ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರೈತನ ಭೂಮಿ ಕಬಳಿಸಿದ ರಾಷ್ಟ್ರಪತಿಯ ಗಂಡ; ವಾಪಸಿಗೆ ಆದೇಶ (President’s husband | Mumbai | Pratibha Patil | Devi Singh Shekhawat)
Bookmark and Share Feedback Print
 
ಮಹಾರಾಷ್ಟ್ರದ ಅಮರಾವತಿಯಲ್ಲಿನ ದಲಿತ ರೈತನೊಬ್ಬನ ಭೂಮಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಗಂಡ ತಪ್ಪಿತಸ್ಥ ಎಂದು ಸಾಬೀತಾಗಿದ್ದು, ಭೂಮಿಯನ್ನು ವಾಪಸ್ ಮಾಡುವಂತೆ ಆದೇಶ ನೀಡಲಾಗಿದೆ.

ಅಮರಾವತಿ ಜಿಲ್ಲೆಯ ಚಂದ್ರಾಪುರ ಖಲ್ಲಾರ್ ಗ್ರಾಮದ ಕಿಶೋರ್ ಬಾನ್ಸೂದ್‌ ಎಂಬ ದಲಿತ ರೈತನ 2.25 ಎಕರೆ ಜಮೀನನ್ನು ದೇವಿ ಸಿಂಗ್ ಶೇಖಾವತ್ 2009ರಲ್ಲಿ ತನ್ನ ಹೆಸರಿಗೆ ಬರೆಸಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು. ಆದರೆ ಇಲ್ಲಿನ ನ್ಯಾಯಾಲಯವು ಶೇಖಾವತ್ ಅವರಿಂದ ಬಾನ್ಸೂದ್ ಹೆಸರಿಗೆ ಭೂಮಿಯನ್ನು ವರ್ಗಾಯಿಸುವಂತೆ ತೀರ್ಪು ನೀಡಿತ್ತು.

ಇದೀಗ ಆದೇಶ ಹೊರಡಿಸಿರುವ ದರ್ಯಾಪುರದ ಉಪ ವಿಭಾಗಾಧಿಕಾರಿಯವರು, ಶೇಖಾವತ್ ಹೆಸರಿನಲ್ಲಿರುವ ಜಮೀನನ್ನು ಬಾನ್ಸೂದ್ ಹೆಸರಿಗೆ ವರ್ಗಾಯಿಸುವಂತೆ ಸೂಚನೆ ನೀಡಿದ್ದಾರೆ. 2009ರ ಡಿಸೆಂಬರ್ ತಿಂಗಳಲ್ಲೇ ಈ ಆದೇಶವನ್ನು ಹೊರಡಿಸಲಾಗಿತ್ತಾದರೂ, ರೈತನ ಕೈಗೆ ಈಗಷ್ಟೇ ಸಿಕ್ಕಿದೆ.

ಶೇಖಾವತ್ ಅವರ ಅಳಿಯ ಭಾನ್ವರ್ಸಿಂಗ್ ಲಾಲ್ಸಿಂಗ್ ಶೇಖಾವತ್ ಸೇರಿದಂತೆ ಏಳು ಮಂದಿಗೆ ಕಳೆದ ವರ್ಷ ಉಪವಿಭಾಗಾಧಿಕಾರಿಗಳ ಕಚೇರಿ ನೊಟೀಸ್ ಜಾರಿ ಮಾಡಿತ್ತು.

ತನಗೆ ಆಧಾರವಾಗಿದ್ದ ಸ್ವಲ್ಪವೇ ಜಮೀನು ಕೂಡ ತನ್ನ ಹೆಸರಿನಿಂದ ಬೇರೆಯವರ ಹೆಸರಿಗೆ ವರ್ಗಾವಣೆಯಾಗಿರುವುದನ್ನು ಕಂಡು ಭೀತಿಗೊಳಗಾಗಿದ್ದ ರೈತ ಅಧಿಕಾರಿಗಳಿಗೆ ದೂರು ನೀಡಿದ್ದ. ಈ ಸಂದರ್ಭದಲ್ಲಿ ಸ್ಥಳೀಯ ಆಡಳಿತ ತನಿಖೆಯನ್ನು ನಡೆಸಿ, ಶೇಖಾವತ್ ಮತ್ತು ಅವರ ಸಂಬಂಧಿಗಳು ಈ ಕೃತ್ಯ ನಡೆಸಿದ್ದಾರೆ ಎಂದು ಹೇಳಿತ್ತು.

ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ರಾಷ್ಟ್ರಪತಿ ಭವನ ನಿರಾಕರಿಸಿದೆ. ರಾಷ್ಟ್ರಪತಿಯವರ ಗಂಡ ಓರ್ವ ಸಾಮಾನ್ಯ ನಾಗರಿಕನಾಗಿದ್ದು, ಯಾವುದೇ ವಿಶೇಷ ಅಧಿಕಾರ ಅಥವಾ ಸೌಲಭ್ಯಗಳನ್ನು ಪಡೆಯುತ್ತಿಲ್ಲ ಎಂದಷ್ಟೇ ಹೇಳಿಕೆಯಲ್ಲಿ ತಿಳಿಸಿದೆ.

1985-86ರಲ್ಲಿ ಬಾನ್ಸೂದ್ ತಂದೆ ಮೂರು ಎಕರೆ ಜಮೀನನ್ನು ಖರೀದಿಸಿದ್ದರು. ಆದರೆ ಇದನ್ನು ನಾಗ್ಪುರದಲ್ಲಿನ ಬಾಂಬೆ ಹೈಕೋರ್ಟ್ ಪೀಠದ ಆದೇಶದ ಬಳಿಕ ಶೇಖಾವತ್ ಇದನ್ನು ವಶಕ್ಕೆ ತೆಗೆದುಕೊಂಡಿದ್ದರು. ಇದನ್ನು ಕಳೆದ ವರ್ಷ ಬಾನ್ಸೂದ್ ಮತ್ತೊಂದು ಪೀಠದಲ್ಲಿ ಪ್ರಶ್ನಿಸಿದ್ದ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ