ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈಯನ್ನು 'ಬಾಂಬೆ' ಎಂದ ರಾಹುಲ್‌ ಗಾಂಧಿಗೆ ಠಾಕ್ರೆ ತರಾಟೆ (Rahul Gandhi | Shiv Sena | Mumbai | Bombay)
Bookmark and Share Feedback Print
 
ಇತ್ತೀಚೆಗಷ್ಟೇ ಮುಂಬೈಗೆ ಭೇಟಿ ನೀಡಿದ್ದ 'ಕಾಂಗ್ರೆಸ್ ಯುವರಾಜ' ರಾಹುಲ್ ಗಾಂಧಿಯವರು ನಗರವನ್ನು 'ಬಾಂಬೆ' ಎಂದು ಕರೆದಿರುವುದಕ್ಕೆ ಶಿವಸೇನೆ ಅಸಮಾಧಾನಗೊಂಡಿದ್ದು, ತೀವ್ರವಾಗಿ ಖಂಡಿಸಿದೆ.

ಮುಂಬೈಯಲ್ಲಿ ಭಾಷಣ ಮಾಡುತ್ತಿದ್ದ ರಾಹುಲ್ ಗಾಂಧಿ ಪದೇ ಪದೇ ಮುಂಬೈಯನ್ನು 'ಬಾಂಬೆ' ಎಂದೇ ಹೇಳುತ್ತಿದ್ದರು. ಮಹಾರಾಷ್ಟ್ರದಿಂದ ಮುಂಬೈಯನ್ನು ಪ್ರತ್ಯೇಕಗೊಳಿಸಲು ಯತ್ನಿಸುವವರು ಮಾತ್ರ ಮುಂಬೈಯನ್ನು 'ಬಾಂಬೆ' ಎಂದು ಕರೆಯುತ್ತಾರೆ ಎಂದು ಶಿವಸೇನೆ ಮುಖವಾಣಿ 'ಸಾಮ್ನಾ'ದಲ್ಲಿ ಬರೆದಿರುವ ಸಂಪಾದಕೀಯದಲ್ಲಿ ಪಕ್ಷದ ವರಿಷ್ಠ ಬಾಳಾ ಠಾಕ್ರೆ ಹೇಳಿದ್ದಾರೆ.

ಮುಂಬೈ ಪ್ರವಾಸ ಮಾಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಎರಡು ಸಾರ್ವಜನಿಕ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದರು. ದಲಿತರ ಕೇರಿಗಳಿಗೂ ಭೇಟಿ ನೀಡಿದ್ದ ಅವರು ಮಾತನಾಡುತ್ತಾ ಮುಂಬೈಯನ್ನು ಬಾಂಬೆ ಎಂದು ಉದ್ದೇಶಪೂರ್ವಕವಾಗಿ ಕರೆದಿದ್ದರು ಎಂದು ಶಿವಸೇನೆ ಆರೋಪಿಸಿದೆ.

ಪೋರ್ಚುಗೀಸರು ಭಾರತಕ್ಕೆ ಬಂದ 16ನೇ ಶತಮಾನದ ಸಂದರ್ಭದಲ್ಲಿ ಈಗಿನ ಮುಂಬೈಯನ್ನು ಅವರು 'ಬಾಂಬಿಯಂ' ಎಂದು ಕರೆದಿದ್ದರು. ನಂತರದ ವರ್ಷಗಳಲ್ಲಿ ಇದು 'ಬಾಂಬಿ'ಯೆಂದು ಕರೆಸಲ್ಪಟ್ಟು ಕೊನೆಗೆ 'ಬಾಂಬೆ' ಎಂಬಲ್ಲಿಗೆ ಸ್ಥಿರವಾಗಿತ್ತು. ಆದರೆ ಇದನ್ನು ಮರಾಠೀಕರಣಗೊಳಿಸಲು ಶತಯತ್ನ ನಡೆಸಿದ ಠಾಕ್ರೆ 1995ರಲ್ಲಿ 'ಮುಂಬೈ' ಎಂದು ಬದಲಾಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಅದೇ ಹೊತ್ತಿಗೆ 39ರ ಹರೆಯದ ಗಾಂಧಿಯ ಮುಂಬೈ ಭೇಟಿಯ ಬಗ್ಗೆ ಲೇವಡಿ ಮಾಡಿರುವ ಠಾಕ್ರೆ, ಮರಾಠಿ ಜನರೊಳಗಿನಿಂದ ಕಿತ್ತೊಗೆಯುವ 'ಕಾಂಗ್ರೆಸ್ಸಿನ ಶವಯಾತ್ರೆ' ಎಂದು ಬಣ್ಣಿಸಿದ್ದಾರೆ.

ರಾಹುಲ್ ಗಾಂಧಿ ಮುಂಬೈಯಲ್ಲಿದ್ದಾಗ ಅವರ ಶೂಗಳನ್ನು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ರಮೇಶ್ ಬಾಗ್ವೆಯವರು ಸುರಕ್ಷಿತವಾಗಿಡಲು ಎತ್ತಿಕೊಂಡು ಹೋಗುತ್ತಿರುವ ಚಿತ್ರಣಕ್ಕೆ 'ರಾಹುಲ್ ಗಾಂಧಿಯೆಂದರೆ ಮಹಾತ್ಮಾ ಗಾಂಧಿಯಲ್ಲ. ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುತ್ತಿರುವುದಕ್ಕೆ ಅವರಿಗೆ ನಾಚಿಕೆಯಾಗಬೇಕು' ಎಂದು ಜರೆದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ