ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಗ್ರರ 'ತರಬೇತಿ ತಾಣ' ಅಜಂಗಢಕ್ಕೆ ಭೇಟಿ ನೀಡಲಿರುವ ರಾಹುಲ್ (Rahul Gandhi | Azamgarh | Congress | Uttar Pradesh)
Bookmark and Share Feedback Print
 
ಉಗ್ರರ ತರಬೇತಿ ತಾಣವೆಂದೇ ಗುರುತಿಸಲಾಗುತ್ತಿರುವ ಉತ್ತರ ಪ್ರದೇಶದ ಅಜಂಗಢಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಭೇಟಿ ನೀಡಿ ಅಲ್ಲಿನ ಕಾಲೇಜು ವಿದ್ಯಾರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರ ಜತೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.

ಶಿಬ್ಲಿ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಗಳು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲು ಉತ್ಸುಕತೆಯಿಂದಿದ್ದಾರೆ. ಅವರನ್ನು ರಾಜ್ಯಕ್ಕೆ ಕಳುಹಿಸುವಂತೆ ನಮ್ಮಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ ಎಂದು ಪಕ್ಷದ ನಾಯಕಿ ರೀಟಾ ಬಹುಗುಣ ಜೋಷಿ ತಿಳಿಸಿದ್ದಾರೆ.

ಆದರೆ ಈ ಭೇಟಿ ಪ್ರಸ್ತಾಪವನ್ನು ಬಿಜೆಪಿ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಕಾಂಗ್ರೆಸ್ ನಾಯಕನ ಅಜಂಗಢ ಭೇಟಿಯಿಂದಾಗಿ ಕೋಮು ರಾಜಕೀಯ ಮತ್ತು ಭಯೋತ್ಪಾದನೆಯನ್ನು ಬೆಂಬಲಿಸಿದಂತಾಗುತ್ತದೆ ಎಂದು ಬಿಜೆಪಿ ಟೀಕಿಸಿದೆ.

ರಾಹುಲ್ ಭೇಟಿಯ ದಿನಾಂಕವನ್ನು ನಿರ್ದಿಷ್ಟವಾಗಿ ಹೇಳಲು ನಿರಾಕರಿಸಿರುವ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿಯವರು ಉತ್ತರ ಪ್ರದೇಶ ಪ್ರವಾಸ ಮಾಡುವ ಸಂದರ್ಭದಲ್ಲಿ ಭೇಟಿಯ ಕುರಿತು ನಿರ್ಧರಿಸಲಾಗುತ್ತದೆ ಎಂದರು.

ಜೋಷಿ ಮತ್ತು ಅವರೊಂದಿಗೆ ಕಳೆದ ವಾರ ಅಜಂಗಢಕ್ಕೆ ಭೇಟಿ ನೀಡಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್‌ರವರು ಈ ಸಂಬಂಧ ಸೋನಿಯಾ ಗಾಂಧಿಯವರಿಗೆ ವಿದ್ಯಾರ್ಥಿಗಳ ಬೇಡಿಕೆಯನ್ನು ತಲುಪಿಸಿದ್ದಾರೆ.

ಅಜಂಗಢವನ್ನು ಭಯೋತ್ಪಾದನೆಯ ತಾಣ ಎಂದು ಗುರುತಿಸಲಾಗುತ್ತಿದ್ದು, ರಾಹುಲ್ ಗಾಂಧಿಯವರ ಭೇಟಿಯಿಂದ ಇದು ಬದಲಾಗಬಹುದು. ಅಲ್ಲಿನ ಯುವಜನತೆಯ ಮನಸ್ಸಿನ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತಿದೆ ಎಂದು ಆಕೆ ತಿಳಿಸಿದ್ದಾರೆ.

ದೇಶದ ಬೃಹತ್ ಗ್ರಂಥಾಲಯಗಳಲ್ಲೊಂದಾದ ಕಾಲೇಜು ಇದಾಗಿದ್ದು, ಇದಕ್ಕೆ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮಾ ಗಾಂಧಿ, ಜವಾಹರ ಲಾಲ್ ನೆಹರು ಮತ್ತು ಮೌಲಾನ ಅಬುಲ್ ಕಲಾಂ ಆಜಾದ್ ಮುಂತಾದ ಖ್ಯಾತರು ಭೇಟಿ ನೀಡಿದ್ದರು. ಇದೊಂದು ಶ್ರೇಷ್ಠ ವಿದ್ಯಾಸಂಸ್ಥೆಯಾಗಿದೆ. ಅಲ್ಲದೆ ಸಂಸ್ಕೃತಿಯ ಬಿಂಬವನ್ನು ಇಲ್ಲಿ ಕಾಣಬಹುದಾಗಿದೆ ಎಂದು ಜೋಷಿ ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ