತೆಗೆ ಬಿಜೆಪಿಯ ಬಣ್ಣ ಏನೆಂಬುದು ಗೊತ್ತು ಎಂದು ಕಾಂಗ್ರೆಸ್ ವಕ್ತಾರ ಮನೀಷ್ ದೋಶಿ ತಿಳಿಸಿದ್ದಾರೆ.

ಬಡವರು ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ಗೇ ಓಟು ಹಾಕಿದ್ದಾರೆ. ಆದರೆ ಬಿಜೆಪಿಯ ಓಟ್ ಬ್ಯಾಂಕ್ ಇರುವುದು ಶ್ರೀಮಂತರಲ್ಲಿ. ಇಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮೋದಿಯವರು ಬಡವರ ಮೆಚ್ಚುಗೆ ಗಳಿಸಲು ಯತ್ನಿಸುತ್ತಿರುವುದೇ ತಮಾಷೆ ಎಂದು ಮತ್ತೊಬ್ಬ ಕಾಂಗ್ರೆಸ್ ಹಿರಿಯ ನಾಯಕ ಅರ್ಜುನ್ ಮೋದ್ವಾಡಿಯಾ ಕುಟುಕಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ